ಶಿವಮೊಗ್ಗ, ಮಾ.03:

ಬಿಜೆಪಿ ಶಾಸಕರಿಗೆ ಹಿಂದೂ ಧರ್ಮದ ಮಂತ್ರವೇ ಮುಖ್ಯವಲ್ವೇ…? ಆದರೆ ಶಿವಮೊಗ್ಗ ಗ್ರಾಮಾಂತರ ಶಾಸಕರಿಗೆ ತಮ್ಮ ಶಾಲೆ ಜಾಗ ಒತ್ತುವರಿ ಆಸೆಗಾಗಿ ಪವರ್ ಪುಲ್ ದೇವರೆಂದು ಕರೆಸಿಕೊಳ್ಳುವ ಚನ್ನಮುಂಬಾಪುರ ಕೆರೆಯ ದಡದಲ್ಲಿರುವ ಬೂತರಾಯನ ಗುಡಿಯನ್ನ ಧ್ವಂಸಗೊಳಿಸಿ ದೇವರ ಕಲ್ಲನ್ನ ಕೆರೆಗೆ ಬಿಸಾಡಿದ್ದಾರೆ. ಸುದ್ದಿ ತಿಳಿದ ಚನ್ನಮುಂಬಾರ ಜನ ಇದನ್ನು ಖಂಡಿಸಿ ಗ್ರಾಮಸ್ಥರು ಭರ್ಜರಿ ಪ್ರತಿಭಟನೆ ನಡೆಸಿದರು.

ಸಾಕಷ್ಟು ವಿಶಾಲವಾಗಿದ್ದ ಈ ಕೆರೆಯಲ್ಲಿ ಶಾಸಕ ಅಶೋಕ್ ನಾಯ್ಕ್ ಮತ್ತು ಹೊಳೆಹೊನ್ನೂರು ರಮೇಶ್ ಎಂಬುವರು 2 ಎಕರೆಗೂ ಅಧಿಕ ಜಾಗವನ್ನ ಒತ್ತುವರಿ ಮಾಡಿದ್ದಾರೆ. ಕೆರೆ ಒತ್ತುವರಿ ಮಾಡಿ ಅಕ್ಷರ ಶಾಲೆ ಕಟ್ಟಡ ನಿರ್ಮಿಸಲಾಗಿದೆ. ಕೆರೆಯ ಜಾಗದಿಂದ ಅರ್ಧ ಎಕರೆ ಬಿಟ್ಟು ಕಟ್ಟಡ ಕಟ್ಟಬೇಕಿದ್ದ ಇವರುಗಳು ನಿಯಮಾವಳಿಯನ್ನ ಗಾಳಿಗೆ ತೂರಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಎಂದು ಅಗ್ರಹಿಸಲಾಗಿದೆ.
ಚನ್ನಮುಂಬಾಪುರದ ಕೆರೆಯ ತೀರದಲ್ಲಿ ಬೂತರಾಯನ ಗುಡಿ ಅನಾದಿಕಾಲದಿಂದಲೂ ಇದ್ದು, ಇದು ಕಾಲೇಜು ಕಟ್ಟಡದ ಒಳಗೆ ಇರುವುದರಿಂದ ನಿನ್ನೆ ದಿಡೀರನೇ ಗುಡಿಯನ್ನ ದ್ವಂಸಗೊಳಿಸಿ ದೇವರ ಕಲ್ಲನ್ನ ಕೆರೆಗೆ ಬಿಸಾಡಲಾಗಿದೆ. ಈ ಕೃತ್ಯವನ್ನ ಶಾಸಕರೇ ಮಾಡಿಸಿರುವುದಾಗಿ ಗ್ರಾಮಸ್ಥರ ದೂರಾಗಿದೆ. ದೇವರ ಗುಡಿ ಧ್ವಂಸ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಗುಡಿಯ ರಕ್ಷಣೆ ಮಾಡದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಲಾಯಿತು.

ಚನ್ನಮುಂಬಾಪುರದ ಗ್ರಾಮಸ್ಥರು ಸವಳಂಗ ರಸ್ತೆಗೆ ತಡೆಗೆ ಮುಂದಾದರು. ಬೂತರಾಯನ ಗುಡಿಯನ್ನ ಕೆರೆಯ ದಡದಲ್ಲಿಯೇ ನಿರ್ಮಿಸಬೇಕು ಮತ್ತು ಕೆರೆ ಒತ್ತುವರಿಯನ್ನ ತೆರವು ಗೊಳಿಸಬೇಕೆಂದು ತಹಶೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ತಹಶೀಲ್ದಾರ್ ರು ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಹೋಗಿ ಹೋಗಿ ಬಿಜೆಪಿ ಶಾಸಕರೇ ಹೀಗಿ ಮಾಡಿದರಾ? ಪವರ್ ಪುಲ್ ಭೂತರಾಯ ಸ್ವಾಮಿ ಅವರನ್ನು ಸುಮ್ನೆ ಬಿಡುತ್ತಾ ಎಂದಿರುವ ಗ್ರಾಮಸ್ಥರು ಇಂತಹ ಕೆಲಸ ಬೇರೆಯವರು ಮಾಡಿದ್ದರೆ ಹಿಂದೂ ಸಂಘಟನೆಗಳು ಹಾಗೂ ಬಿಜೆಯವರು ಸುಮ್ನೆ ಇರ್ತಿದ್ರಾ ಎಂದು ಪ್ರಶ್ನಿಸಿದ್ದಾರೆ.
