
ಶಿವಮೊಗ್ಗ, ಮಾ.01:
ಮೋದಿ ಎಂದರೆ ಪಂಚಪ್ರಾಣ ಎಂದು ಹೇಳುತ್ತಲೇ ಕಳೆದ 30 ವರ್ಷಗಳಿಂದ ಬಿಜೆಪಿ ಯಲ್ಲೇ ಗುರುತಿಸಿಕೊಂಡಿದ್ದ ವ್ಯಕ್ತಿಯೊಬ್ಬ ಮೋದಿಯವರ ಕಾರ್ಯಕ್ರಮಕ್ಕೆಂದು ಬಂದಿದ್ದ ಅವಧಿಯಲ್ಲಿ ಸುಸ್ತಾಗಿ ಸಕಾಲದಲ್ಲಿ ಕುಡಿಯುವ ನೀರು ದೊರೆಯದ ಕಾರಣ ಮುಖಂಡ ಘಟನೆ ಸಾವು ಕಂಡ ಘಟನೆ ವರದಿಯಾಗಿದೆ.
ಅತ್ಯಂತ ವಿಶೇಷವಾಗಿ ನೀವಿಲ್ಲಿ ಗಮನಿಸಬೇಕಾದ ಒಂದು ವಿಷಯವೆಂದರೆ ಮಧ್ಯಮ ವರ್ಗದಲ್ಲಿ ಬದುಕುತ್ತಿದ್ದ ರೈತಾಪಿ ಕುಟುಂಬದ ಈತ ಬಿಜೆಪಿಯನ್ನು ಎಂದೂ ಬಿಟ್ಟು ಕೊಟ್ಟಿರಲಿಲ್ಲ.
ಇದೇ ಜಿಲ್ಲಾಡಳಿತ ನಡೆಸಿದ ಕಾರ್ಯಕ್ರಮದಲ್ಲಿ ಅದೂ ವಿಮಾನ ನಿಲ್ದಾಣದ ಲೋಕಾರ್ಪಣೆ ಸಮಾರಂಭಕ್ಕೆ ಸೊರಬದಿಂದ ಬೆಳಿಗ್ಗೆ 5:30 ಹೊತ್ತಿಗೆ ಬಂದಿದ್ದ ಈತ ಮಧ್ಯಾಹ್ನ ಸಮರ್ಪಕ ವ್ಯವಸ್ಥೆಗಳಿಲ್ಲದ ಕಾರಣ ಸಾವು ಕಂಡಿದ್ದಾನೆ.
ಬಿಜೆಪಿಯ ಸ್ಥಳೀಯ ಶಾಸಕ ಕುಮಾರ್ ಬಂಗಾರಪ್ಪ ಅವರು ಮೃತರ ಮನೆಗೆ ಹೋಗಿ ಬಂದಿರುವುದು ಸರಿಯಷ್ಟೇ. ಆದರೆ ಕೇವಲ ಸಾಂತ್ವನ ಹೇಳಿ ಬಂದಿದ್ದಾರೆ.
ಹೈಸ್ಕೂಲ್ ಓದುವ ಇಬ್ಬರು ಮಕ್ಕಳನ್ನು ಹೊಂದಿರುವ ಈ ರೈತನ ಕುಟುಂಬ ಹೇಗೆ ತಾನೇ ಮುಂದಿನ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯ?
ಇಂತಹದೊಂದು ಪ್ರಶ್ನೆಯಡಿ ಶಿವಮೊಗ್ಗ ಜಿಲ್ಲಾ ಬಿಜೆಪಿಯ ಅಧ್ಯಕ್ಷ ಮೇಘರಾಜ್ ಅವರನ್ನು ತುಂಗಾತರಂಗ ಮಾತನಾಡಿದಿದಾಗ ಅವರು ಆಶಾದಾಯಕವಾದ ಮಾತನಾಡಿದ್ದಾರೆ.
ಅನ್ಯ ಧರ್ಮದ ವಿಚಾರದಲ್ಲಿ ನಡೆದ ಗಲಬೆಯಲ್ಲಿ ಏನಾದರೂ ಬಿಜೆಪಿಯ ಕಾರ್ಯಕರ್ತ ಸಾವು ಕಂಡಿದ್ದರೆ ಕೋಟಿಗಟ್ಟಲೆ ಪರಿಹಾರ ಸಿಗುತ್ತಿತ್ತು. ಇಲ್ಲಿ ಕಾರ್ಯಕ್ರಮದ ಅವ್ಯವಸ್ಥೆಯಿಂದ ಪಕ್ಕಾ ಬಿಜೆಪಿ ಕಾರ್ಯಕರ್ತ ಸಾವು ಕಂಡಿದ್ದಾನೆ. ಆತನಿಗೆ ಪರಿಹಾರದ ಅಗತ್ಯವಿದೆ ಎಂದಾಗ ಖಂಡಿತ ಅವರ ಕುಟುಂಬದ ಜೊತೆ ನಾವಿದ್ದೇವೆ. ನಿರೀಕ್ಷೆ ಮೀರಿ ಸಹಕಾರ ನೀಡಲಾಗುತ್ತದೆ ಎಂದಿದ್ದಾರೆ.
ಅವರ ಮುಂದಿನ ಬದುಕಿಗೆ ಪೂರಕವಾಗುವಂತಹ ಸಕಾರಾತ್ಮಕ ಸಹಾಯವನ್ನು ನೋಡಿಕೊಳ್ಳಲಾಗುತ್ತದೆ ಹಾಗೂ ಅವರು ನಮ್ಮ ಕುಟುಂಬದವರು ಎಂದೇ ಬಿಜೆಪಿ ಗುರುತಿಸುತ್ತದೆ ಎಂಬುದಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರು ಹೇಳಿದ್ದಾರೆ.
ನಾಳೆ ಸಂಸದ ಬಿ ವೈ ರಾಘವೇಂದ್ರ ಅವರು ಹಾಗೂ ಇತರ ಪ್ರಮುಖರು ಮೃತರ ಮನೆಗೆ ಭೇಟಿ ನೀಡುವ ಸಾಧ್ಯತೆಗಳಿವೆ ಎಂದಿದ್ದಾರೆ.
ಘಟನೆಯ ವಿವರ
ಶಿವಮೊಗ್ಗದಲ್ಲಿ ನಡೆದ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಬಂದಿದ್ದ ಬಿಜೆಪಿ ಕಾರ್ಯಕರ್ತ ಸಾವು ಕಂಡಿದ್ದು, ವಿಮಾನ ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಾರ್ಯಕರ್ತ ಅಸ್ವಸ್ಥಗೊಂಡು ಕುಡಿಯಲು ನೀರು ಸಿಗದೇ ಸಾವು ಕಂಡಿದ್ದಾನೆ.
ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲೇ ಮೃತಪಟ್ಟ ಸೊರಬ ತಾಲೂಕು ಚಿಮನೂರು ಗ್ರಾಮದ ಸಿ.ಬಿ.ಮಲ್ಲಿಕಾರ್ಜುನ್. ಕಾರ್ಯಕ್ರಮದ ಸ್ಥಳದಲ್ಲಿ ಅಸ್ವಸ್ಥಗೊಂಡ ಮಲ್ಲಿಕಾರ್ಜುನ್ ನೀರನ್ನು ಕೇಳಿದ್ದಾರೆ.
ಆದರೆ ಅವರಿಗೆ ಸಕಾಲದಲ್ಲಿ ಕುಡಿಯಲು ನೀರು ಸಿಕ್ಕಿಲ್ಲ ಎನ್ನಲಾಗಿದೆ. ಇದರಿಂದಾಗಿ ಅಲ್ಲಿಯೇ ಕುಸಿದುಬಿದ್ದು ಮಲ್ಲಿಕಾರ್ಜುನ್ ಮೃತಪಟ್ಟಿದ್ದಾರೆ. ಕಳೆದ 30 ವರ್ಷಗಳಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು