ಭದ್ರಾವತಿ,ಫೆ.22:
ಭದ್ರಾವತಿಯ ಕಾರ್ಖಾನೆ ಮುಚ್ಚುತ್ತಿವೆ. ಅವುಗಳನ್ನು ಉಳಿಸಬೇಕು. ಅದನ್ನ ಬಿಡ್ಟು ಈಗ ವಿಮಾನನಿಲ್ದಾಣದ ಅವಸರ ಏನಿದೆ? ಈಶ್ವರಪ್ಪ, ಯಡಿಯೂರಪ್ಪ ಮಕ್ಕಳು ಓಡಾಡೋಕಾ? ಈ ವಿಐಎಸ್ ಎಲ್ ಉಳಿಸುವುದನ್ನು ಜೆಡಿಎಸ್ ಸವಾಲಾಗಿ ಸ್ವೀಕರಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರ ಸ್ವಾಮಿ ತಿಳಿಸಿದರು.
ಅವರು ನಿನ್ನೆ ರಾತ್ರಿ ಕನಕ ಮಂಟಪದಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆಯ ಬಹಿರಂಗ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ನವರು ಇವತ್ತು ಗ್ಯಾರೆಂಟಿ ಕಾರ್ಡ್ ಕೊಡಲು ಹೊರಟಿದ್ದಾರೆ. ಇಷ್ಟು ವರ್ಷ ಕಳೆದರೂ ಶಿಕ್ಷಣ, ಆರೋಗ್ಯ, ರೈತರ ಆತ್ಮಹತ್ಯೆ ತಡೆಯೋದು ಉದ್ಯೋಗ ಸಮಸ್ಯೆ ಬಗೆಹರಿಸಿಲ್ಲ. ಸ್ವಾತಂತ್ರ ಬಂದು 75 ವರ್ಷಗಳಾಗಿವೆ, ವಸತಿ ಇಲ್ಲ. ಶೌಚಾಲಯವಿಲ್ಲದಂತಿದೆ. ಇದು ಅವರಿಗೆ ಕಣ್ಣಿಗೆ ಕಾಣೋಲ್ವಾ ಎಂದರು.
ಶ್ರೀಮಂತರು ಶ್ರೀಮಂತರಾಗಿದ್ದಾರೆ. ಬಡವರು ಬಡವರಾಗಿದ್ದಾರೆ. ಪ್ರತಿನಿತ್ಯ ಮನೆಗೆ ಬರುವ ಬಡಕುಟುಂಬದ ತಾಯಂದರು ನನ್ನ ಮನೆಗೆ ಕನಿಷ್ಟ 500 ಜನ ಬರುತ್ತಾರೆ. ಅವರ ಎಲ್ಲಾ ಕಷ್ಟಗಳಿಗೆ ಸ್ಪಂದಿಸಲು ಅಧಿಕಾರ ಬೇಕು. ಏಕಾಂಗಿಯಾಗಿ ಸ್ಪಂಧಿಸಲು ಆಗೊಲ್ಲ. ಹಾಗಾಗಿ ನಿಮ್ಮ ಕನಸು ನನಸಾಗಿಸಲು ಜೆಡಿಎಸ್ ಗೆ ಮತಕೊಡಿ, ಬಡವರ ಕಷ್ಟಗಳಿಗೆ ಧ್ವನಿಯಾಗುವ ಏಕೈಕ ಪಕ್ಷ ಜೆಡಿಎಸ್ ಎಂದರು.
ವಿಐಎಸ್ಎಲ್ ಮತ್ತು ಎಂಪಿಎಂ ಗೆ ಕೊನೆಯ ಬೆಣೆ ಹೊಡೆದಿದ್ದಾರೆ ಎಂದು ವಿಪಕ್ಷಗಳ ಹೆಸರು ಹೇಳದೆ ಆರೋಪಿಸಿದ ಹೆಚ್ ಡಿಕೆ . ಈ ಎರಡೂ ಕಾರ್ಖಾನೆ ಮುಚ್ಚುವ ಮೂಲಕ ಯುವಕರ ಉದ್ಯೋಗ ಕಸಿದುಕೊಳ್ಳಲಾಗಿದೆ. ಆರೋಗ್ಯಕ್ಕೆ ಕನಿಷ್ಠ 1½ ಕೋಟಿ ವೆಚ್ಚವಾಗುತ್ತೆ. ಶಿವಮೊಗ್ಗದ ನಾಯಕರು ಶಿಕ್ಷಣ ಸಂಸ್ಥೆ ಮಾಡಿಕೊಂಡರು, ಶಾಪಿಂಗ್ ಮಾಲ್ ಕಟ್ಟಿದರು. ಎಲ್ಲಿಂದ ಹಣ ಬಂತು? ನಾನು ಎರಡು ಬಾರಿ ಸಿಎಂ ಆದರೂ ಯಾವ ಸಂಸ್ಥೆಗಳನ್ನ ಕಟ್ಟಲಿಲ್ಲ, ಹಣ ಮಾಡಲಿಲ್ಲವೆಂದರು.
ಜಿಲ್ಲೆಯ ರೈತರು ಬಡವರಾಗಿದ್ದಾರೆ. ಅವರು ಶ್ರೀಮಂತರಾಗಿ ಬೆಳೆಯುತ್ತಿದ್ದಾರೆ. ಇದು ಜಿಲ್ಲೆಯ ನಾಯಕರ ಕೊಡುಗೆಯಾಗಿದೆ. ಈ ಬಾರಿ ಜೆಡಿಎಸ್ ಬಹುಮತ ಪಡೆಯದಿದ್ದರೆ ಪಕ್ಷವನ್ನ ವಿಸರ್ಜನೆ ಮಾಡುವುದಾಗಿ ಘೋಷಿಸಿದ್ದೆ. ಅದಕ್ಕೆ ಈಗಲೂ ಬದ್ದವೆಂದರು.
ಸಾಲ ಮಾಡಿ ನಿಮ್ಮಗಳ ಹಣದಲ್ಲಿ ಲೂಟಿ ಮಾಡಲಾಗುತ್ತಿದೆ. ಇವತ್ತು ಮತದಾರರು ತೀರ್ಮಾನಿಸಬೇಕಿದೆ. ಮತ್ತೆ 45 ರಿಂದ 50 ಸ್ಥಾನ ಪಡೆಯಲು 18 ಗಂಟೆಗಳ ಕಾಲ ಶ್ರಮವಹಿಸುವ ಅವಶ್ಯಕತೆ ನನಗೆ ಇಲ್ಲ. ನನ್ನ ಸ್ವಾರ್ಥಕ್ಕೆ ಹೋರಾಡುತ್ತಿಲ್ಲ. ಒಮ್ಮೆ ನನ್ನಮೇಲೆ ವಿಶ್ವಾಸವಿಟ್ಟು ಶಾರದಾ ಅಪ್ಪಾಜಿ ಗೌಡರನ್ನ ಗೆಲ್ಲಿಸಿ ಎಂದರು.
ಬಗುರ್ ಹುಕುಂ ಸರಿಪಡಿಸಿ ಹಕ್ಕುಪತ್ರ ಕೊಡಿಸುವುದು ನನ್ನ ಜವಾಬ್ದಾರಿ. ಲೂಟಿ ಹೊಡೆದ ಹಣವನ್ನ ತಡೆದರೆ ಭದ್ರಾವತಿಯ ಕಾರ್ಖಾನೆ ಆರಂಭಿಸಬಹುದು. ರಾಜ್ಯ ಸರ್ಕಾರದ ಮೂಲಕವೇ ಪುನಶ್ಚೇತನ ಗೊಳಿಸಲಾಗುವುದು. ನಾನು ಮುಖ್ಯಮಂತ್ರಿ ಯಾಗುವುದಕ್ಕಿಂತ ಹೆಚ್ಚಾಗಿ ನಿಮ್ಮ ಭವಿಷ್ಯಕ್ಕೆ ಜೆಡಿಎಸ್ ಗೆ ಮತಹಾಕಬೇಕು. ಹಣ ಸಂಪಾದಿಸಲು ನಾನು ಹೋರಾಡುತ್ತಿಲ್ಲವೆಂದರು.
ವೇದಿಕೆಯಲ್ಲಿ ಕಣ್ಣೀರಿಟ್ಟ ಶಾರದಾ ಅಪ್ಪಾಜಿ
ಭಾವನಾತ್ಮಕವಾಗಿ ಭಾಷಣ ಮಾಡಿದ ಭದ್ರಾವತಿಯ ಜೆಡಿಎಸ್ ಅಭ್ಯರ್ಥಿ ಶಾರದಾ ಅಪ್ಪಾಜಿಗೌಡ ಕುಮಾರ ಸ್ವಾಮಿ , ಸಿಎಂ ಇಬ್ರಾಹಿಂ ಉಪಸ್ಥಿತರಿದ್ದ ವೇದಿಕೆ ಮೇಲೆ ಕಣ್ಣೀರು ಸುರಿಸಿದ್ದಾರೆ. ಬಾಗಿನ ರೂಪದಲ್ಲಿ ಮತ ಹಾಕಿ ನಿಮ್ಮ ಮಗಳನ್ನ ಗೆಲ್ಲಿಸಿಕೊಡುವಂತೆ ಅವರು ಮತಯಾಚಿಸಿದ್ದಾರೆ.