ಶಿವಮೊಗ್ಗ,ಫೆ.21:

ಜಿಲ್ಲೆಯ ಆಗಮಿಸುವ ಭದ್ರಾವತಿ ತಾ. ಕಾರೇನಹಳ್ಳಿಯಿಂದ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆಗೆ ಇಂದು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಚಾಲನೆ ನೀಡಿದರು.

ಜೆಡಿಎಸ್ ಪ್ರಮುಖರು ಕುಮಾರಸ್ವಾಮಿಯವರನ್ನ ಭವ್ಯ ಸ್ವಾಗತದಿಂದ ಭರ ಮಾಡಿಕೊಳ್ಳಲಾಗಿದೆ.
69 ನೇ ದಿನದ ಪಂಚರತ್ನ ರಥಯಾತ್ರೆಯಾಗಿದ್ದು, ಕಾರೇನ ಹಳ್ಳಿ, ಕೆಂಪೇಗೌಡ ನಗರ, ಬಾರಂದೂರು ಕೆಂಚನಹಳ್ಳಿ, ಮಾವಿನಕೆರೆ, ತಾಸ್ಕೆಟ್ ನಗರ, ಹೇರೇಹಳ್ಳಿ, ಶಿವಾನಿ ಕ್ರಾಸ್ ಗೌರಪುರ, ಅಂತರಗಂಗೆ, ಕಾಚಗೋಡನಹಳ್ಳಿ, ಅಶ್ವಥ್ ನಗರ ಶಿವಾಜಿ ವೃತ್ತ, ರಂಗಪ್ಪ ವೃತ್ತ, ಮಾಧವಾಚಾರ್ ವೃತ್ತ,ಹಾಲಪ್ಪ ವೃತ್ತ, ಅಂಡರ್ ಬ್ರಿಡ್ಜ್, ಕೆಎಸ್ಆರ್ ಟಿ ಸಿ ಡಿಪೋ, ಅಂಬೇಡ್ಕರ್ ವೃತ್ತ, ಕನಕ ಮಂಟಪ ತಲುಪಲಿದೆ.


ಕನಕ ಮಂಟಪದಲ್ಲಿ ಸಾರ್ವಜನಿಕ ಭಾಷಣ ಹಮ್ಮಿಕೊಳ್ಳಲಾಗಿದೆ. ನವುಲೆ ಬಸಾಪುರದಲ್ಲಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ. ಕಾರೆನ ಹಳ್ಳಿಯಿಂದ ಬೈಕ್ Rally ಯಲ್ಲಿ ಕಾರ್ಯಕರ್ತರು ಅಪಾರಸಂಖ್ಯೆಯಲ್ಲಿದ್ದರು.,

ಅಭ್ಯರ್ಥಿ ಶಾರದಾ ಅಪ್ಪಾಜಿಗೌಡ, ಎಂಎಲ್ ಸಿ ಬೋಜೇಗೌಡ, ಜಿಲ್ಲಾಧ್ಯಕ್ಷ ಶ್ರೀಕಾಂತ್, ಕುಮಾರ ಸ್ವಾಮಿಯ ಜೊತೆ ಪಂಚರತ್ನಯಾತ್ರೆಯ ವಾಹನದಲ್ಲಿ ಸಾಗಿಸಿದರು.
ಈ ವೇಳೆ ಕೆಂಪೇಗೌಡ ನಗರದಲ್ಲಿ ತೆರೆದ ವಾಹನದಲ್ಲಿ ಮಾತನಾಡಿದ ಕುಮಾರ ಸ್ವಾಮಿ ಪಂಚರತ್ನ ರಥಯಾತ್ರೆ ಶಿಕ್ಷಣ, ಆಸ್ಪತ್ರೆ, ಸ್ವಾಭಿಮಾನಿ ರೈತ, ಉದ್ಯೋಗ, ಮನೆ ನಿರ್ಮಾರ, ಪ್ರತಿ ಕುಟುಂಬದ ಹಿರಿಯರಿಗೆ 5 ಸಾವಿರ ರೂ. ಮಸಾಶನ 800 ರೂ.ನಿಂದ 2000 ರೂ. ಏರಿಕೆ, ಶ್ರೀಮಂತ ಮತ್ತು ಬಡವರ ನಡುವಿನ ಆರ್ಥಿಕ ವ್ಯತ್ಯಾಸ ಕುಗ್ಗಿಸುವುದು ಇದರ ಉದ್ದೇಶ
ಎಂದರು.


ವಿಐಎಸ್ಎಲ್ ಕಾರ್ಖಾನೆ ಮುಚ್ಚುವ ಹಂತಕ್ಕೆ ತಲುಪಿದೆ ಅದು ಸೇರಿದಂತೆ ಎಂಪಿಎಂ ಗೂ ಪುನಶ್ಚೇತನ ಮಾಡುವುದು ರಥಯಾತ್ರೆಯ ಮುಖ್ಯ ಉದ್ದೇಶವಾಗಿದೆ. ಹಾಗಾಗಿ ಭದ್ರಾವತಿ ಅಭ್ಯರ್ಥಿಯನ್ನ ಗೆಲ್ಲಿಸಬೇಕೆಂದು ಎಂದು ತಿಳಿಸಿದರು.
ದಾರಿಯುದ್ದಕ್ಕೂ ಹೂವಿನ ಪುಷ್ಪಾರ್ಚನೆ, ಕುಮಾರ ಸ್ವಾಮಿಯ ಕುರಿತು ಡಿಜೆ ಹಾಡುಗಳು, ಹಾಕುವ ಮೂಲಕ ರಥಯಾತ್ರೆ ಸಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!