ಶಿವಮೊಗ್ಗ, ಫೆ.21:
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬರುವ ಫೆಬ್ರವರಿ 27ರಂದು ಶಿವಮೊಗ್ಗ ನಗರಕ್ಕೆ ಆಗಮಿಸಿ ವಿಮಾನ ನಿಲ್ದಾಣ ಸೇರುವಂತೆ ಹಲವು ಮಹತ್ತರ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಹಲವು ಕಾರ್ಯಕ್ರಮಗಳ ಶಂಕುಸ್ಥಾಪನೆ ನೆರವೇರಿಸುವ ಅಧಿಕೃತ ದಿನಾಂಕ ಹಾಗೂ ಅವಧಿ ಇಂದು ಘೋಷಣೆಯಾಗಿದೆ. ಶಿವಮೊಗ್ಗ ಕಾರ್ಯಕ್ರಮಕ್ಕೆ ಎರಡುಗಂಟೆ ಮೀಸಲಿಡಲಾಗಿದೆ.
ಸಂಸದ ಬಿವೈ ರಾಘವೇಂದ್ರ ಅವರು ಇಂದು ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಈ ವಿಷಯದ ಬಗ್ಗೆ ವಿವರಣೆ ನೀಡಿ ಬರುವ ಫೆಬ್ರವರಿ 27ರ ಸೋಮವಾರ ಬೆಳಗ್ಗೆ 11 ಗಂಟೆಯಿಂದ 11 15ರೊಳಗೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮೊಟ್ಟ ಮೊದಲು ಬರುವ ವಿಮಾನದಲ್ಲಿ ಪ್ರಧಾನ ಮಂತ್ರಿ ಮೋದಿಯವರು ಆಗಮಿಸಲಿದ್ದಾರೆ. ಮಧ್ಯಾಹ್ನ ಒಂದು ಗಂಟೆಯವರೆಗೆ ಶಿವಮೊಗ್ಗದಲ್ಲಿರುವ ಪ್ರಧಾನಿಗಳು ಅಷ್ಟರೊಳಗೆ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ನೆರವೇರಿಸಿದ್ದಾರೆ. ಈಗಾಗಲೇ ಅಧಿಕೃತವಾಗಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಪರವಾನಿಗೆ ದೊರೆತಿದ್ದು, ಇಂದಿನಿಂದ ಅದಕೋಸ್ಕರ ವಿಶೇಷ ತಂಡ ಪ್ರಯೋಗಾತ್ಮಕವಾಗಿ ವಿಮಾನವನ್ನು ಹಾರಿಸಲಿದ್ದಾರೆ. ಅಲ್ಲಿ ಯಾವುದೇ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ ಎಂದು ರಾಘವೇಂದ್ರ ಹೇಳಿದರು.
ಶಿವಮೊಗ್ಗ ನಗರದ ಈ ಕಾರ್ಯಕ್ರಮಕ್ಕೆ ಕನಿಷ್ಠ ಮೂರು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆಯಿದ್ದು, ಎಲ್ಲಾ ಆಸಕ್ತರು ಮೋದಿ ಅವರ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಬೆಳಗ್ಗೆ 10 ಗಂಟೆಯೊಳಗೆ ವಿಮಾನ ನಿಲ್ದಾಣಕ್ಕೆ ಆಗಮಿಸುವಂತೆ ರಾಘವೇಂದ್ರ ಕೋರಿದರು. ನಂತರ ಬಂದರೆ ಒಳಗೆ ಬರುವ ಅವಕಾಶಗಳು ಕ್ಲಿಷ್ಟವಾಗುತ್ತವೆ. ಪಾರ್ಕಿಂಗ್ ವ್ಯವಸ್ಥೆಯಿಂದ ಕಾರ್ಯಕ್ರಮದ ವ್ಯವಸ್ಥೆಯವರೆಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಓಡಾಡುವಂತಹ ಅವಕಾಶವಿರುತ್ತದೆ ಅಲ್ಲಿ ಬಂದ ಜನರಿಗೆ ಯಾವುದೇ ತೊಂದರೆಯಾಗರಂತೆ ನೀರು ಹಾಗೂ ಪಾನೀಯಗಳು ಮತ್ತು ಲಘುಉಪಹಾರದ ವ್ಯವಸ್ಥೆ ಇರುತ್ತದೆ. ಜಿಲ್ಲಾಡಳಿತ ಹಾಗೂ ನಮ್ಮ ಸಂಘಟನೆ ಇದಕ್ಕೆ ಪೂರಕವಾದ ವ್ಯವಸ್ಥೆಗಳನ್ನು ಮಾಡುತ್ತಿದೆ ಎಂದು ಹೇಳಿದರು.
ಸಾಧಕರನ್ನು ಜಾತಿ ಧರ್ಮದ ಆಧಾರದಲ್ಲಿ ಸೀಮಿತಗೊಳಿಸಬಾರದು ಎಂಬ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ಅದರಲ್ಲೂ ನಮ್ಮ ರಾಜ್ಯ ಸರ್ಕಾರ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪುರವರ ಹೆಸರನ್ನು ಅನುಮೋದನೆ ಮಾಡಿದೆ ಹಾಗೆಯೇ ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ಕೆಳದಿ ರಾಜ ಶಿವಪ್ಪ ನಾಯಕ ಅವರ ಹೆಸರನ್ನು ಅನುಮೋದಿಸಿದ್ದು ಎರಡು ಹೆಸರುಗಳಿಗೆ ಕೇಂದ್ರ ಅವಕಾಶ ನೀಡಲಿದೆ ಎಂದು ಹೇಳಿದರು.
ಕಳೆದ 2006ರಿಂದ ಇಂದಿನವರೆಗೂ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿ ಸಾಕಷ್ಟು ಕಾರ್ಯ ನಿರ್ವಹಿಸಿದ ನಿಕಟ ಪೂರ್ವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಹೆಸರನ್ನು ವಿಮಾನನಿಲ್ದಾಣಕ್ಕಿಡಲು ಕ ಒತ್ತಾಯ ಹೆಚ್ಚಾಗಿತ್ತು ಯಾವುದೇ ಗೊಂದಲಗಳು ಆಗಬಾರದು ಎಂಬ ಕಾರಣಕ್ಕೆ ಯಡಿಯೂರಪ್ಪನವರೇ ಮುಂದೆ ಬಂದು ನನ್ನ ಹೆಸರು ಬೇಡ. ಇದಕ್ಕೆ ಕುವೆಂಪುರವರ ಹೆಸರನ್ನು ಸೂಚಿಸಿದ್ದರು ಎಂದರು
ಪಕ್ಷದ ಅಧ್ಯಕ್ಷ ಮೇಘರಾಜ್, ಪ್ರಮುಖರಾದ ಡಿಕೆ ಶ್ರೀನಾಥ್, ಜಗದೀಶ್, ಪುರುಷೋತ್ತಮ್, ಕೃಷ್ಣಮೂರ್ತಿ, ರವೀಶ್ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು