ಶಿವಮೊಗ್ಗ ಕೆನಲ್ ಕ್ಲಬ್ ವತಿಯಿಂದ ಫೆ. 19 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ರ ವರೆಗೆ ಮಹಾತ್ಮಗಾಂಧಿ ಪಾರ್ಕ್ ನಲ್ಲಿ ರಾಜ್ಯಮಟ್ಟದ ಶ್ವಾನ ಪ್ರದರ್ಶನ ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಎನ್. ರಾಜೇಂದ್ರ ಕಾಮತ್ ಹೇಳಿದರು.

ಅವರು ಇಂದು ಮೀಡಿಯಾ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಶ್ವಾನ ಪ್ರದರ್ಶನದಲ್ಲಿ ವಿವಿಧ ತಳಿಯ ಸುಮಾರು 200 ಕ್ಕೂ ಅಧಿಕ ಶ್ವಾನಗಳು ಭಾಗವಹಿಸುವ ನಿರೀಕ್ಷೆ ಇದೆ. ವಿಜೇತ ಶ್ವಾನಗಳಿಗೆ ಒಟ್ಟು 50 ಸಾವಿರ ರೂ. ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಗುವುದು. ಪ್ರತಿ ಶ್ವಾನಗಳಿಗೆ ಪ್ರವೇಶಧನ 300 ರೂ. ನಿಗದಿಪಡಿಸಿದ್ದು ನೋಂದಾಯಿಸಲು ಫೆ. 18 ಕೊನೆಯ ದಿನಾಂಕವಾಗಿದೆ ಎಂದರು. 

ಮೊದಲ ಬಹುಮಾನ 15 ಸಾವಿರ ರೂ., ಎರಡನೇ ಬಹುಮಾನ 8 ಸಾವಿರ ರೂ., ತೃತೀಯ ಬಹುಮಾನ 5 ಸಾವಿರ ರೂ. ಹಾಗೂ 4 ರಿಂದ 8 ನೇ ಸ್ಥಾನದವರೆಗೂ ತಲಾ 2 ಸಾವಿರ ರೂ., ಒಂದು ವರ್ಷದ ನಾಯಿ ಮರಿಗೆ ಕ್ರಮವಾಗಿ 5, 3, 2 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು ಎಂದರು.

ಮುಧೋಳ್ ತಳಿಯ ಶ್ವಾನಗಳಿಗೆ ಉಚಿತ ಪ್ರವೇಶವಿದೆ. ಹಾಗೂ ಭಾರತೀಯ ತಳಿಯ ಶ್ವಾನಗಳಿಗೆ 2 ಸಾವಿರ ರೂ. ವಿಶೇಷ ನಗದು ಬಹುಮಾನವಿದೆ. ಅತ್ಯುತ್ತಮವಾಗಿ ಶ್ವಾನಗಳನ್ನು ಪ್ರದರ್ಶಿಸಿದ ಇಬ್ಬರಿಗೆ 2 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು ಎಂದರು.

ಸಂಜೆ 4 ಗಂಟೆಯಿಂದ ಸಮಾರೋಪ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್ ಆಗಮಿಸಲಿದ್ದಾರೆ. ತೀರ್ಪುಗಾರರಾಗಿ ಕೊಲ್ಲಾಪುರ ವಿರೇನ್ ಉಪಾಧ್ಯಾಯ ಆಗಮಿಸುತ್ತಾರೆ. ಪ್ರದರ್ಶನದಲ್ಲಿ ಭಾಗವಹಿಸುವವರು ಬೆಳಗ್ಗೆ 9 ಗಂಟೆಗೆ ತಮ್ಮ ಶ್ವಾನಗಳೊಂದಿಗೆ ಮೈದಾನದಲ್ಲಿ ಹಾಜರಿರಬೇಕು. ಸಾರ್ವಜನಿಕರಿಗೆ ಪಾಲಿಕೆ ಎದುರಿನ ದ್ವಾರದಿಂದ ಉಚಿತ ಪ್ರವೇಶವಿರುತ್ತದೆ ಎಂದರು.

ಹೆಚ್ಚಿನ ವಿವರಗಳಿಗೆ 98865 23026, 98862 12111 ಸಂಪರ್ಕಿಸಬಹುದಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಕ್ಲಬ್ ಉಪಾಧ್ಯಕ್ಷ ಜಿ. ಅನಿಲ್ ಕುಮಾರ್, ಕಾರ್ಯದರ್ಶಿ ಬಿ.ಎಸ್. ರಾಜೇಶ್, ಪದಾಧಿಕಾರಿಗಳಾದ ಹೆಚ್. ಶ್ರೀಧರ್ ಶೆಣೈ, ಎಸ್.ಪಿ. ಪೃಥ್ವಿರಾಜ್ ಸಿಂಗ್, ಎಸ್. ಗಜಾನನ ಹೆಗ್ಡೆ, ಎ.ಎಂ. ವಿನಯ್, ಎಂ. ವಿನಯ ಭಟ್, ಕೆನಿತ್ ಹರ್ಷ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!