: ರಾಷ್ಟ್ರ ಮೊದಲು ಎನ್ನುವ ಮನೋಭಾವ ಸೇವಾದಳದ ಮೂಲಕ ಮಕ್ಕಳಲ್ಲಿ ಮೂಡಿಸಲು ಸಾಧ್ಯ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದರು.


ಇಲ್ಲಿನ ಬೆಳಲಮಕ್ಕಿ ಶಾಲೆಯಲ್ಲಿ ಮಂಗಳವಾರ ಭಾರತ್ ಸೇವಾದಳದ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಮಕ್ಕಳಲ್ಲಿ ಶಿಸ್ತು, ಏಕಾಗ್ರತೆ, ನಾಯಕತ್ವ ಗುಣ ಮತ್ತು ರಾಷ್ಟ್ರಾಭಿಮಾನ ಬೆಳೆಸುವಲ್ಲಿ ಸೇವಾದಳದಂತಹ ಘಟಕ ಪ್ರಮುಖವಾಗಿದೆ. ನಾನು ಸಹ ವಿದ್ಯಾರ್ಥಿ ದೆಸೆಯಲ್ಲಿ ೨೧ ದಿನಗಳ ಕಾಲ ಸೇವಾದಳದ ತರಬೇತಿ ಪಡೆಯುವ ಮೂಲಕ ಜೀವನದಲ್ಲಿ ಶಿಸ್ತು ರೂಢಿಸಲು ಸಾಧ್ಯವಾಗಿದೆ. ನಾ.ಸು.ಹರ್ಡೀಕರ್ ಸ್ವಾತಂತ್ರ್ಯಪೂರ್ವದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಪೂರಕವಾಗಿ ಸೇವಾದಳ ಘಟಕವನ್ನು ಪ್ರಾರಂಭಿಸಿದರು ಎಂದು ಹೇಳಿದರು.


ಸ್ವಾತಂತ್ರ್ಯ ನಂತರ ಸೇವಾದಳ ಚಟುವಟಿಕೆ ಸ್ವಲ್ಪ ವಿಮುಖಗೊಂಡಿತ್ತು. ಬದಲಾದ ದಿನಮಾನಗಳಲ್ಲಿ ಸೇವಾದಳ ಘಟಕ ಅತ್ಯಂತ ಚುರುಕಾಗಿ ನಡೆಯುತ್ತಿದೆ. ಶಿಸ್ತಿನ ಜೊತೆಗೆ ಸೇವಾ ಮನೋಭಾವ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಇಂತಹ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸೇವಾದಳದ ತಾಲ್ಲೂಕು ಅಧ್ಯಕ್ಷ ಉಮೇಶ್ ಹಿರೇನೆಲ್ಲೂರು, ಸೇವಾದಳ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ತರಬೇತಿಯನ್ನು ಕಾಲಕಾಲಕ್ಕೆ ನೀಡುತ್ತಾ ಬರುತ್ತಿದೆ. ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ ಸೇವಾದಳದ ಅತ್ಯಂತ ವಿಶೇಷವಾದ ಕಾರ್ಯಗಳಲ್ಲಿ ಒಂದಾಗಿದೆ. ಸಾವಿರಾರು ಮಕ್ಕಳು ಈ ಜಾಥದಲ್ಲಿ ಪಾಲ್ಗೊಂಡಿದ್ದು ಸ್ಮರಣೀಯ ಕೆಲಸವಾಗಿದೆ ಎಂದರು.
ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಸರಸ್ವತಿ ನಾಗರಾಜ್, ದತ್ತಾತ್ರೇಯ ಭಟ್, ದಿನೇಶ್ ಎಚ್.ಬಿ., ಆನಂದ್, ವಿ.ಟಿ.ಸ್ವಾಮಿ, ಎಸ್.ಬಸವರಾಜ್, ಪ್ರಸನ್ನಕುಮಾರ್ ಎಚ್.ಸಿ., ಕಸ್ತೂರಿ ಸಾಗರ್, ಗಣೇಶ್ ಪ್ರಸಾದ್, ದೇವೇಂದ್ರಪ್ಪ ಇನ್ನಿತರರು ಹಾಜರಿದ್ದರು

By admin

ನಿಮ್ಮದೊಂದು ಉತ್ತರ

You missed

error: Content is protected !!