ಶಿವಮೊಗ್ಗ, ಜ.೨೩:
ಇದೇ ಮೊದಲ ಬಾರಿಗೆ, ಶಿವಮೊಗ್ಗ ಹಾಲು ಒಕ್ಕೂಟದ ಇತಿಹಾಸದಲ್ಲಿ ಹಾಲು ಉತ್ಪ್ಪಾದಕ ರೈತರಿಗೆ ಅತಿ ಹೆಚ್ಚಿನ ದರವನ್ನು ನೀಡಲಾಗುತ್ತಿದೆ. ಜನವರಿ 21 ಅನ್ವ ಯವಾಗುವಂತೆ ಈ ದರವನ್ನು 31.48 ರೂ ಗೆ ಏರಿಸಲಾಗಿದೆ ಎಂದು ಶಿಮುಲ್ ಅಧ್ಯಕ್ಷ ಎನ್. ಎಚ್. ಶ್ರೀಪಾದರಾವ್ ಹೇಳಿದ್ದಾರೆ.

ಪ್ರೆಸ್ ಟ್ರಸ್ಟಿನಲ್ಲಿ ಏರ್ಪಡಿಸಿದ್ದ ಸಂವಾದ ದಲ್ಲಿ ಭಾಗವಹಿಸಿದ ಅವರು, ಒಕ್ಕೂಟ ದಿಂದ ಸಂಘಗಳಿಗೆ ಹಾಲಿ 29.15 ರೂ. ನೀಡಲಾಗುತ್ತಿದೆ. ಇದನ್ನು31.71ರೂಗೆ ಏರಿಸಲಾಗಿದೆ. ಸಂಘದಿಂದ ಉತ್ಪ್ಪಾದಕರಿಗೆ ಹಾಲಿ ನೀಡುತ್ತಿರುವ ದರ30.20ಇದ್ದು, ಅದನ್ನು 31.58 ರೂ. ಗೆ ಹೆಚ್ಚಿಸಲಾಗಿದೆ. ಇದೇ ಸಂದರ್ಭದಲ್ಲಿ ನಂದಿನಿ ಲಸ್ಸಿಯನ್ನೂ ಸಹ ಮಾರುಕಟ್ಟೆಗೆ ಬಿಡುಗಡೆ ಮಾಡಲಾ ಗಿz. ಮುಂದಿನ ದಿನಗಳಲ್ಲಿ ಇನ್ನಷ್ಟು ಹಾಲಿನ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗುವುದು ಎಂದರು.
ಶಿಮುಲ್ ಆರ್ಥಿಕ ಸ್ಥಿತಿ ಉತ್ತಮವಾ ಗಿದೆ. ಇಲ್ಲಿಯವರೆಗೆ ಯಾವುದೇ ಬ್ಯಾಂಕಿ ನಿಂದ ಸಾಲ ಪಡೆದಿಲ್ಲ. ಸುಮಾರು ೩ ಕೋಟಿ ರೂ. ನಷ್ಟು ಮೂಲಸೌಕರ್ಯ ಇಲ್ಲಿದೆ. ಗುಣಮಟ್ಟದ ಹಾಲನ್ನು ನೀಡುವ ಮೂಲಕ ರಾಜ್ಯದಲ್ಲೇ ಅತ್ಯುತ್ತಮ ಡೈರಿ ಎನಿಸಿಕೊಂ ಡಿದೆ. ಹಾಲು ಮಾರಾಟದಲ್ಲೂ ಸಹ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಹಾಲು ಪ್ಯಾಕಿಂಗ್ ಘಟಕಗಳನ್ನು ವಿವಿಧೆಡೆ ಆರಂಭಿಸಲಾಗುವುದು. ಇಲ್ಲಿನ ಹಾಲು ಹೆಚ್ಚಾಗುತ್ತಿದ್ದು, ಅದನ್ನು ಇತರೆ ರಾಜ್ಯಗಳಿಗೆ ಕಳುಸಹಿಲಾಗುತ್ತಿದೆ. ಹಾಲು ಉತ್ಪಾದಕರಿಗೆ ವಿವಿಧ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಸುಮಾರು ೨೫ ಸಾವಿರ ಮ್ಯಾಟ್ಗಳನ್ನು ಒದಗಿಸಲಾ ಗಿದೆ. ಹಸು ಸಾಕಾಣಿಕೆಗೆ ನೆರವು ನೀಡಲಾ ಗುತ್ತಿದೆ. ರೈತರಿಗೆ ಹಸುಗಳ ವೈದ್ಯಕೀಯ ಪರೀಕ್ಷೆಯನ್ನು ಮತ್ತು ಗರ್ಭದಾರ ಣೆಯನ್ನು ಸಹ ಶಿಮುಲ್ ವತಿಯಿಂದ ಉಚಿತವಾಗಿ ಮಾಡಿಸಲಾಗು ತ್ತಿದೆ. ಕಾಲಾ ನುಕಾಲಕ್ಕೆ ಎಲ್ಲ ರೀತಿಯ ನೆರವನ್ನು ಒದಗಿ ಸುವ ಮೂಲಕ ರೈತಸ್ನೇಹಿಯಾಗಿದೆ ಎಂದರು.

ಅಮುಲ್ ಜೊತೆ ಕೆಲಸ:
ಗುಜರಾತಿನ ಅಮುಲ್ ಜೊತೆ ಶಿಮುಲ್ ಕೆಲಸ ಮಾಡಲು ಸಿದ್ಧತೆ ನಡೆದಿದೆ. ಅಮುಲ್ ಅತಿ ದೊಡ್ಡ ಹಾಲು ಮಾರಾಟ ಕಂಪನಿಯಾಗಿದ್ದು, ಅವರು ಮಾರುಕಟ್ಟೆ ಸೇರಿದಂತೆ ವಿವಿಧ ಸೌಕರ್ಯ ಕಲ್ಪಿಸಲು ನೆರವಾಗಲಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ವಿಲೀನ ಇಲ್ಲ ಇಬ್ಬರೂ ಒಟ್ಟುಗೂಡಿ ಕೆಲಸ ಮಾಡಲಾಗು ವುದು ಎಂದು ಸ್ಪಷ್ಟಪಡಿಸಿದರು.
ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ, ಕಾರ್ಯದರ್ಶಿ ನಾಗರಾಜ ನೇರಿಗೆ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ, ಕಾರ್ಯದರ್ಶಿ ಸಂತೋಷ್ ಕಾಚಿಕನಟ್ಟೆ ಉಪಸ್ಥಿತರಿದ್ದರು. ರಾಮಚಂದ್ರ ಗುಣಾರಿ ನಿರೂಪಿಸಿದರು.

ಸೊರಬದಿಂದ ಸ್ಪರ್ಧೆ
ನಾನು ಮುಂದಿನ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಟಿಕೆಟ್ ಆಕಾಂಕ್ಷಿ ಹೌದು. ಸಾಗರ ಅಥವಾ ಸೊರಬ ಎರಡೂ ಕ್ಷೇತ್ರದ ಆಕಾಂಕ್ಷಿ. ಯಾವುದೇ ಕ್ಷೇತ್ರದ ಟಿಕೆಟ್ ಕೊಟ್ಟರೂ ಸ್ಪರ್ಧಿಸುತ್ತೇನೆ. ಸಾಗರ ಕ್ಷೇತ್ರದ ಬಹುಭಾಗ ಸೊರಬ ತಾಲೂಕಿನ ಪ್ರದೇಶವಾಗಿರುವುದರಿಂದ ಅಲ್ಲಿಯೂ ಕೆಲಸ ಮಾಡಿದ್ದೇನೆ. ಡಿಸಿಸಿ ಬ್ಯಾಂಕ್ ಮತ್ತು ಶಿಮುಲ್ ಅಧ್ಯಕ್ಷನಾಗಿ ರೈತರಿಗೆ ಸಾಕಷ್ಟು ಅನುಕೂಲ ಕಲ್ಪಿಸಿದ್ದೇನೆ. ಹಾಲಿನ ಸೊಸೈಟಿಗಳನ್ನು ತೆರೆಯಲು ನೆರವಾಗಿದ್ದೇನೆ. ಜನಪರ ಕೆಲಸಗಳನ್ನು ಎರಡೂ ಕ್ಷೇತ್ರದಲ್ಲಿ ಮಾಡಿರುವುದರಿಂದ ಟಿಕೆಟ್ ಕೇಳಿದ್ದೇನೆ. ಸೊರದಲ್ಲಿ ಬಿಜೆಪಿಯ ಎರಡು ಬಣವಿದೆ. ನೀವು ಯಾವ ಬಣಕ್ಕೆ ಸೇರಿದವರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಬಿಜೆಪಿಯವನು ಎಂದಷ್ಟೇ ಶ್ರೀಪಾದ ರಾವ್ ಹೇಳಿದರು.