ಶಿವಮೊಗ್ಗ, ಜ.೨೩:
ಎಲ್ಲರಿಗೂ ದೇವರು ಎತ್ತರಕ್ಕೆ ಬೆಳೆಯಲು ಸಾಧನೆ ಮಾಡಲು ಅವಕಾಶ ಕೊಟ್ಟಿರುತ್ತಾನೆ. ಅವರು ಎಷ್ಟರ ಮಟ್ಟಿಗೆ ಸದುಪಯೋಗಪಡಿಸಿ ಕೊಳ್ಳುತ್ತಾರೆ ಎನ್ನುವುದು ಅತೀ ಮುಖ್ಯ. ಈ ದಿಕ್ಕಿನಲ್ಲಿ ಕುವೆಂಪು ವಿವಿ ಸಹ್ಯಾದ್ರಿ ಕಾಲೇಜಿನ ಮೂಲಕ ಉತ್ತಮ ಅವಕಾಶ ಕಲ್ಪಿಸಿದೆ ಎಂದು ಕುವೆಂಪು ವಿವಿ ಕುಲಪತಿಗಳಾದ ಪ್ರೊ.ಡಿ.ಪಿ. ವೀರಭದ್ರಪ್ಪ ಹೇಳಿದ್ದಾರೆ.

ಅವರು ಇಂದು ಕುವೆಂಪು ವಿಶ್ವವಿದ್ಯಾಲಯ, ಸಹ್ಯಾದ್ರಿ ವಿಜ್ಞಾನ ಕಾಲೇಜು (ಸ್ವಾಯತ್ತ) ಕಾಲೇಜಿನ ಶ್ರೀ ಜಯಚಾಮರಾಜೇಂದ್ರ ಒಡೆಯರ್ ವೇದಿಕೆಯಲ್ಲಿ ಏರ್ಪಡಿಸಿದ ೧೧ನೇ ವಾರ್ಷಿಕ ಪದವಿ ಪ್ರಧಾನ ಸಮಾರಂಭದಲ್ಲಿ ಪದವಿ ಪ್ರಧಾನ ಮಾಡಿ ಮಾತನಾಡಿದರು.
ಕುವೆಂಪು ವಿವಿಯ ವಿದ್ಯಾರ್ಥಿಗಳು ಜಗದಗಲ ಮುಗಿಲಗಲ ಎನ್ನುವಂತೆ ಈಡೀ ವಿಶ್ವದಲ್ಲಿ ಪಸರಿಸಿ ಉನ್ನತಸ್ಥಾನಕ್ಕೇರಿದ್ದಾರೆ. ಕುವೆಂಪು ವಿವಿ ವಿಶ್ವದ ಅನೇಕ ಪ್ರಸಿದ್ಧ ವಿವಿಯ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಸಾಧನೆ ನಿಲ್ಲಬಾರದು. ಎಜುಕೇಟೆಡ್ ಕ್ಲಾಸ್ ನಿರ್ಮಾಣ ಆಗಬೇಕಿದೆ. ಉನ್ನತ ಶಿಕ್ಷಣಕ್ಕೆ ಬರುವವರ ಸಂಖ್ಯೆ ನಮ್ಮ ದೇಶದಲ್ಲಿ ಸ್ವಾತಂತ್ರ್ಯ ದೊರೆತು ೭೫ವರ್ಷ ಕಳೆದರೂ ಕೂಡ ಕಡಿಮೆ ಪ್ರಮಾಣದಲ್ಲಿದೆ. ೧೦೦ ವರ್ಷ ಸ್ವಾತಂತ್ರ್ಯ ಪೂರೈಸಿದ ಸಂದರ್ಭದ ಲ್ಲಾದರೂ ಶೇ.೫೦ ರಷ್ಟು ಉನ್ನತ ಶಿಕ್ಷಣ ಎಲ್ಲರೂ ಪಡೆಯುವಂತಾಗಲಿ ಎಂದರು.

ಮುಖ್ಯಅತಿಥಿಗಳಾಗಿ ಭಾಗವಹಿಸಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಪಿ.ಸುಬ್ರಮಣ್ಯ ಯಡಪಡಿತ್ತಾಯ ಮಾತನಾಡಿ, ಕೋವಿಡ್-೧೯ ನಮಗೆ ಹೊಸ ಪಾಠ ಕಲಿಸಿದೆ. ನೂತನ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡಿದ್ದು, ಮೇಕಿನ್ ಫಸ್ಟ್ ಕ್ಯಾರೆಕ್ಟರ್ ಮಸ್ಟ್ ಎಂಬ ಪಂಚ್ ಲೈನ್ನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಅರಿತುಕೊಂಡು ತನ್ನ ನಡವಳಿಕೆ ಯನ್ನು ರೂಪಿಸಿಕೊಳ್ಳಬೇಕು. ಯಾವಾಗಲೂ ರಾಷ್ಟ್ರಮೊದಲು. ಚರಿತ್ರೆ ಒಳ್ಳೆದಿದೆ ಆದರೆ ಒಳ್ಳೆಯ ಚಾರಿತ್ರ್ಯ ನಿರ್ಮಾಣ ಮಾಡಿಕೊಂಡರೆ ಮಾತ್ರ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪದವಿ,ರ್ಯಾಂಕ್, ಹಾಗೂ ಸ್ವರ್ಣಪದಕ ಜೊತೆಗೆ ನಗದುಬಹುಮಾನವನ್ನು ಅರ್ಹ ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾ ಯಿತು. ಈ ಸಂದರ್ಭದಲ್ಲಿ ಕುವೆಂಪು ವಿವಿ ಕುಲಸಚಿವರಾದ ಪ್ರೊ. ನವೀನ್ಕುಮಾರ್ ಎಸ್.ಕೆ., ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ. ಪರಮೇಶ್ವರ್ನಾಯ್ಕ್, ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಜೇಶ್ವರಿ ಎನ್ ಮತ್ತಿತರರಿದ್ದರು.
