ವಿವೇಕಾನಂದರು ಬಾರತೀಯರ ಅಧ್ಯಾತ್ಮಿಕ ಬದುಕಿನ ಮೇಲೆ ಬೀರಿದ ಪ್ರಭಾವ ಅಪಾರ.


ರಾ. ಹ. ತಿಮ್ಮೇನಹಳ್ಳಿ, ಶಿವಮೊಗ್ಗ ಅವರ ಬರಹ

“ಪಾಶ್ಚಿಮಾತ್ಯರ ಎದುರು ಭಾರತದ ಭವ್ಯ ಸಂಸ್ಕೃತಿಯನ್ನು ಎತ್ತಿ ಹಿಡಿದ ವಿವೇಕಾನಂದರು”
ನಮ್ಮ ಭಾರತದೇಶ ಹಲವಾರು ಮಹಾನ್ ವ್ಯಕ್ತಿಗಳನ್ನು ನೀಡಿದಂತಹ ದೇಶ. ಆದರೆ ಜನರ ಮನದಾಳದಲ್ಲಿ ನಿಂತವರು,ಜನರ ಮೇಲೆ ಪ್ರಭಾವ ಬೀರಿದವರು ಬೆರಳಣಿಕೆಯಷ್ಟು ಜನ ಮಾತ್ರ,ಅಂಥವರಲ್ಲಿ ಒಬ್ಬರು ವಿಶೇಷ ವ್ಯಕ್ತಿತ್ವವುಳ್ಳವರು ನಮ್ಮ ಸ್ವಾಮಿ ವಿವೇಕಾನಂದರು. ವಿವೇಕಾನಂದರ ಜನ್ಮ ದಿನವಾದ ಜನವರಿ 12 ರ ಇಂದಿನ ದಿನವನ್ನು ರಾಷ್ಟ್ರೀಯ ಯುವ ದಿನ ಎಂದು ಆಚರಿಸಲಾಗುತ್ತದೆ. ವಿಶ್ವದಾದ್ಯಂತ ಕೂಡ ವಿವೇಕಾನಂದರ ಜಯಂತಿಯನ್ನು ಯುವ ದಿನವೆಂದೇ ಆಚರಿಸುತ್ತಾರೆ. ಇದಕ್ಕೆ ವಿಶ್ವ ಮನ್ನಣೆಯು ದೊರೆತಿದೆ.


19ನೇ ಶತಮಾನದಲ್ಲಿ ಪಾಶ್ಚಿಮಾತ್ಯ ರಾಷ್ಟ್ರದವರು,ಇನ್ನೂ ದೂರದ ಅಮೆರಿಕಾದಲ್ಲಿ ಭಾರತ ಎಂಬುದೊಂದು ದೇಶ ಇದೆ ಎಂದು ಜನಸಾಮಾನ್ಯರಿಗೆ ತಿಳಿದಿರಲಿಲ್ಲ, ಇಂಡಿಯಾ ಎಂದರೆ ವೆಸ್ಟ್ ಇಂಡೀಸ್ ಎಂದು ಅನೇಕರ ಭಾವನೆ.ಇಂತಹ ಸನ್ನಿವೇಶದಲ್ಲಿ ಒಬ್ಬ ತರುಣ ಭಾರತೀಯ,ಏಕಾಂಗಿಯಾಗಿ ತನ್ನ. ದೈವೀ. ವಾಗ್ಮಿತೆಯಿಂದ,ಅವಿರತ ಪ್ರಚಾರದಿಂದ ಜೀವಚ್ಚಗಳಂತಿದ್ದ ಕೋಟ್ಯಂತರ ಭಾರತೀಯರ ದೇಹಗಳಲ್ಲಿ ಪ್ರಾಣ, ಶಕ್ತಿಯನ್ನು ಮತ್ತು ಆತ್ಮವಿಶ್ವಾಸ, ಆತ್ಮಗೌರಗವಗಳನ್ನು ತುಂಬಿದ. ಪಾಶ್ಚಿಮಾತ್ಯರಲ್ಲಿ ಭಾರತದ ಬಗ್ಗೆ ಗೌರವಾದರಗಳನ್ನು, ಆಸಕ್ತಿಯನ್ನು ಉಂಟು ಮಾಡಿದ,ಅದೊಂದು ಪವಾಡ ಸದೃಶ್ಯ ಸಾಧನೆ. ಭಾರತದ ಹಿರಿಮೆಯನ್ನು ನಿರ್ಭಯವಾಗಿ ಬಯಲಿಗೆಳೆದು ಪ್ರಪ್ರಥಮ ಭಾರತೀಯ ತರುಣ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ.
“ಬಾಲ್ಯ ಜೀವನ” ಸ್ವಾಮಿ ವಿವೇಕಾನಂದರ ಮೊದಲ ಹೆಸರು ನರೇಂದ್ರ ದತ್ತ ಸುಮಾರು 160.ವರ್ಷಗ ಹಿಂದೆ 1863 ನೇ ಇಸವಿ, ಜನವರಿ 12 ರಂದು ವಿಶ್ವನಾಥದತ್ತ ಮತ್ತು ಭುವನೇಶ್ವರಿದೇವಿ, ಇವರ ಮಗನಾಗಿ ಕಲ್ಕತ್ತಾದಲ್ಲಿ ಜನಿಸಿದರು. ದತ್ತ ಕುಟುಂಬವು ಸಾಕಷ್ಟು ಶ್ರೀಮಂತ ಮನೆತನ, ದಾನ-ಧರ್ಮ, ವಿದ್ಯೆ,ವಿನಯ ಮತ್ತು ಉತ್ತಮ ಸಂಸ್ಕೃತಿಗೆ ಹೆಸರುವಾಸಿಯಾಗಿತ್ತು.
ತಾಯಿ ಭುವನೇಶ್ವರಿ ದೇವಿ ವೀರೇಶ್ವರ ಶಿವನನ್ನು ಕುರಿತು ಅನನ್ಯ ಭಕ್ತಿಯಿಂದ ಪೂಜಿಸಿ ಗಂಡು ಮಗುವಿಗಾಗಿ ಬೇಡಿಕೊಂಡರು, ಶಿವನು ಕನಸಿನಲ್ಲಿ ಬಂದು ನಿನಗೆ ಪುತ್ರನ ಜನನವಾಗುವುದುದೆಂದು ಹೇಳಿದಂತೆ ಆಯಿತು. ನಂತರ ವಿರೇಂದ್ರನ ಜನನವಾಯಿತು.ಬಾಲ್ಯದಿಂದಲೂ ಅಧ್ಯಾತ್ಮಿಕ ವಿಚಾರದಲ್ಲಿ ಅಪಾರ ಆಸಕ್ತಿ, ಶ್ರದ್ದೆ, ಆದರ್ಶ ವ್ಯಕ್ತಿ ರಾಮ-ಸೀತೆಯರಲ್ಲಿ ಅನನ್ಯ ಭಕ್ತಿ ಭಾವ ಅವರಿಗಿತ್ತು. ತಾಯಿ ಮಹಾಭಾರತ,ರಾಮಾಯಣ ಕಥೆಗಳನ್ನು ಹೇಳುತ್ತಾ ಮಗು ನರೇಂದ್ರನ ಮೇಲೆ ಒಳ್ಳೆಯ ಪ್ರಭಾವ ಬೀರಿದರು. ಸದ್ಗುಣಗಳಾದ ಧೈರ್ಯ-ಸ್ಥೈರ್ಯ, ಕರುಣೆ,ಬಡವರನ್ನು ಕಂಡರೆ ಕಾಳಜಿ,ಸಾಧು ಸಂತರನ್ನು ಕಂಡರೆ ಗೌರವ ಆಸಕ್ತಿಯನ್ನು ಹೊಂದಿದ್ದರು.


ಬಾಲಕ ನರೇಂದ್ರ,ತನ್ನ ಹೆಚ್ಚಿನ ವೇಳೆಯನ್ನು ತನ್ನ ಮನೆಯ ಅಟ್ಟದಲ್ಲಿ ಕುಳಿತು ಓದುವುದರಲ್ಲಿಯೇ ಹೆಚ್ಚಿನ ಕಾಲವನ್ನು ಕಳೆಯುತ್ತಿದ್ದ, ಬಾಲ್ಯದಲ್ಲಿಯೇ ನರೇಂದ್ರ ತನ್ನ ಗೆಳೆಯರಿಗೆ ತನ್ನ ಕೈ ನೋಡಿದ ಒಬ್ಬ ಜ್ಯೋತಿಷ್ಯ ಹೇಳಿದಂತೆ ತಾನು ಸನ್ಯಾಸಿಯಾಗುವೆನೆಂದು ಹೇಳುತ್ತಿದ್ದ. ಬಾಲಕ ನರೇಂದ್ರ ಬೆಳೆದು ಯುವಕನಾದ,ಮುಖದಲ್ಲಿ ದಿವ್ಯ ತೇಜಸ್ಸು ಹೊಮ್ಮುತ್ತಿತ್ತು, ಶರೀರದಲ್ಲಿ ದಷ್ಟಪುಷ್ಟ ಅಂಗ ಹೊಂದಿ ಒಬ್ಬ ಕ್ರೀಡಾಪಟುವಿನ ಹಾಗೆ ಕಾಣುತ್ತಿದ್ದರು. ಕಾಲೇಜಿನಲ್ಲಿ ಸಂಗೀತ, ಆದ್ಯಾತ್ಮಿಕ ವಿಚಾರ ಹಾಗೂ ಪಾಶ್ಚಿಮಾತ್ಯರ ವಿಚಾರದ ಬಗ್ಗೆ ಸಾಕಷ್ಟು ಆಸಕ್ತಿಯನ್ನು ಹೊಂದಿದ್ದರು.
” ಗುರುವಿನ ಬೇಟೆ ” 1881 ರಲ್ಲಿ ಪ್ರಥಮ ಬಾರಿಗೆ ಶ್ರೀ ರಾಮಕೃಷ್ಣ ಪರಮ ಹಂಸರನ್ನು ಭೇಟಿ ಮಾಡುವ ಸುಸಂದರ್ಭ ಒದಗಿತು.ನರೇಂದ್ರ,ಗುರುಗಳಿಗೆ ಸ್ವಾಮಿ ತಾವು ದೇವರನ್ನು ನೋಡಿದ್ದೀರಾ? ಗುರುಗಳು ನಾನು ನಿನ್ನನ್ನು ನೋಡುತ್ತಿರುವದು ಎಷ್ಟು ಸತ್ಯವೋ ಅದೇ ರೀತಿ ದೇವರನ್ನು ಕಂಡಿದ್ದೇನೆ ಎಂದು ಹೇಳಿದರು. ಗುರುಗಳು ಅನೇಕ ರೀತಿಯಲ್ಲಿ ಶಿಷ್ಯನನ್ನು ಪರೀಕ್ಷಿಸಿದರು.ದಕ್ಷಿಣೇಶ್ವರದ ಕಾಳಿಮಾತೆಗೆ ಅನನ್ಯ ಭಕ್ತಿಯಿಂದ ಪೂಜಿಸಲು ತೊಡಗಿದರು. ಯುವಕ ನರೇಂದ್ರನಲ್ಲಿದ್ದ ಗೊಂದಲ ಮಾಯವಾಗಿ ನಿಶ್ಚಿತ ಮನಸ್ಸು,ನಿರ್ಮಲ ಮನಸ್ಸು,ಅವರದಾಯಿತು.
“ವೀರಸನ್ಯಾಸಿ” 1886 ರಲ್ಲಿ ಗುರು ಶ್ರೀರಾಮಕೃಷ್ಣರ ನಿಧನವಾಯಿತು ನಂತರ ನರೇಂದ್ರ ಸನ್ಯಾಸಿಯಾಗುವ ದೀಕ್ಷೆ ತೊಟ್ಟರು. ಒಬ್ಬರೇ ಭಾರತದಲ್ಲಿ ಉದ್ದಗಲಕ್ಕೂ ಕಾಲ್ನಡಿಗೆಯಲ್ಲಿ ಪ್ರವಾಸ ಮಾಡಿದರು. ಎಲ್ಲಿ ನೋಡಿದರು ಬಡತನ,ನೋವು,ಹಿಂಸೆಯನ್ನು ಕಂಡರು. ಸೆಪ್ಟೆಂಬರ್ 11-1893 ರಂದು ಅಮೆರಿಕಾದಲ್ಲಿ ಸರ್ವಧರ್ಮ ಸಮ್ಮೇಳನ ನಡೆಯಿತು, ಅವರ ದಿವ್ಯ ತೇಜಸ್ಸು,ಅವರ ವಾಝರಿ ಎಲ್ಲರನ್ನೂ ನಿಬ್ಬೆರಗಾಗಿಸಿತು.ಪಾಶ್ಚಿಮಾತ್ಯರ ಎದುರು ಭಾರತದ ಭವ್ಯ ಸಂಸ್ಕೃತಿಯನ್ನು ಎತ್ತಿ ಹಿಡಿದ ಕೀರ್ತಿ ಈ ವೀರ ಸಂನ್ಯಾಸಿಗೆ ಸಲ್ಲುತ್ತದೆ.1899 ಜೂನ್ 20 ರಂದು ಸಿಸ್ಟರ್ ನಿವೇದಿತರೊಂದಿಗೆ ವಿದೇಶಕ್ಕೆ ಪ್ರಯಾಣ ಬೆಳೆಸಿದರು. ಎರಡು ವಾರಗಳು ಲಂಡನ್ನಲ್ಲಿದ್ದು ಚಿಕಾಗೋ ನಗರದತ್ತ ಪ್ರಯಾಣ ಬೆಳೆಸಿದರು.ಎಲ್ಲಾ ಕಡೆ ಸಂಚರಿಸಿ ಭಾರತದ ಸಂಸ್ಕೃತಿ ಬಗ್ಗೆ,ಧರ್ಮ-ದೇವರು,ಸಂಸಾರದ ಬಗ್ಗೆ ಜನರಿಗೆ ಉಪದೇಶ ನೀಡಿದರು.ಮನುಷ್ಯನ ಜೀವನದ ಗುಟ್ಟು ಏನೆಂದರೆ ಅನುಭವದ ಮುಖಾಂತರ ಶಿಕ್ಷಣ ಪಡೆಯುವುದು, ಪೂರ್ವ ಮತ್ತು ಪಶ್ಚಿಮದ ರಾಷ್ಟ್ರಗಳು ಧಾರ್ಮಿಕ ವಿಚಾರಧಾರೆ, ಸಿದ್ಧಾಂತಗಳ ಬಗ್ಗೆ ಎಂದಿಗೂ ಹೊಡೆದಾಡಬಾರದು, ಎಲ್ಲದರ ತಿರುಳು ಒಂದೇ.
“ದಿವ್ಯದರ್ಶನ” ಸ್ವಾಮಿ ವಿವೇಕಾನಂದರು 1892 ರಲ್ಲಿ ಸಮುದ್ರ ಮಧ್ಯದಲ್ಲಿರುವ ಬಂಡೆಗಲ್ಲಿಗೆ ಈಜಿ ಹೋಗಿದ್ದರು. ಅಲ್ಲಿ ಎರಡು ದಿನ ಉರಿಬಿಸಿಲು, ಕೊರೆಯುವ ಚಳಿ,ಬೀಸುವ ತಂಗಾಳಿ,ಸುರಿಯುವ ಮಳೆಯನ್ನು ಲೆಕ್ಕಿಸದೆ ಹಗಲಿರುಳು ಕುಳಿತು ಧ್ಯಾನ ಮಾಡಿದಾಗ ಭಾರತಾಂಬೆಯ ದಿವ್ಯದರ್ಶನ ಅವರಿಗಾಯಿತು. ಆ ದಿಬ್ಬವನ್ನು ವಿವೇಕಾನಂದರ ದಿಬ್ಬವೆಂದು ಕರೆಯುವರು.ಭಾರತೀಯರೂ ನಮ್ಮ ಸಹೋದರರು, ಭಾರತೀಯರು ನಮ್ಮ ಪ್ರಾಣ,ಭಾರತೀಯ ದೇವ ದೇವತೆಗಳೆಲ್ಲರೂ ನಮ್ಮ ದೇವರು, ಭಾರತೀಯ ಸಮಾಜ ನಮ್ಮ ಬಾಲ್ಯದ ತೊಟ್ಟಿಲು. ತಾರುಣ್ಯದ ನಂದನವನ,ವೃದ್ಧಾಪ್ಯದ ವಾರಣಾಸಿ, ಭಾರತೀಯರ ಶುಭವೆ ನಮ್ಮ ಶುಭ, ಹೀಗೆಂದು ಪ್ರಾರ್ಥನೆ ಮಾಡಿದ ವೀರ ಸನ್ಯಾಸಿಯೇ ಸ್ವಾಮಿ ವಿವೇಕಾನಂದರು. ಸ್ವಾಮಿ ವಿವೇಕಾನಂದರು ಬರೀ ರಾಷ್ಟ್ರಭಕ್ತನೇ ಅಲ್ಲ,ಅವರೊಬ್ಬ ಸಾಧು-ಸಂತ, ಗುರು, ಮಾರ್ಗದರ್ಶಿ, ಧಾರ್ಮಿಕ ಮುಖಂಡ ಯಾರು ನನ್ನ ಶ್ರೀರಾಮಕೃಷ್ಣ ಪರಮಹಂಸರವರಿಗೆ ಶರಣಾಗುವರೋ, ಮಹಾ,ಮಾನವತಾವಾದಿ ದೇವರ ಪ್ರತಿರೂಪವಾದ ಅವರ ಅಡಿದಾವರೆಗಳಿಗೆ ಎರಗುವರೋ ಅವರು ಪರಮ ಪಾವನರಾಗುವರು, ಪುಟವಿಟ್ಟ ಚಿನ್ನದಂತೆ ಪರಮ ಪವಿತ್ರರಾಗುವರು ಎಂಬುದೇ ಸ್ವಾಮಿ ವಿವೇಕಾನಂದರ ವಾಣಿ.
ಜನರಿಗೆ ಶಿಕ್ಷಣ ಕೊಟ್ಟು ಅರಿವನ್ನು ನೀಡಬೇಕೆಂಬುದು ಅವರ ಅಚಲ ನಂಬಿಕೆ. ಸ್ವಾಮಿ ವಿವೇಕಾನಂದರು ಸ್ತ್ರೀಯರ ಬಗ್ಗೆ ಅಪಾರವಾದ ನಂಬಿಕೆ, ಗೌರವ, ಅಭಿಮಾನ, ಹೆಮ್ಮೆಯನ್ನು ಉಳ್ಳವರಾಗಿದ್ದರು. ಹೇಗಪ್ಪಾ ಹೆಣ್ಣುಮಕ್ಕಳ ಸ್ಥಿತಿಯನ್ನು ಸುಧಾರಿಸುವುದು ಎಂಬುದು ಇಡೀ ರಾಷ್ಟ್ರದ ಸಮಸ್ಯೆಯಾದಾಗ ಸ್ವಾಮಿ ವಿವೇಕಾನಂದರು ಸರಳವಾಗಿ ಈ ಸಮಸ್ಯೆಗೆ ಪರಿಹಾರವನ್ನಿತ್ತೆ ಹೀಗೇದರು. ಹೆಣ್ಣು ಮಕ್ಕಳ ಅಭಿವೃದ್ಧಿಗೆ ಏನು ಚಿಂತಿಸಿ ಬೇಕಾಗಿಲ್ಲ ಅವರಿಗೆ ಮೊದಲು ಉತ್ತಮವಾದ ಶಿಕ್ಷಣವನ್ನು ಕೊಡಿ, ಆಮೇಲೆ ಅವರಿಗೆ ಬೇಕಾದ್ದನ್ನು ಅವರೇ ಪಡೆದು ಕೊಳ್ಳುತ್ತಾರೆ.


ಸ್ವತಂತ್ರ ಭಾರತದ ಪ್ರಥಮ ಭಾರತೀಯ ಗವರ್ನರ್ ಜನರಲ್ ಆಗಿದ್ದ ಚಕ್ರವರ್ತಿ ರಾಜಗೋಪಾಲಾಚಾರಿಯವರು ಹೇಳಿದ ಈ ಮಾತುಗಳು ಸ್ವಾಮೀಜಿಯವರಿಗೆ ಭಾರತೀಯರಿಂದ ಸಂದ ನುಡಿನಮನಗಳೆಲ್ಲಲ್ಲಾ ಅತ್ಯುತ್ತಮವಾದವು. ಸ್ವಾಮಿ ವಿವೇಕಾನಂದರು ಹಿಂದೂ ಧರ್ಮವನ್ನು, ಭಾರತವನ್ನು ರಕ್ಷಿಸಿದರು. ಅವರಿಲ್ಲದಿದ್ದರೆ ನಮ್ಮ ಧರ್ಮವು ಉಳಿಯುತ್ತಿರಲಿಲ್ಲ, ನಾವು ಸ್ವಾತಂತ್ರ್ಯವನ್ನು ಗಳಿಸುತ್ತಿರಲಿಲ್ಲ, ಈ ರಾಷ್ಟ್ರ ಅವರಿಗೆ ಚಿರಋಣಿಯಾಗಿರಬೇಕು.
ಭಾರತೀಯರು 21ನೇ ಶತಮಾನದಲ್ಲಿ,ಎಲ್ಲಾ ರಾಷ್ಟ್ರಗಳ ಗಮನಸೆಳೆಯುತ್ತಿದ್ದಾರೆ, ತನ್ನೆಲ್ಲ ಇತಿಮಿತಿಗಳ ನಡುವೆಯೂ ಭಾರತವು, ವಿಶ್ವದ ಒಂದು ಪ್ರಗತಿಶೀಲ ರಾಷ್ಟ್ರವಾಗಿ ರೂಪುಗೊಳ್ಳುತ್ತಿದೆ. ಈ ಬೆಳವಣಿಗೆಯ ಪ್ರಗತಿಶೀಲತೆಯ ಪ್ರತಿಕ್ರೀಯತೆಗೆ ಚಾಲನೆ ಇತ್ತವರು, ಸ್ವಾಮಿ ವಿವೇಕಾನಂದರು, ಹಿಂದೂ ಕ್ಯಾಲೆಂಡರ್ ಪ್ರಕಾರ ಇಂದು ಇವರ 160 ನೇ ಜನ್ಮದಿನ.
1863 ರ ಜನವರಿ 12 ರಂದು ಹುಟ್ಟಿ ತಮ್ಮ 39 ನೇ ವಯಸ್ಸಿನಲ್ಲಿಯೇ ಕಣ್ಮರೆಯಾದರು. ಅವರು ನೀಡಿದ ಕೊಡುಗೆ ಅಪಾರ.

By admin

ನಿಮ್ಮದೊಂದು ಉತ್ತರ

You missed

error: Content is protected !!