ಆರೋಪಿ ರಹೀಮ್

ಶಿವಮೊಗ್ಗ,ಸೆ.21:

ಇಲ್ಲಿನ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಿಳ್ಳಘಟ್ಟದಲ್ಲಿನ ಸಾರ್ವಜನಿಕ ಸ್ಥಳದಲ್ಲಿ ದ್ವಿ ಚಕ್ರ ವಾಹನಗಳನ್ನು ನಿಲ್ಲಿಸಿಕೊಂಡು ಮಾದಕ ವಸ್ತು ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವುದನ್ನು ಪೊಲೀಸರು ಪತ್ರಿಕೆ ಎ ಹಚ್ಚಿ ಬಂಧಿಸಿರುವ ಘಟನೆ ವರದಿಯಾಗಿದೆ.

ಆರೋಪಿ ಯೋಗೇಶ್


ಖಚಿತ ಮಾಹಿತಿ ಮೇರೆಗೆ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ಕು ಜನ ಆರೋಪಿತರ ಬಂಧಸಿರುವ ಪೊಲೀಸರು 200 ಗ್ರಾಂ ತೂಕದ ಮಾದಕ ವಸ್ತು ಗಾಂಜಾ, 03 ದ್ವಿ ಚಕ್ರ ವಾಹನಗಳು, 04 ಮೊಬೈಲ್ ಫೋನ್ ಗಳು ಹಾಗೂ ರೂ 1,495 ನಗದು ಹಣ ವಶಪಡಿಸಿಕೊಂಡಿದ್ದಾರೆ.

ಆರೋಪಿ ಚೇತು


ಆರೋಪಿಗಳ ವಿರುದ್ದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿದೆ
ಉಮೇಶ್ ಈಶ್ವರ್ ನಾಯಕ್, ಡಿ.ವೈಎಸ್.ಪಿ ಶಿವಮೊಗ್ಗ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ


ವಸಂತ್ ಕುಮಾರ್, ಸಿಪಿಐ ದೊಡ್ಡಪೇಟೆ ವೃತ್ತ ರವರ ನೇತೃತ್ವದಲ್ಲಿ ಶಂಕರಮೂರ್ತಿ,ಪಿಎಸ್ಐ, ದೊಡ್ಡಪೇಟೆ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ರುದ್ರೇಶ್


ಆರೋಪಿಗಳಾದ ರಹೀಂ @ ಬಚ್ಚಾ 27 ವರ್ಷ, ವಾಸ ಅಶೊಕನಗರ ಶಿವಮೊಗ್ಗ, ಚೇತನ್ ಕುಮಾರ @ ಚೇತು 21 ವರ್ಷ ಅಣ್ಣಾನಗರ ಶಿವಮೊಗ್ಗ, ಯೋಗೇಶ್ @ ಯೋಗಿ 25 ವರ್ಷ ವಾಸ ಜೋಡಿಕೋಡಿ ಹಳ್ಳಿ ತರಿಕೆರೆ, ಚಿಕ್ಕಮಗಳೂರು ಹಾಗೂ ರುದ್ರೇಶ 30 ವರ್ಷ ವಾಸ ಜೋಡಿಕೋಡಿ ಹಳ್ಳಿ ತರಿಕೆರೆ, ಚಿಕ್ಕಮಗಳೂರು ರವರನ್ನು ಬಂಧಿಸಲಾಗಿದೆ.
ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿ, ಆರೋಪಿತರನ್ನು ನ್ಯಾಯಾಲಯದ ಮುಂದೆ ಹಾಜರ್ ಪಡಿಸಿ, ನ್ಯಾಯಾಂಗ ಬಂಧನಕ್ಕೆ ನೀಡಿರುತ್ತದೆ.

ಮಾಹಿತಿ ನೀಡಲು ಎಸ್ಪಿ ಮನವಿ
ಮಾದಕ ವಸ್ತು ಗಾಂಜಾ ಮಾರಾಟದ ಬಗ್ಗೆ ಸಾರ್ವಜನಿಕರು ಶಿವಮೊಗ್ಗ ಜಿಲ್ಲಾ ಪೊಲೀಸ್ ದೂರವಾಣಿ ಸಂಖ್ಯೆ 9480803301 ಗೆ ಕರೆ ಮಾಡಿ ಮಾಹಿತಿಯನ್ನು ನೀಡಬಹುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ. ಶಾಂತರಾಜ್ ತಿಳಿಸಿದ್ದಾರೆ.
ಮಾಹಿತಿಯನ್ನು ನೀಡಿದವರ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದು ಅವರು ಹೇಳಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!