ಭದ್ರಾವತಿ,ಸೆ.20:
ಭದ್ರಾ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹೊರಕ್ಕೆ ಬಿಟ್ಟಿರುವ ಪರಿಣಾಮ ನೀರು ಉಕ್ಕಿ ಹರಿಯುತ್ತಿದ್ದು, ಹೊಸ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಕವಲಗುಂದಿ ಗ್ರಾಮ ಜಲಾವೃತವಾಗಿದೆ.
ಸಂಜೆ 7 ಗಂಟೆಯವರೆಗೂ 60 ಸಾವಿರ ಕ್ಯೂಸೆಕ್ಸ್‌ ನೀರು ಹೊರ ಬಿಟ್ಟಿರುವ ಪರಿಣಾಮ ನದಿ ತುಂಬಿ ಹರಿಯುತ್ತಿದ್ದು, ಹೊಸ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು, ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದೆ.

ಭದ್ರಾವತಿಯಲ್ಲಿ ಭದ್ರೆಯ ಅಬ್ಬರ


ಡ್ಯಾಮ್’ನ ನಾಲ್ಕು ಗೇಟ್’ಗಳು ಸುಮಾರು 9. 1/2ಅಡಿ ಎತ್ತಿ ನೀರು ಹರಿಸಲಾಗಿದೆ.

ಇನ್ನು, ಭದ್ರಾ ನದಿಯ ರಭಸ ಈ ಬಾರಿ ತುಸು ಜೋರಾಗಿಯೇ ಇದ್ದು, ಭಾರೀ ಗಾತ್ರದ ಮರದ ದಿಮ್ಮಿಗಳು, ಗಿಡಗಳು ನೀರಿನೊಂದಿಗೆ ತೇಲಿ ಬರುತ್ತಿವೆ.

ಭದ್ರಾವತಿಯಲ್ಲಿ ಭದ್ರೆಯ ಅಬ್ಬರ


ಮುಳುಗಿದ ಸೇತುವೆ ಕಣ್ತುಂಬಿಕೊಳ್ಳಲು ಜನಸಾಗರ
ಇನ್ನು, ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದೆ ಎಂಬ ಸುದ್ದಿ ಪ್ರಚಾರವಾಗಿದ್ದೇ ತಡ, ಜನರು ಹೊಸ ಸೇತುವೆ ರಸ್ತೆಯಲ್ಲಿ ತಂಡೋಪತಂಡವಾಗಿ ಜಮಾಯಿಸಿ, ಸೇತುವೆ ಮುಳುಗಡೆಯಾಗಿದ್ದನ್ನು ಕಣ್ತುಂಬಿಕೊಂಡರು.
ಸೇತುವೆಯಿಂದ ಬಹಳಷ್ಟು ದೂರದಲ್ಲಿಯೇ ಬ್ಯಾರಿಕೇಟ್’ಗಳನ್ನು ಹಾಕಲಾಗಿದ್ದು, ಎರಡೂ ಕಡೆಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಉಪವಿಭಾಗಾಧಿಕಾರಿ ಪ್ರಕಾಶ್ ತಂಡದಿಂದ ಪರಿಹಾರ ಕಾರ್ಯ

ನಗರಸಭೆ ಸಕಲ ಸಿದ್ದತೆ
ಭದ್ರಾ ಜಲಾಶಯದಿಂದ ನದಿಗೆ 45 ಸಾವಿರ ಕ್ಯೂಸೆಕ್ಸ್‌ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಸಂಭವಿಸಬಹುದಾದ ನೆರೆ ಪರಿಸ್ಥಿತಿ ಎದುರಿಸಲು ನಗರಸಭೆ ಸರ್ವ ಸನ್ನದ್ಧವಾಗಿದೆ.

ಮುಳುಗಿದ ಸೇತುವೆ


ಈ ಕುರಿತಂತೆ ಮಾತನಾಡಿದ ನಗರಸಭೆ ಆಯುಕ್ತ ಮನೋಹರ್, ಸಂಭವನೀಯ ನೆರೆ ಪರಿಸ್ಥಿತಿ ಎದುರಿಸಲು ನಾವು ಎಲ್ಲ ರೀತಿಯಲ್ಲೂ ಸನ್ನದ್ಧರಾಗಿದ್ದೇವೆ. ಗಂಡೂರಾವ್ ಶೆಡ್, ಕಿಂಗ್ಷಾ ಕಾಲೋನಿ, ಕವಲಗುಂದಿ ಬಡಾವಣೆಗಳಲ್ಲಿ ಈಗಾಗಲೇ ಬಡಾವಣೆಗಳಲ್ಲಿ ಈಗಾಗಲೇ ಮುನ್ನೆಚ್ಚರಿಕಾ ಘೋಷಣೆಗಳನ್ನು ಮಾಡಲಾಗಿದೆ. ಅಗತ್ಯ ಪರಿಸ್ಥಿತಿ ಎದುರಾದರೆ ಅಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲು ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.

ಭದ್ರೆಯಂಗಳದ ಜಲಧಾರೆ


ನದಿ ಪಾತ್ರದ ಜನರು ಮುನ್ನೆಚ್ಚರಿಕೆ ವಹಿಸಬೇಕಿದ್ದು, ಯಾವುದೇ ಕಾರಣಕ್ಕೂ ಯಾರೂ ನದಿಗೆ ಇಳಿಯಬಾರದು ಎಂದು ಆಯುಕ್ತರು ತಿಳಿಸಿದ್ದಾರೆ.
ಇನ್ನು, ನದಿಗೆ ಭಾರೀ ಪ್ರಮಾಣದ ನೀರು ಹರಿಸಿರುವ ಹಿನ್ನೆಲೆಯಲ್ಲಿ ಸಂಭವನೀಯ ನೆರೆ ಪರಿಸ್ಥಿತಿಯನ್ನು ಎದುರಿಸಲು ಅಗತ್ಯವಿರುವ ಎಲ್ಲ ರೀತಿಯ ಮುಂಜಾಗ್ರತೆ ಹಾಗೂ ಸಿದ್ದತೆಗಳನ್ನು ನಗರಸಭೆ ಮಾಡಿಕೊಂಡಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಬರಬೇಡಿ… ಹೊಸಸೇತುವೆಗೆ ಪೊಲೀಸರ ಬ್ರೇಕ್


ಇನ್ನು, ನಗರದ ಎರಡು ಸಮುದಾಯ ಭವನಗಳಲ್ಲಿ ಗಂಜಿ ಕೇಂದ್ರ ತೆರೆಯಲು ನಗರಸಭೆ ಯೋಚಿಸಿದ್ದು, ಪರಿಸ್ಥಿತಿ ನೋಡಿಕೊಂಡು ತುರ್ತಾಗಿ ಆರಂಭ ಮಾಡಲು ಎಲ್ಲ ಸಿದ್ದತೆ ನಡೆಸಿದೆ.
ಇನ್ನು, ಮುನ್ನೆಚ್ಚರಿಕಾ ಕ್ರಮವಾಗಿ ಹೊಸ ಸೇತುವೆ ರಸ್ತೆಯಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಎರಡೂ ಕಡೆಗಳಲ್ಲಿ ಬ್ಯಾರಿಕೇಟ್ ಹಾಕಿ ಬಂದ್ ಮಾಡಲಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!