ಕ್ಷೇತ್ರದ ಅಭಿವೃದ್ಧಿ ಮಾಡುವಲ್ಲಿ ಗ್ರಾಮಾಂತರ ಶಾಸಕೆ ಕೆ.ಬಿ.ಅಶೋಕ್ ನಾಯ್ಕ ಸಂಪೂರ್ಣ ವಿಫಲವಾಗಿದ್ದಾರೆ ಎಂದು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ ಆರೋಪಿಸಿದೆ.
ಇಂದು ಪ್ರೆಸ್ ಟ್ರಸ್ಟ್‍ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಬಿ.ಆರ್. ನಾಗರಾಜ್, ಶಾಸಕ ಅಶೋಕ್ ನಾಯ್ಕರವರು ಸರ್ಕಾರಿ ಯಂತ್ರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಸರ್ಕಾರಿ ಕಾರ್ಯಕ್ರಮವನ್ನು ಪಕ್ಷದ ಕಾರ್ಯಕ್ರಮ ಎಂಬಂತೆ ಬಿಂಬಿಸುತ್ತಿದ್ದಾರೆ. ಸರ್ಕಾರಿ ಜಮೀನುಗಳ ಒತ್ತುವರಿಗೆ ಸಹಕರಿಸುತ್ತಿದ್ದಾರೆ. ಬಗರ್‍ಹುಕುಂ ಹಕ್ಕುಪತ್ರ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಕಲ್ಲು ಕ್ವಾರೆ ಮತ್ತು ಮರಳು ಕ್ವಾರೆಯಿಂದ ಸರ್ಕಾರಕ್ಕೆ ಬರುವ ರಾಜಧನ ಕೊಡಿಸುವಲ್ಲಿ ಸೋತಿದ್ದಾರೆ ಎಂದು ದೂರಿದರು.
ಗ್ರಾಮಾಂಗರ ಕ್ಷೇತ್ರದ ಕಾಮಗಾರಿಗಳೆಲ್ಲವೂ ಕಳಪೆಯಾಗಿವೆ. ಇಲ್ಲಿಯೂ ಶೇ.50ರಷ್ಟು ಪರ್ಸೆಂಟೇಜ್ ಮಾತು ಕೇಳಿಬರುತ್ತಿದೆ. ಲಂಬಾಣಿ,ಭೋವಿ, ತಾಂಡಾ ಮತ್ತು ಕಾಲೋನಿಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸುವುದಾಗಿ ಸುಳ್ಳು ಹೇಳಿದ್ದಾರೆ. ಜಲಜೀವನ ಯೋಜನೆ ಸಂಪೂರ್ಣ ವಿಫಲವಾಗಿದೆ. ತುಂಗಾ ಏತನೀರಾವರಿ ಎರಡನೇ ಹಂತದ ಕಾಮಗಾರಿ ಇನ್ನೂ ಪ್ರಾರಂಭವೇ ಆಗಿಲ್ಲ. ಇಂತಹ ಶಾಸಕರಿಗೆ ಗ್ರಾಮಾಂತರ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಇವರ ವಿರುದ್ಧ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಪ್ರಮುಖರಾದ ಎಸ್.ಗಿರೀಶ್, ಡಿ.ಕೆ. ಮೋಹನ್, ಯವರಾಜ್, ಸಿದ್ದು, ಜಗದೀಶ್, ಮಂಜಭೋವಿ ಮುಂತಾದವರಿದ್ದರು.