ಜಯನಗರ ಪೊಲೀಸ್ ಠಾಣೆಯಲ್ಲಿಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ಮತ್ತು ಸಿಇಎನ್ ಮತ್ತು ಅಪರಾಧ ಪೊಲೀಸ್‌ಠಾಣೆ ಶಿವಮೊಗ್ಗ ವತಿಯಿಂದ ದುರ್ಗಿಗುಡಿ ಸರ್ಕಾರಿ ಶಾಲೆಯ ಮಕ್ಕಳಿಗೆ ೨೦೨೧-೨೨ನೇ ಸಾಲಿನ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮದಲ್ಲಿ ಸೈಬರ್ ಅಪರಾಧಗಳ ಬಗ್ಗೆ ತಿಳುವಳಿಕೆ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿ ಗೂಗಲ್‌ನಲ್ಲಿ ಸಿಗುವ ಎಲ್ಲಾ ಮಾಹಿತಿಗಳು ಸತ್ಯವೆಂದು ನಂಬಬೇಡಿ. ಅದರಲ್ಲಿರುವ ಫೋನ್ ನಂಬರ್ ಮತ್ತು ಕಸ್ಟಮರ್ ಕೇರ್ ನಂಬರ್‌ಗಳು ಸತ್ಯವಲ್ಲ. ಟ್ರೂಕಾಲರ್‌ನಲ್ಲಿ ಬರುವುದೆಲ್ಲವೂ ನಿಜವಲ್ಲ. ಪ್ಲೇ ಸ್ಟೋರ್‌ನಲ್ಲಿ ಸಿಗುವ ಆಪ್‌ಗಳೆಲ್ಲ ಅಧಿಕೃತವಲ್ಲ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ನೀಡಲಾಗುತ್ತದೆ ಎಂಬಮಾತಿಗೆ ಮರುಗಳಾಗ
ಅನಧಿಕೃತ ಆಫ್‌ಗಳಲ್ಲಿ ಹಣ ಹೂಡಿಕೆ ಮಡಿ ಮೋಸಹೋಗಬೇಡಿ. ಬ್ಯಾಂಕ್ ಅಧಿಕಾರಿಗಳೆಂದು ತಿಳಿಸಿ ನಿಮ್ಮ ಎಟಿಮೆ ಕಾರ್ಡ್ ಬ್ಲಾಕ್ ಆಗಿದೆ ಎಂದು ತಿಳಿಸಿ ಕಾರ್ಡ್ ನಂ ಸಿವಿವಿ ನಂ ಅಥವಾ ಓಟಿಪಿಯನ್ನು ಪಡೆದು ಮೋಸ ಮಾಡುವವರ ಬಗ್ಗೆ ಎಚ್ಚರವಿರಲಿ. ಯಾವುದೇ ಕಾರಣಕ್ಕೂ ಓಟಿಪಿ ನೀಡಬೇಡಿ. ಕೌನ್ ಬನೇಗಾ ಕರೋಡ್ ಪತಿ, ಭಾರೀ ಮೊತ್ತದ ಲಾಟರಿ, ಉದ್ಯೋಗ ಕೊಡಿಸುವುದಾಗಿ ಆಮಿಷ, ಆನ್‌ಲೈನ್‌ನಲ್ಲಿ ಸಾಲ ನೀಡುವ ಆಫರ್ ನೀಡುವುದು, ಸೈನಿಕರು ಮತ್ತು ಯೋಧರ ಹೆಸರಿನಲ್ಲಿ ಹಾಗೂ ಒಎಲ್‌ಎಕ್ಸ್ ಮೂಲಕ ಕಡಿಮೆ ಬೆಲೆಗೆ ಬೈಕ್ ಇತ್ಯಾದಿ ಮಾರಾಟಕ್ಕಿದೆ ಎಂದು ಹಣ ಪಡೆದು ಮೋಸ ಮಾಡುವುದು.ಮಕ್ಕಳ ಅಶ್ಲೀಲ, ಲೈಂಗಿಕ ದೃಶ್ಯದ ಫೋಟೊ ವೀಡಿಯೋಗಳನ್ನು ವೀಕ್ಷಿಸುವುದು, ಡೌನ್‌ಲೋಡ್ ಮಾಡುವುದು, ಶೇಖರಣೆ ಮಾಡುವುದು, ಫಾರ್ವರ್ಡ್ ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ.
ಗಾಂಜಾ ಸೇವನೆ ಮತ್ತು ಮಾರಾಟ ಕೂಡ ಅಪರಾಧವಾಗಿದ್ದು, ಈ ಬಗ್ಗೆ ಯಾರಾದರೂ ಆಮಿಷ ನೀಡಿದಲ್ಲಿ ಅಂತಹವರ ಮಾಹಿತಿಯನ್ನ ಕೂಡಲೇ ಪೊಲೀಸರಿಗೆ ತಿಳಿಸಬೇಕು. ಸುಂದರ ಯುವತಿಯರ ಫೋಟೊ ತೋರಿಸಿ ಹನಿ ಟ್ರ್ಯಾಪ್ ಮಾಡುವವರ ಜಾಲ ಕೂಡ ಇದ್ದು, ಈ ಬಗ್ಗೆ ಎಚ್ಚರದಿಂದಿರಬೇಕು. ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಮೊಬೈಲ್ ಬಳಕೆ ಮಾಡುವಾಗ ಎಚ್ಚರವಹಿಸಬೇಕು. ಪಾಸ್‌ವರ್ಡ್ ಮತ್ತು ಓಟಿಪಿಗಳನ್ನು ಯಾವುದೇ ಕಾರಣಕ್ಕೂ ಇತರರಿಗೆ ನೀಡಬಾರದು ಎಂದು ಎಚ್ಚರಿಸಿದರು.
ಸೈಬರ್ ಕ್ರೈಂಗೆ ಸಂಬಂಧಿಸಿದ ದೂರುಗಳನ್ನು ಆನ್‌ಲೈನ್ ಮೂಲಕವೂ ದಾಖಲಿಸಬಹುದಾಗಿದ್ದು, www.cybercrime.gov.inಅಥವಾ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ನಂ.೧೧೨/೦೮೧೮೨-೨೬೧೪೧೩, ಸಿ.ಎನ್. ಕ್ರೈಂ ಪೊಲೀಸ್ ಠಾಣೆ ನಂ.೦೮೧೮೨-೨೬೧೪೨೬/೯೪೮೦೮೦೩೩೮೩ ಸಂಪರ್ಕಿಸಬಹುದು ಎಂದು ಹೇಳಿದರು.