
ತುಂಗಾತರಂಗ ವಿಶೇಷಾಂಕ
ಶಿವಮೊಗ್ಗ,ನ.೨೯:
ಪ್ರಾಧ್ಯಾಪಕನೇ ನಕಲಿ ಪ್ರಮಾಣ ಪತ್ರ ನೀಡುತ್ತಾನೆ ಎಂದರೆ ನಮ್ಮ ಶಿಕ್ಷಣ ವ್ಯವಸ್ಥೆ, ಗುರುಗಳಿಗೆ ಇರುವ ಗೌರವ ಎಲ್ಲಿಗೆ ಬಂದಿದೆ.?
ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಂ.ಹೆಚ್. ವಿದ್ಯಾಶಂಕರ್ ಸಲ್ಲಿಸಿದ್ದ ಪಿಹೆಚ್ಡಿ ಪದವಿಯ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.


ವಿದ್ಯಾಶಂಕರ್ ಅವರು ಬಿಹಾರದ ಬೋಧಗಯಾದಲ್ಲಿರುವ ಮಗದ ವಿಶ್ವವಿದ್ಯಾನಿಲಯದಿಂದ ಪಿಹೆಚ್ಡಿ ಪಡೆದಿರುವುದಾಗಿ ನಕಲಿ ಪ್ರಮಾಣ ಪತ್ರ ಸಲ್ಲಿಸಿದ್ದರು. ಆ ಪ್ರಮಾಣ ಪತ್ರವನ್ನು ಪರಿಶೀಲನೆಗಾಗಿ ಅಲ್ಲಿಯ ವಿಶ್ವ ವಿದ್ಯಾನಿಲಯಕ್ಕೆ ಕಳುಹಿಸಿದಾಗ ಅದು ನಕಲಿ ಎನ್ನುವುದು ಸಾಭೀತಾದ ಹಿನ್ನೆಲೆಯಲ್ಲಿ ಕುವೆಂಪು ವಿಶ್ವ ವಿದ್ಯಾನಿಲಯ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದೆ.


ಅಂತೆಯೇ ವಿದ್ಯಾಶಂಕರ ಅವರನ್ನು ಈ ಆಧಾರದ ಮೇಲೆ ಅಮಾನತ್ತು ಮಾಡಿ ಕುಲಸಚಿವರು ಆದೇಶ ಹೊರಡಿಸಿದ್ದು, ಓರ್ವ ಸಾವಿರಾರು ಮಕ್ಕಳಿಗೆ ಪಾಠ ಹೇಳಬೇಕಾದ ಪ್ರಾಧ್ಯಾಪಕನೇ ನಕಲಿ ದಾಖಲೆ ನೀಡಿ ಒಂದಿಷ್ಟು ವೈಯುಕ್ತಿಕ ಲಾಭಗಿಟ್ಟಿಸಿಕೊಳ್ಳಲು ತಾನು ಅಧಿಕಾರದ ಮೇಲಿನ ಗದ್ದಿಗೆಗೆ ಹೋಗಲು ಪ್ರಯತ್ನಿಸಿದ್ದು, ಸರಿಯೇ..?