
ಸುದ್ದಿ, ಮತ್ತು ಜಾಹೀ944825683183
ಶಿವಮೊಗ್ಗ, ನ.26:
ಇಲ್ಲಿನ ಉಷಾನರ್ಸಿಂಗ್ ಹೋಂ ಸಮೀಪದಲ್ಲಿನ ರೈಲ್ವೆ ಗೇಟ್ ಬಳಿ ಮಲಗಿದ್ದ ಎನ್ನಲಾದ ಯುವಕನೋರ್ವನ ಕಾಲ ಮೇಲೆ ರೈಲು ಹರಿದಿದೆ. ಕಾಲು ತುಂಡಾಗಿದ್ದು ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಕಾಲು ಕಳೆದುಕೊಂಡ ಯುವಕನನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಿನ್ನೆ ರಾತ್ರಿ ಉಷಾ ನರ್ಸಿಂಗ್ ಹೋಮ್ ರೈಲ್ವೇ ಗೇಟ್ ಬಳಿ ಈ ದುರ್ಘಟನೆ ನಡೆದಿದೆ.
ಬಿಹಾರ ಮೂಲದ ಆದಿಲ್ ಎಂಬ ಕಾರ್ಮಿಕ ಕಾಲು ಕಳೆದುಕೊಂಡಿದ್ದಾನೆ.
ಈತ 16 ವರ್ಷದ ಯುವಕನಾಗಿದ್ದು, ರೈಲ್ವೆ ಮೇಲ್ ಸೇತುವೆಯ ಕಾಮಗಾರಿಯಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ನಿನ್ನೆ ರಾತ್ರಿ ಕುಡಿದು ಇಲ್ಲಿ ಮಲಗಿದ್ದ ಎನ್ನಲಾಗಿದೆ.