ಶಿವಮೊಗ್ಗ,ನ.25:
ಇಲ್ಲೊಂದು ವಿಚಿತ್ರ ಕಥೆ ಕೇಳಿ. ಶಿವಮೊಗ್ಗ ಜಿಲ್ಲೆಯ ಸರಹದ್ದಿನ ಯುವಕನೋರ್ವ ಏಕಾಏಕಿ ತನಗೆ ಹೆಣ್ಣು ಹುಡುಕಿಕೊಡಿ ಎಂದು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರಿಗೆ ಮನವಿ ಮಾಡಿದ್ದಾನೆ.

ಅವರ ಕಚೇರಿಯಲ್ಲಿ ನೀಡಿದ ಮನವಿ ಪತ್ರವನ್ನು ಸ್ವೀಕರಿಸಿರುವ ಈ ಚಿತ್ರ ವಿಚಿತ್ರ ಪತ್ರ ಮಾಧ್ಯಮಗಳ ವಲಯದಲ್ಲಿ ಹರಿದಾಡಿದೆ.


ಪತ್ರ ಹೇಗಿದೆ ಎಂತಿದೆ ಎಂಬ ವಿಚಾರ ಇಲ್ಲಿ ಬೇಡ. ನವೆಂಬರ್ 14ರಂದು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯಲ್ಲಿ ನೀಡಿರುವ ಪತ್ರವನ್ನು ಸ್ವೀಕರಿಸಿದ್ದು ಆ ಪತ್ರವನ್ನು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ನೀಡಿರುವುದು ಈ ದಾಖಲೆ ಪ್ರಕಾರ ಪತ್ರದ ಮೂಲಕ ಸತ್ಯ. ಇದು ಸುಳ್ಳು ದಾಖಲೆ ಎಂಬುದಾದರೆ ಮೊದಲೇ ಮಾಧ್ಯಮಗಳಿಗೆ ತಿಳಿಸಬಹುದಾಗಿತ್ತು. ಇದನ್ನು ಸತ್ಯ ಎಂದುಕೊಂಡು ಸುದ್ದಿ ಬರೆಯುವುದಾದರೆ ಪತ್ರದ ವಿವರ ಇಂತಿದೆ.


ಭದ್ರಾವತಿ ಹೊಸಮನೆಯ ಪ್ರವೀಣ ಎಂಬಾತ ತನ್ನ ಸಂಪೂರ್ಣ ದಾಖಲೆಗಳ ವಿಳಾಸದೊಂದಿಗೆ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದು ಆ ಪತ್ರದ ಮುಖ್ಯ ಉದ್ದೇಶ ನನಗೊಂದು ಹೆಣ್ಣು ಕೊಡಿಸಲು ಅಂದರೆ ವಿವಾಹವಾಗಲು ವಧುವನ್ನು ಕೊಡಿಸಲು ವಿನಂತಿಸಿದ್ದಾನೆ.

ಪಾಪ ಎಸ್ಪಿ ಸರ್ ಹೆಣ್ಣು ಹುಡುಕಬೇಕು. ಪ್ರವೀಣ ಇಲ್ಲಿ ತನ್ನ ತಂದೆ ಹಾಗೂ ತಾಯಿಯ ಎಲ್ಲಾ ವಿಷಯಗಳನ್ನು ಬರೆದಿದ್ದು, ನಾನು ಮದುವೆಯಾಗಬೇಕಿದೆ ನನ್ನ ಜಾತಿ ಇದಾಗಿದೆ. ತಾವುಗಳು ದಯಮಾಡಿ ನನಗೊಂದು ಹೆಣ್ಣು ಕೊಡಿಸಿ ಎಂದಿದ್ದಾನೆ.
ಅದೃಷ್ಟವಶಾತ್ ಆತ ತನ್ನ ಜಾತಕವನ್ನು ಕೊಟ್ಟಿಲ್ಲ ಕೊಟ್ಟಿದ್ದರೂ ಆ ನಿದರ್ಶನದ ಕಾಪಿ ಅಂದರೆ ದಾಖಲೆ ನಮ್ಮ ಮಾಧ್ಯಮಗಳ ಮುಂದೆ ಅಡ್ಡಾಡಿಲ್ಲ. ಆತತನ್ನ ಅಧಾರ್ ಕಾರ್ಡ್ ಸೇರಿದಂತೆ ಹಲವು ದಾಖಲೆ ನೀಡಿದ್ದಾನಂತೆ. ಪತ್ರ ಓದಿ.

ಇದೊಂದು ಸುಳ್ಳು ದಾಖಲೆಯ ಮಾಹಿತಿಯಾಗಿದ್ದರೆ ಈ ಸುದ್ದಿ ಮತ್ತು ಮಾಹಿತಿಯ ಮೂಲವನ್ನು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳು ಹುಡುಕಬೇಕಾಗಿದೆ. ಅಂತೆಯೇ ಪ್ರವೀಣ ಬರೆದಿರುವ ಪತ್ರದ ಎರಡನೇ ಪ್ಯಾರಾದಲ್ಲಿ ಅತ್ಯಂತ ಸ್ಪಷ್ಟವಾಗಿ ನಮೂದಿಸಿರುವ ವಿಷಯ ಇಂತಿದೆ.
ನಾನು ವ್ಯವಸಾಯ ಮಾಡುತ್ತಿದ್ದೇನೆ. ನನಗೆ ಜಮೀನಿದೆ. ನನ್ನ ಜಾತಿಯಲ್ಲಿ ಹೆಣ್ಣನ್ನು ಹುಡುಕುತ್ತಿದ್ದಾಗ ಯಾವುದೋ ಸರಿಯಾಗಿಲ್ಲ. ತಾವುಗಳು ದಯಮಾಡಿ ನನ್ನ ಜಾತಿಯಲ್ಲಿ ಹೆಣ್ಣನ್ನು ಹುಡುಕಿ ಕೊಡಿ ಎನ್ನುವ ಮೂಲಕ ಶಿವಮೊಗ್ಗ ಜಿಲ್ಲೆಯ ಮುಖ್ಯ ಅಧಿಕಾರಿಗೆ ಪತ್ರ ಬರೆದಿದ್ದಾನೆ. ಅದನ್ನು ತಪ್ಪು ಎನ್ನಲಾಗದು ಆದರೆ ಆ ಪತ್ರವನ್ನು ಸ್ವೀಕರಿಸಿದವರು ಅದಕ್ಕೆ ಸ್ವೀಕರಿಸಿದ ದಾಖಲೆಯನ್ನು ನೀಡಿದ್ದಾರೆ. ಅವರದು ಬಂದ ಟಪಾಲಿಗೆ ಸೀಲು ಗುದ್ದಿ ಕೊಡೋದಷ್ಟೇ ಅಲ್ವೇ…!?
15 ದಿನದೊಳಗೆ ಕೊಲೆ ಆರೋಪದ ದೋಷಾರೋಪಣ ಪಟ್ಟಿ ಸಲ್ಲಿಕೆ- ಸಿಸಿ ಕ್ರಮಾಂಕ ಇದು ಶಿವಮೊಗ್ಗ ಪೊಲೀಸ್ ಇಲಾಖೆಯ ಗ್ರೇಟ್ ಸಾಧನೆ https://tungataranga.com/?p=16598 ಮೊದಲ ಸಾಧನೆಯ ಸುದ್ದಿ ಓದಲು ಲಿಂಕ್ ಕ್ಲಿಕ್ ಮಾಡಿ👆

ಈ ಪತ್ರ ಏನಾದರೂ ತಪ್ಪಾಗಿದ್ದರೆ ಅದನ್ನು ಮುಲಾಜಿಲ್ಲದೆ ಪರಿಶೀಲಿಸಬೇಕು ಹಾಗೂ ಪರೀಕ್ಷಿಸಬೇಕು. ನನಗೆ ಭದ್ರಾವತಿ ನಗರಸಭೆ ಸದಸ್ಯ ಕದರೇಶ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರನಾಯಕ ಅವರು ಪರಿಚಿತರಾಗಿದ್ದಾರೆ ಎಂದೂ ಆತ ಹೇಳಿದ್ದಾನೆ. ತಪ್ಪಾಗಿದ್ದಲ್ಲಿ ಈ ದಾಖಲೆಗಳನ್ನು ಸೃಷ್ಟಿಸಿದವರ ವಿರುದ್ದ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂಬುದು ಪತ್ರಿಕೆಯ ಆಶಯ
ಶಿವಮೊಗ್ಗ ಶುಭಮಂಗಳ ಮಗ್ಗುಲ ರಸ್ತೆಯಲ್ಲಿ ಟೈಲ್ಸ್ ಅಳವಡಿಕೆ ಕಾಮಗಾರಿ ಕಳಪೆ: ಮಲಗಿಕೊಂಡಿರುವ ಲೋಕೋಪಯೋಗಿ ಇಲಾಖೆ..!? https://tungataranga.com/?p=16586 ಕಳಪೆ ಕಾಮಗಾರಿ ಚಿತ್ರಲೋಕ ನೋಡಲು ಲಿಂಕ್ ಕ್ಲಿಕ್ ಮಾಡಿ👆