ಶಿವಮೊಗ್ಗ, ನ.25:

ಶಿವಮೊಗ್ಗ ಪೊಲೀಸ್ ಇಲಾಖೆಯ ಮೊದಲ ಸಾಧನೆ

ಶಿವಮೊಗ್ಗ ಪೊಲೀಸ್ ಇಲಾಖೆಯಲ್ಲೊಂದು ಹೊಸತನದೊಂದು ತ್ವರಿತಗತಿಯ ಕಾರ್ಯ. ಕೊಲೆ ಪ್ರಕರಣವೊಂದು ನಡೆದ 15ದಿನದಲ್ಲೇ ತ್ವರಿತವಾಗಿ ದೋಷಾರೋಪಣ ಪಟ್ಟಿಯನ್ನು ತಯಾರಿಸಿ ಸರ್ಕಾರಿ ಅಭಿಯೋಜಕರಿಂದ ಅನುಮೋದನೆಯನ್ನು ಪಡೆದು ಸಾಗರದ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಿ ಸಿಸಿ ಕ್ರಮಾಂಕವನ್ನು ಪಡೆದಿದೆ.

ವಿವರ: ಕಳೆದ ನವೆಂಬರ್ 7ರ ರಾತ್ರಿ ಸಾಗರ ತಾಲ್ಲೂಕು ಮುರಳ್ಳಿ ಮರಾಠಿ ಗ್ರಾಮದ ತಿಮ್ಮಪ್ಪ ಎಂಬ 52 ವರ್ಷದ ವ್ಯಕ್ತಿಯ ಮನೆಗೆ ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ಸಿದ್ದಯಾನೆ ಸಿದ್ದಪ್ಪ 37 ವರ್ಷದ ವ್ಯಕ್ತಿ ಅಕ್ರಮವಾಗಿ ಪ್ರವೇಶಿಸಿ ಅನಗತ್ಯ ಜಗಳ ತೆಗೆದು ತಿಮ್ಮಪ್ಪನ ಹೆಂಡತಿ ಲಕ್ಷ್ಮೀಯೊಂದಿಗೆ ಗಲಾಟೆ ಮಾಡಿ ತಿಮ್ಮಪ್ಪನಿಗೆ ದೊಣ್ಣೆಯಿಂದ ಹೊಡೆದು ಗಾಯಪಡಿಸಿದ್ದನು.

ಶಿವಮೊಗ್ಗ ಮೆಗಾನ್ ಹಾಗೂ ಉಡುಪಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ತಿಮ್ಮಪ್ಪ ನ.09ರಂದು ಸಾವುಕಂಡಿದ್ದರು. ಅಂದು ಲಕ್ಷ್ಮೀ ಅವರು ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ನೀಡಿದ ಹೇಳಿಕೆಯನುಸಾರ ಕಾರ್ಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಆರೋಪಿ ಸಿದ್ದ ಯಾನೆ ಸಿದ್ದಪ್ಪನನ್ನು ಅಂದೇ ಪತ್ತೆ ಮಾಡಿ ಬಂಧಿಸುವ ಜೊತೆಗೆ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್, ಉಪ ಅಧೀಕ್ಷಕ ವಿಕ್ರಂ ಅಮಟೆ, ಸಾಗರದ ಸಹಾಯಕ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಮಾರ್ಗದರ್ಶನದಲ್ಲಿ ಕಾರ್ಗಲ್ ಇನ್ಸ್‌ಪೆಕ್ಟರ್ ಕೃಷ್ಣಪ್ಪ, ಸಾಗರ ಪೇಟೆ ಇನ್ಸ್‌ಪೆಕ್ಟರ್ ಸೀತಾರಾಂ, ಡೆಪ್ಯೂಟಿ ಡೈರೆಕ್ಟರ್ ಛಾಯಾಕುಮಾರಿ ಬಿ.ಹೆಚ್. ಶಾವಿ ಸೈಂನ್ಟಿಫಿಕ್ ಅಡೈಜರ್ ರಾಘವೇಂದ್ರ, ಉಡುಪಿ ಜಿಲ್ಲಾ ವೈದಾಧಿಕಾರಿ ರಮೇಶ್ ಕುಂಧೇರ್, ನ್ಯಾಯಾಲಯದ ಸರ್ಕಾರಿ ಅಭಿಯೋಜಕ ಕೆ.ಅಣ್ಣಪ್ಪ, ಜಿಲ್ಲಾ ಸಿಡಿಆರ್ ವಿಭಾಗದ ಇಂದ್ರೇಶ್, ಗುರು, ವಿಜಯ್ ಹಾಗೂ ತನಿಖಾ ಸಹಾಯಕರಾದ ಕಾರ್ಗಲ್ ಪಿಎಸ್‌ಐ ಜಿ.ತಿರುಮಲೇಶ್, ಎಎಸ್‌ಐ ಸಿದ್ದರಾಮಪ್ಪ, ಜೋಗ ಠಾಣೆಯ ಎಆರ್‌ಎಸ್‌ಐ ನರಸಿಂಹ, ಸಿಬ್ಬಂದಿಗಳಾದ ಜಯೇಂದ್ರ, ಮಂಜುನಾಥ್ ನಾಯ್ಕ್, ಸರಸ್ವತಿ, ಲಲಿತಮ್ಮ, ಜಯಂತ್, ಶೋಬಾ, ಶಿವಕುಮಾರ್, ಶ್ರೀಧರ್, ಲೋಕೇಶ್, ಓಂ ಪ್ರಕಾಶ್, ನಾಮಧಾರಿ ಬಸವರಾಜ್, ಚೇತನ್‌ಕುಮಾರ್, ಲಕ್ಷ್ಮಣ ನಾಯಕನೂರು ಇವರುಗಳ ಸಹಾಯದೊಂದಿಗೆ ಆರೋಪಿಯನ್ನು ಪತ್ತೆ ಹಚ್ಚಿ ತನಿಖೆ ಕೈಗೊಂಡು ಸಹಾಯಕವಾದ ದಾಖಲೆಗಳನ್ನು 24-11-2022 ರಂದು ನ್ಯಾಯಾಲಯಕ್ಕೆ 15 ದಿನದಲ್ಲೇ ತ್ವರಿತವಾಗಿ ದೋಷಾರೋಹಣ ಪಟ್ಟಿಯನ್ನು ತಯಾರಿಸಿ ಸರ್ಕಾರಿ ಅಭಿಯೋಜಕರಿಂದ ಅನುಮೋದನೆ ಪಡೆದು ನ್ಯಾಯಾಲಯಕ್ಕೆ ಸಲ್ಲಿಸಿ ಸಿಸಿ ಸಲ್ಲಿಕೆಯನ್ನು ಪಡೆದುಕೊಂಡಿದೆ.
15 ದಿನದೊಳಗೆ ಕೊಲೆ ಆರೋಪದ ದೋಷಾರೋಪಣ ಪಟ್ಟಿ ಸಲ್ಲಿಕೆ-ಸಿಸಿ ಕ್ರಮಾಂಕ
ಇದು ಶಿವಮೊಗ್ಗ ಪೊಲೀಸ್ ಇಲಾಖೆಯ ಮೊದಲ ಸಾಧನೆ

ಶಿವಮೊಗ್ಗ, ನ.25: ಶಿವಮೊಗ್ಗ ಪೊಲೀಸ್ ಇಲಾಖೆಯಲ್ಲೊಂದು ಹೊಸತನದೊಂದು ತ್ವರಿತಗತಿಯ ಕಾರ್ಯ. ಕೊಲೆ ಪ್ರಕರಣವೊಂದು ನಡೆದ 15ದಿನದಲ್ಲೇ ತ್ವರಿತವಾಗಿ ದೋಷಾರೋಪಣ ಪಟ್ಟಿಯನ್ನು ತಯಾರಿಸಿ ಸರ್ಕಾರಿ ಅಭಿಯೋಜಕರಿಂದ ಅನುಮೋದನೆಯನ್ನು ಪಡೆದು ಸಾಗರದ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಿ ಸಿಸಿ ಕ್ರಮಾಂಕವನ್ನು ಪಡೆದಿದೆ.
ವಿವರ: ಕಳೆದ ನವೆಂಬರ್ 7ರ ರಾತ್ರಿ ಸಾಗರ ತಾಲ್ಲೂಕು ಮುರಳ್ಳಿ ಮರಾಠಿ ಗ್ರಾಮದ ತಿಮ್ಮಪ್ಪ ಎಂಬ 52 ವರ್ಷದ ವ್ಯಕ್ತಿಯ ಮನೆಗೆ ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ಸಿದ್ದಯಾನೆ ಸಿದ್ದಪ್ಪ 37 ವರ್ಷದ ವ್ಯಕ್ತಿ ಅಕ್ರಮವಾಗಿ ಪ್ರವೇಶಿಸಿ ಅನಗತ್ಯ ಜಗಳ ತೆಗೆದು ತಿಮ್ಮಪ್ಪನ ಹೆಂಡತಿ ಲಕ್ಷ್ಮೀಯೊಂದಿಗೆ ಗಲಾಟೆ ಮಾಡಿ ತಿಮ್ಮಪ್ಪನಿಗೆ ದೊಣ್ಣೆಯಿಂದ ಹೊಡೆದು ಗಾಯಪಡಿಸಿದ್ದನು. ಶಿವಮೊಗ್ಗ ಮೆಗಾನ್ ಹಾಗೂ ಉಡುಪಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ತಿಮ್ಮಪ್ಪ ನ.09ರಂದು ಸಾವುಕಂಡಿದ್ದರು. ಅಂದು ಲಕ್ಷ್ಮೀ ಅವರು ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ನೀಡಿದ ಹೇಳಿಕೆಯನುಸಾರ ಕಾರ್ಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಆರೋಪಿ ಸಿದ್ದ ಯಾನೆ ಸಿದ್ದಪ್ಪನನ್ನು ಅಂದೇ ಪತ್ತೆ ಮಾಡಿ ಬಂಧಿಸುವ ಜೊತೆಗೆ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್, ಉಪ ಅಧೀಕ್ಷಕ ವಿಕ್ರಂ ಅಮಟೆ, ಸಾಗರದ ಸಹಾಯಕ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಮಾರ್ಗದರ್ಶನದಲ್ಲಿ ಕಾರ್ಗಲ್ ಇನ್ಸ್‌ಪೆಕ್ಟರ್ ಕೃಷ್ಣಪ್ಪ, ಸಾಗರ ಪೇಟೆ ಇನ್ಸ್‌ಪೆಕ್ಟರ್ ಸೀತಾರಾಂ, ಡೆಪ್ಯೂಟಿ ಡೈರೆಕ್ಟರ್ ಛಾಯಾಕುಮಾರಿ ಬಿ.ಹೆಚ್. ಶಾವಿ ಸೈಂನ್ಟಿಫಿಕ್ ಅಡೈಜರ್ ರಾಘವೇಂದ್ರ, ಉಡುಪಿ ಜಿಲ್ಲಾ ವೈದಾಧಿಕಾರಿ ರಮೇಶ್ ಕುಂಧೇರ್, ನ್ಯಾಯಾಲಯದ ಸರ್ಕಾರಿ ಅಭಿಯೋಜಕ ಕೆ.ಅಣ್ಣಪ್ಪ, ಜಿಲ್ಲಾ ಸಿಡಿಆರ್ ವಿಭಾಗದ ಇಂದ್ರೇಶ್, ಗುರು, ವಿಜಯ್ ಹಾಗೂ ತನಿಖಾ ಸಹಾಯಕರಾದ ಕಾರ್ಗಲ್ ಪಿಎಸ್‌ಐ ಜಿ.ತಿರುಮಲೇಶ್, ಎಎಸ್‌ಐ ಸಿದ್ದರಾಮಪ್ಪ, ಜೋಗ ಠಾಣೆಯ ಎಆರ್‌ಎಸ್‌ಐ ನರಸಿಂಹ, ಸಿಬ್ಬಂದಿಗಳಾದ ಜಯೇಂದ್ರ, ಮಂಜುನಾಥ್ ನಾಯ್ಕ್, ಸರಸ್ವತಿ, ಲಲಿತಮ್ಮ, ಜಯಂತ್, ಶೋಬಾ, ಶಿವಕುಮಾರ್, ಶ್ರೀಧರ್, ಲೋಕೇಶ್, ಓಂ ಪ್ರಕಾಶ್, ನಾಮಧಾರಿ ಬಸವರಾಜ್, ಚೇತನ್‌ಕುಮಾರ್, ಲಕ್ಷ್ಮಣ ನಾಯಕನೂರು ಇವರುಗಳ ಸಹಾಯದೊಂದಿಗೆ ಆರೋಪಿಯನ್ನು ಪತ್ತೆ ಹಚ್ಚಿ ತನಿಖೆ ಕೈಗೊಂಡು ಸಹಾಯಕವಾದ ದಾಖಲೆಗಳನ್ನು 24-11-2022 ರಂದು ನ್ಯಾಯಾಲಯಕ್ಕೆ 15 ದಿನದಲ್ಲೇ ತ್ವರಿತವಾಗಿ ದೋಷಾರೋಹಣ ಪಟ್ಟಿಯನ್ನು ತಯಾರಿಸಿ ಸರ್ಕಾರಿ ಅಭಿಯೋಜಕರಿಂದ ಅನುಮೋದನೆ ಪಡೆದು ನ್ಯಾಯಾಲಯಕ್ಕೆ ಸಲ್ಲಿಸಿ ಸಿಸಿ ಸಲ್ಲಿಕೆಯನ್ನು ಪಡೆದುಕೊಂಡಿದೆ.

By admin

ನಿಮ್ಮದೊಂದು ಉತ್ತರ

You missed

error: Content is protected !!