
ತುಂಗಾತರಂಗ ವಿಶೇಷಾಂಕ
ಶಿವಮೊಗ್ಗ, ನ.24: ಮುಂಜಾನೆ ಹಾಲು, ಮೊಸರು ತರಲು ಹೊರಟಿರಾ? ತಲಾ ಪ್ಯಾಕೇಟಿಗೆ ಎರಡು ರೂ ಜಾಸ್ತಿ ತಗೊಂಡು ಹೋಗಿ.
ಇಂದಿನಿಂದ ನಂದಿನಿ ಹಾಲು ಮತ್ತು ಮೊಸರಿನ ದರವನ್ನ ಹೆಚ್ಚಳ ಮಾಡಲಾಗಿದೆ. ಪ್ರತಿ ಲೀಟರ್ ಗೆ ನಂದಿನಿ ಹಾಲು ಮತ್ತು ಮೊಸರಿನ ದರ 2 ರೂಗೆ ಹೆಚ್ಚಳ ಮಾಡಿ ಆದೇಶಿಸಲಾಗಿದೆ.

ಹಾಲಿನ ದರ ಹೆಚ್ಚಳಕ್ಕೆ ಬೇಡಿಕೆ ಇಟ್ಟು ಅನೇಕ ದಿನಗಳೇ ಕಳೆದಿದ್ದವು. ಮಜ್ಜಿಗೆ ಮತ್ತು ಇತರೆ ಹಾಲಿನ ಉತ್ಪನ್ನಗಳ ಮೇಲಿನ ದರವನ್ನ ಈ ಹಿಂದೆ ಹೆಚ್ಚಿಸಲಾಗಿತ್ತು. ಆದರೆ ಚುನಾವಣೆ ಹಿನ್ನಲೆಯಲ್ಲಿ ಅನೇಕ ದಿನಗಳಿಂದ ಹಾಲಿನ ಮತ್ತು ಮೊಸರಿನ ದರ ಏರಿಸದೆ ತಡೆಹಿಡಿಯಲಾಗಿತ್ತು.
ಆದರೆ ನಿನ್ನೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳೆ ಸರ್ಕಾರ ಪ್ರತಿ ಲೀಟರ್ ಗೆ 2 ರೂ. ಹೆಚ್ಚಳ ಮಾಡಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದು ಇಂದಿನಿಂದಲೇ ಜಾರಿಯಾಗಲಿದೆ ಎಂದು ಹೇಳಿದ್ದಾರೆ.

