ನಗರದ ಸೀಗೆಹಟ್ಟಿಯ ಪಾಲಿಕೆ ಜಾಗದಲ್ಲಿದ್ದ ಅಂಗಡಿಯ ಹಳೇ ಕಟ್ಟಡ ಜಾಗ ತೆರವಿನ ವೇಳೆ ಗಣಪತಿ ಪ್ರತಿಮೆಯೊಂದು ಪತ್ತೆಯಾಗಿದೆ. ಇದನ್ನು ಗಮನಿಸಿದ ಜನತೆ ಈ ಜಾಗದಲ್ಲಿ ದೇವಸ್ಥಾನ ಆಗಬೇಕೆಂದು ಆಗ್ರಹಿಸಿದ್ದಾರೆ.


ಸೀಗೆಹಟ್ಟಿ ಗಣಪತಿ ವೃತ್ತದ ಬಳಿ ಪಾಲಿಕೆ ಜಾಗದಲ್ಲಿ ಇದ್ದ ಪೆಟ್ಟಿಗೆ ಅಂಗಡಿಯನ್ನ ಕೆಡವಿ ಸ್ವಚ್ಛ ಮಾಡುತ್ತಿದ್ದ ವೇಳೆ ಗಣಪತಿ ವಿಗ್ರಹದೊರೆತಿದೆ. ಈ ವಿಗ್ರಹ ಹಳೆಯ ಕಾಲದ್ದಾಗಿದ್ದು ಇಲ್ಲಿ ದೇವಸ್ಥಾನ ನಿರ್ಮಾಣವಾಗಬೇಕೆಂದು ಎಂದು ಆಗ್ರಹಿಸಿದ್ದಾರೆ.
ಇಲ್ಲಿ ಅಂತರ ಘಟ್ಟಮ್ಮನ ನಾಗರ ಹಾವಿದ್ದು ಅದು ದೇವರ ಹಾವಾಗಿದೆ. ಈ ಜಾಗದಲ್ಲಿ ನಾಗರ ಕಲ್ಲಿತ್ತು. ದೇವರ ಕಲ್ಲು ದೊರತಿರುವುದರಿಂದ ಈ ಜಾಗದಲ್ಲಿ ದೇವಸ್ಥಾನ ಕಟ್ಟಬೇಕು. ಕಾಂಪ್ಲೆಕ್ಸ್ ಜೊತೆಗೆ ದೇವಸ್ಥಾನ ನಿರ್ಮಾಣವಾಗಲಿ ಎಂದು ಆಗ್ರಹಿಸಿದರು.


ಆದರೆ ಸ್ಥಳಕ್ಕೆ ಭೇಟಿ ನೀಡಿದ ಪಾಲಿಕೆ ಬಿಜೆಪಿ ಸದಸ್ಯರೊಬ್ಬರು ದೇವರನ್ನ ತಂದು ನಿರ್ಮಿಸಲಾಗಿದೆ ಎಂದು ಹೇಳಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮೀಶಂಕರ್ ನಾಯ್ಕ್, ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ಮಾಜಿ ಮೇಯರ್ ಎಸ್.ಕೆ ಮರಿಯಪ್ಪ, ದೀಪಕ್ ಸಿಂಗ್, ಕನ್ನಡ ಕಾರ್ಮಿಕರ ಸಂಘದ ಅಧ್ಯಕ್ಷ ವಾಟಾಳ್ ಮಂಜು ಮೊದಲಾದವರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!