ಶಿವಮೊಗ್ಗ, ನ.22:
ಚುಮು ಚುಮು ಚಳಿಯ ನಡುವೆ ಬಿರು ಬಿಸಿಲು ಕಾಣಿಸಿಕೊಳ್ಳಬೇಕಿದ್ದ ಹೊತ್ತಿನಲ್ಲಿ ಇಂದು ಜಿಟಿಜಿಟಿ ಮಳೆ ಸುರಿದು ಇಡೀ ವಾತಾವರಣವನ್ನು ಬದಲು ಮಾಡಿದೆ.
ಶಿವಮೊಗ್ಗ ನಗರದ ಇಂದಿನ ಆರಂಭ ವಿಶೇಷವಾಗಿತ್ತು. ಚುಮುಚುಮು ಚಳಿಯ ಜೊತೆಗೆ ಮುಂಜಾನೆ ಏಳರ ಹೊತ್ತಿಗೆ ಜಿಟಿ ಜಿಟಿ ಮಳೆಯ ಸಿಂಚನ ಕಂಡಿದೆ.
ಬೆಳಿಗ್ಗೆಯಿಂದ ಇಂದಿನ ವಾತಾವರಣವೇ ಬದಲಾವಣೆಯಾಗಿದ್ದು ಮೋಡ ಕವಿತ ವಾತಾವರಣ ದಟ್ಟವಾಗಿದೆ. ಚಳಿಗಾಲ ತನ್ನ ತೀವ್ರತೆಯನ್ನು ತೋರುತ್ತಿದ್ದರೆ ಅಲ್ಲಲ್ಲಿ ಬೀಳುತ್ತಿದ್ದ ಮಳೆಯ ಜಿಬಿರು ಹನಿ ವಾತಾವರಣವನ್ನು ಬದಲಾಯಿಸಿದೆ ಎನ್ನಬಹುದು.
ಚಳಿ, ಮಳೆ ಹಾಗೂ ಅಲ್ಪಸ್ವಲ್ಪ ಬಿಸಿಲನ್ನು ನೋಡಿದ ಇಂದಿನ ದಿನ ನಿಜಕ್ಕೂ ಸ್ಪೆಷಲ್ ಡೇ ಎನ್ನಬಹುದು ಅಲ್ವೆ..?