‌‌‌‌‌‌
ಕಂಬ್ಳಿಹುಳ.. ಹೆಸರು ಕೇಳಿದ್ರೇನೇ ಮೈ ಜುಮ್ ಅನಿಸ್ತಿದ್ಯಾ.. ಈ ಹೆಸರಿನ ಚಿತ್ರವೊಂದು ನವೆಂಬರ್ 4 ಕ್ಕೆ ಸ್ಯಾಂಡಲ್’ವುಡ್’ನಲ್ಲಿ ರಾಜ್ಯಾಧ್ಯಂತ ತೆರೆಗೆ ಬಂದಿದೆ. ಗೋಣಿಚೀಲ, ಜೋಡಿಕುದುರೆಯಂತಹ ಅದ್ಭುತ ಕಿರುಚಿತ್ರಗಳ ಮೂಲಕ ಖ್ಯಾತರಾಗಿದ್ದ ಮಲೆನಾಡ ಹುಡುಗ ಕಮ್ಮರಡಿಯ ನವನ್ ಶ್ರೀನಿವಾಸ್ ಕಂಬ್ಳಿಹುಳ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.


ಕಂಬ್ಳಿಹುಳ ಸಿನಿಮಾವು ಮಲೆನಾಡಿನ ಸುಂದರ ಪರಿಸರದಲ್ಲಿ ನಡೆವ ಪ್ರೇಮಕಥೆಯಾಗಿದ್ದು, ತೀರ್ಥಹಳ್ಳಿ, ಶೃಂಗೇರಿ, ಕೊಪ್ಪ, ಸಾಗರ, ಸಕಲೇಶಪುರಗಳ ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ಕಂಬ್ಳಿಹುಳ ಚಿಟ್ಟೆಯಾಗುವುದು ಪ್ರಕೃತಿ ನಿಯಮ. ಇದನ್ನೇ ಸೂಚ್ಯವಾಗಿ ಟೈಟಲ್ ಇಟ್ಟಿದ್ದಾರೆ ನಿರ್ದೇಶಕ ನವನ್ ಶ್ರೀನಿವಾಸ್.


ಸಿನಿಮಾದ ಎರಡು ಹಾಡುಗಳು ಬಿಡುಗಡೆಯಾಗಿ ಟ್ರೆಂಡ್ ಸೃಷ್ಟಿಸಿದ್ದು, ‘ಜಾರಿಬಿದ್ದರು’ ಹಾಡು ಯುವಪ್ರೇಮಿಗಳ ನಿದ್ದೆಗೆಡಿಸಿದರೆ, ತಾಯಿ-ಮಗನ ಸೆಂಟಿಮೆಂಟ್ ಇರುವ ‘ಲಾಲಿಲಾಲಿ” ಹಾಡು ಜನರನ್ನು ಮಂತ್ರಮುಗ್ಧಗೊಳಿಸಿದೆ.


ಕಂಬ್ಳಿಹುಳ ಚಿತ್ರದ ಮೂಲಕ ಅಂಜನ್ ನಾಗೇಂದ್ರ ಹೀರೋ ಆಗಿ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದು, ಇವರಿಗೆ ಜೋಡಿಯಾಗಿ ಮಲೆಯಾಳಿ ಹುಡುಗಿ ಪಾತ್ರದಲ್ಲಿ ಅಶ್ವಿತಾ ಹೆಗ್ಡೆ ಮುದ್ದಾಗಿ ನಟಿಸಿದ್ದಾರೆ. ಇನ್ನುಳಿದಂತೆ, ರೋಹಿತ್, ದೀಪಕ್ ರೈ ಪಣಜೆ, ಸಂಧ್ಯಾ ಅರಕೆರೆ, ಸಂಪತ್ ಜೆ. ರಾಮ್ ನಟಿಸಿದ್ದಾರೆ. ಚಿತ್ರಕ್ಕೆ ಶಿವಪ್ರಸಾದ್ ಸಂಗೀತವಿದ್ದು, ಸತೀಶ್ ರಾಜೇಂದ್ರ ಛಾಯಾಗ್ರಹಣವಿದೆ. ಗ್ರೇ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಸಿನಿಮಾಗೆ ವಿಜಯ್, ನವೀನ್, ಪುನೀತ್ ಹಾಗೂ ಗುರು ಬಂಡವಾಳ ಹೂಡಿದ್ದಾರೆ. ಮಲೆನಾಡ ಪ್ರತಿಭೆ ಹಾಗೂ ನವ ಯುವ ಕಲಾವಿಧರ ಚಿತ್ರವನ್ನು ಹೋಗಿ ನೋಡಿ ಬನ್ನಿ. ಸಿನಿಮಾ ಬಗ್ಗೆ ಕುಶಿಪಡಿ. ಶಿವಮೊಗ್ಗದ ಮಾಲ್ ನಲ್ಲಿ ಈ ಚಿತ್ರದ ಪ್ರದರ್ಶನವಿದೆ.

By admin

ನಿಮ್ಮದೊಂದು ಉತ್ತರ

You missed

error: Content is protected !!