
ಹೊಸನಗರ : ಗಾಂಜಾ ಸೇವಿಸಿದ್ದ ಇಬ್ಬರನ್ನು ಹೊಸನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಘಟನಾ ವಿವರ :
ಹೊಸನಗರ ಠಾಣಾ ಪಿಸಿ ಸುರೇಶ್ ಡಿ ಜಿ ರವರು ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯ ಏರಿಯಾಗಳಲ್ಲಿ ಗುಪ್ತ ಮಾಹಿತಿ ಸಂಗ್ರಹ ಕರ್ತವ್ಯಕ್ಕೆ ನೇಮಕವಾಗಿದ್ದು ಅದರಂತೆ ಅವರು ನ.4 ರಂದು ಸಿಪಿಸಿ ಅಲ್ಮಾಜ್ ಬಿ ಯು ಅವರನ್ನು ಕರೆದುಕೊಂಡು ಪುರಪ್ಪೆಮನೆ, ಹೆಬೈಲು, ಹಲುಸಾಲೆ ಮಳವಳ್ಳಿ, ಹರಿದ್ರಾವತಿ, ಬಟ್ಟೆಮಲಪ್ಪ ಗುಪ್ತ ಮಾಹಿತಿ ಸಂಗ್ರಹಿಸಿಕೊಂಡು ಬಾಣಿಗಾ ಬಸ್ ನಿಲ್ದಾಣದ ಹತ್ತಿರ ಹೋಗುತ್ತಿರುವಾಗ ರಾತ್ರಿ 9:30 ರ ಸುಮಾರಿಗೆ ಬಾಣಿಗಾ ಬಸ್ ನಿಲ್ದಾಣದ ರಸ್ತೆಯಲ್ಲಿ ಇಬ್ಬರು ಅಸಭ್ಯವಾಗಿ ವರ್ತಿಸುತ್ತಾ ಬರುತ್ತಿರುವುದು ಕಂಡು ಬಂದಿದೆ.

ಇಬ್ಬರು ಗಾಂಜಾ ಸೇವನೆ ಮಾಡಿದ ರೀತಿಯಲ್ಲಿ ವರ್ತಿಸುತ್ತಿರುವಂತೆ ಕಂಡು ಬಂದಿದ್ದು, ಇಬ್ಬರನ್ನು ಹಿಡಿದುಕೊಂಡು ಹೆಸರು, ವಿಳಾಸ ಕೇಳಿದಾಗ ಹೊಸಕೆಸರೆ ಗ್ರಾಮದ ಛತ್ರಳ್ಳಿಯ ಚಾಲಕ ಪ್ರತಾಪ್ ಬಿನ್ ಹಾಲಪ್ಪ (22) ಮತ್ತು ದ್ವಿತೀಯ ಪಿಯುಸಿ ಓದುತ್ತಿರುವ ಮೇಲಿನಸಂಪಳ್ಳಿ ಗ್ರಾಮದ ಅಭಿಷೇಕ್ ಬಿನ್ ಭೋಜರಾಜ್ (19) ಎಂದು ತಿಳಿಸಿದ್ದಾರೆ. ಈ ವೇಳೆಯಲ್ಲಿ ಇಲ್ಲಿ ಯಾಕೆ ತಿರುಗುಡಾತ್ತಿದ್ದೀರಾ? ಎಂದು ವಿಚಾರ ಮಾಡಿದಾಗ ತಾವು ಗಾಂಜಾ ಸೇವನೆ ಮಾಡಿ ತಿರುಗಾಡುತ್ತಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
ಇವರು ಗಾಂಜಾ ಸೇವನೆ ಮಾಡಿರುವ ಅಮಲಿನಲ್ಲಿ ಸಾರ್ವಜನಿಕರಿಗೆ ಉಪಟಳ ನೀಡಬಹುದೆಂಬ ಅನುಮಾನದ ಮೇರೆಗೆ ಇವರನ್ನು ಠಾಣೆಗೆ ಕರೆದುಕೊಂಡು ಬಂದು ಹಾಜರುಪಡಿಸುತ್ತಿರುವುದಾಗಿ ಗಾಂಜಾ ಸೇವನೆ ಮಾಡಿರುವುದಾಗಿ ಅನುಮಾನವಿರುವ ಕಾರಣ ಸಾಗರ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು NDPS ACT, 1985 (U/s-27(b) ಅಡಿ ಇಬ್ಬರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.