ಸಿದ್ದರಾಮಯ್ಯ ಸಿಎಂ ಬೊಮ್ಮಯಿಗೆ ಈಶ್ವರಪ್ಪರನ್ನು ಸಿಎಂ ಮಾಡಿ ನೋಡೋಣ ಎಂದು ಸವಾಲ್ ಹಾಕಿದ್ದಾರೆ.
ಕುರುಬರ ಹಾಗೂ ಹಿಂದುಳಿದವರ ಬಗ್ಗೆ ತುಂಬಾ ಕಾಳಾಜಿ ಪ್ರೀತಿ ಇದ್ದಾರೆ

ರಾಜೀನಾಮೆ ನೀಡಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪರನ್ನು ಸಿಎಂ ಮಾಡಿ ಅಥವಾ ಹಿಂದುಳಿದ ಜಾತಿಗೆ ಸೇರಿದವರನ್ನು ಸಿಎಂ ಮಾಡಿ ಎಂದು ಗುಡುಗಿದ್ದಾರೆ.

ಹಿಂದುಳಿದ ಜಾತಿಗಳ ಸಮಾವೇಶ ನಡೆಸಿ ನನ್ನನ್ನು ಟಾರ್ಗೆಟ್ ಮಾಡಿ ಸುಳ್ಳು ಭಾಷಣ ಮಾಡಲು ಬಿ.ಜೆ.ಪಿ ಯವರಿಗೆ ನಾಚಿಕೆಯಾಗಬೇಕು
ಸಿಎಂ ಬೊಮ್ಮಯಿ ಯಾವುದೇ ವೇದಿಕೆಯಾದರೂ ಸರಿ ಹಿಂದುಳಿದ ಜಾತಿಗೆ ಏನು ಮಾಡಿದೆ ಎಂದು ಹೇಳಲಿ
ನಮ್ಮ ಸರ್ಕಾರ ಹಿಂದುಳಿದವರಿಗೆ ಏನು ಮಾಡಿದೆ ಎಂದು ನಾನು ಹೇಳುತ್ತೇನೆ ಈ ಬಗ್ಗೆ ಬಹಿರಂಗ ಚರ್ಚೆ ನಡೆಯಲಿ ಎಂದು ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.

ಸಿದ್ದರಾಮಯ್ಯ ಸರ್ಕಾರ ಕರುಬರನ್ನು ಸಚಿವರೇ ಮಾಡಿಲ್ಲ ಎಂದು ಅರೋಪ ಮಾಡಿದ್ದಾರೆ. ಸಮ್ಮೀಶ್ರ ಸರ್ಕಾರದ ಅವಧಿಯಲ್ಲಿ ಎಂಟಿಬಿ ನಾಗರಾಜ ಮಂತ್ರಿಯಾಗಿರಲಿಲ್ವಾ? ಈ ತರಹ ಸುಳ್ಳು ಯಾಕೆ ಹೇಳುಬೇಕು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು . ರಾಜ್ಯದಲ್ಲಿ ಹಿಂದುಳಿದ ಜಾತಿಯವರು ಮುಖ್ಯಮಂತ್ರಿ ಯಾಗಿದ್ದರೆ ಅದು ಕಾಂಗ್ರೆಸ್ ಸರ್ಕಾರಲ್ಲಿ ಮಾತ್ರ

ಕಲಬುರಗಿ ಯಲ್ಲಿ ಬಿಜೆಪಿ ಯವರು ಹಿಂದುಳಿದ ಜಾತಿಗಳ ಸಮಾವೇಶ ಮಾಡಿದರು ಈ ಸಮಾವೇಶಕ್ಕೆ ಸುಮಾರು ೫ ಲಕ್ಷ ಜನ ಸೇರಿಸುತ್ತೇವೆ ಎಂದು ಅದರೆ ಸೇರಿದ್ದ ೪೦ ರಿಂದ ೫೦ ಸಾವಿರ ಮಾತ್ರ ಈ ಸಮಾವೇಶದಲ್ಲಿ ಮಾತಾನಾಡಿದ ಪ್ರತಿಯೊಬ್ಬರು ನನ್ನನ್ನು ಗುರಿಯಾಗಿಸಿಕೊಂಡು ಸುಳ್ಳುಗಳನ್ನು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಆಸಮಾಧಾನ ವ್ಯಕ್ತಪಡಿಸಿದ್ದಾರೆ..