ಶಿವಮೊಗ್ಗ,ಅ.೨೯:
ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಹನುಮಂತಾಪುರ ಗ್ರಾಮದಲ್ಲಿ ರೈತ ಸಂಘದ ನೂತನ ಬೋರ್ಡ್ ನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷರಾದ ಹೆಚ್ ಆರ್ ಬಸವರಾಜಪ್ಪನವರು ಹಾಗೂ ಹಿರಿಯ ರೈತ ಮುಖಂಡರಾದ ಕಡಿದಾಳ್ ಶಾಮಣ್ಣನವರು ಉದ್ಘಾಟಿಸಿದ
ನಂತರ ಜಗಜ್ಯೋತಿ ಬಸವೇಶ್ವರ, ಡಾ|| ಬಾಬಾ ಸಾಹೇಬ್ ಅಂಬೇಡ್ಕರ್, ಛತ್ರಪತಿ ಶಿವಾಜಿ, ಮಹರ್ಷಿ ವಾಲ್ಮೀಕಿ, ಕನಕದಾಸ, ಸಂತ ಸೇವಾಲಾಲ್, ಪ್ರವಾದಿ ಮಹಮದ್ ಪೈಗಂಬರ್ ಈ ಎಲ್ಲಾ ದಾರ್ಶನಿಕರ ಜಯಂತಿಯನ್ನು ಹಾಗೂ ರೈತ ಸಂಘದ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ನೂರಾರು ಯುವಕರು ರಾಜ್ಯಾಧ್ಯಕ್ಷರಿಂದ ಹಸಿರು ದೀಕ್ಷೆ ತೊಟ್ಟು ರೈತ ಸಂಘಕ್ಕೆ ಸೇರ್ಪಡೆಯಾದರು..
೮೦ರ ದಶಕದಲ್ಲಿ ರೈತ ಸಂಘ ಪ್ರಾರಂಭವಾದಾಗ ಸಾಮೂಹಿಕ ವಿವಾಹ, ಮದ್ಯಪಾನ ನಿಷೇಧ, ಅಧ್ಯಯನ ಶಿಬಿರಗಳು ಹೀಗೆ ಸಾಕಷ್ಟು ಚಳುವಳಿಗಳನ್ನ ಮಾಡುತ್ತಾ ಮಾದರಿ ಗ್ರಾಮವಾಗಿತ್ತು. ೮೦ರ ದಶಕದಲ್ಲಿ ಗ್ರಾಮದಲ್ಲಿ ರೈತ ಸಂಘದ ಬೋರ್ಡ್‌ನ್ನು ಸಹ ಹಾಕಲಾಗಿತ್ತು. ಇದು ಈಗ ಶಿಥಿಲವಾಗಿದ್ದರಿಂದ ನೂತನ ರೈತ ಸಂಘದ ಬೋರ್ಡ್‌ನ್ನು
ಉದ್ಘಾಟಿಸಲಾಯಿತು. ಈ ಸಂಧರ್ಭದಲ್ಲಿರಾಜ್ಯ ಕಾರ್ಯಾಧ್ಯಕ್ಷರಾದ ಕುರುವ ಗಣೇಶ್,ರಾಜ್ಯ ಉಪಾಧ್ಯಕ್ಷರಾದ ಟಿ.ಎಂ ಚಂದ್ರಪ್ಪ, ತರೀಕೆರೆ ಮಹೇಶ್,ಜಿಲ್ಲಾಧ್ಯಕ್ಷರಾದ ಎಸ್. ಶಿವಮೂರ್ತಿಜಿಲ್ಲಾ ಕಾರ್ಯಾಧ್ಯಕ್ಷರಾದ ಕೆ.ರಾಘವೇಂದ್ರ,ಜಿಲ್ಲಾ ಹಸಿರುಸೇನೆ ಸಂಚಾಲಕರಾದ ಎಂ.ಡಿ ನಾಗರಾಜ್ ಮಳವಳ್ಳಿ,ಶಿವಮೊಗ್ಗ ತಾ|| ಅಧ್ಯಕ್ಷರಾದ ಸಿ.ಚಂದ್ರಪ್ಪ, ಭದ್ರಾವತಿ ತಾ|| ಅಧ್ಯಕ್ಷರಾದ ಜಿ.ಎನ್ ಪಂಚಾಕ್ಷರಿ, ಕಾರ್ಯದರ್ಶಿ ಜಿ.ಬಿ ರವಿಹಾಗೂ ಜಿಲ್ಲೆಯ, ತಾಲ್ಲೂಕಿನ ಮತ್ತು ಗ್ರಾಮದ ಎಲ್ಲಾ ಪದಾಧಿಕಾರಿಗಳು ಹಾಗೂ ಮುಖಂಡರು ಹಾಜರಿದ್ದರು.