ಶಿವಮೊಗ್ಗ, ಅ.28:

ಅ 29ರ ನಾಳಿನ ಶನಿವಾರ ದೆಹಲಿ ಯಲ್ಲಿ ಶಿವಮೊಗ್ಗ ರಂಗಾಯಣ ದ “ಹಕ್ಕಿಕಥೆ” ನಾಟಕ ಪ್ರದರ್ಶನ
ಇದೇ ಅಕ್ಟೋಬರ್ 29 ರ ನಾಳೆ ಸಂಜೆ ನವದೆಹಲಿಯ ದಿಲ್ಲಿ ಕನ್ನಡ ಸಂಘ ಆಯೋಜಿಸಿರುವ ಮಲೆನಾಡು ಉತ್ಸವ ಕಾರ್ಯಕ್ರಮ ದಲ್ಲಿ ಶಿವಮೊಗ್ಗ ರಂಗಾಯಣ ದ ಪ್ರಸಿದ್ಧ ಕನ್ನಡ ನಾಟಕ “ಹಕ್ಕಿಕಥೆ ” ಪ್ರದರ್ಶನ ಗೊಳ್ಳಲಿದೆ.


ಪ್ರಸಿದ್ಧ ಸಾಹಿತಿ ನಾ ಡಿಸೋಜ ರವರ ಕಾದಂಬರಿ ಆಧಾರಿತ ಈ ನಾಟಕವು ಮನುಷ್ಯ ನ ಅತೀ ಆಸೆಗೆ ಮತ್ತು ಬೆಳೆಯುತ್ತಿರುವ ತಂತ್ರಜ್ಞಾನ, ಆಧುನಿಕತೆಯಲ್ಲಿ ನಶಿಸಿ ಹೋಗುತ್ತಿರುವ ಪಕ್ಷಿ ಸಂತತಿಗಳು ಮತ್ತು ಕ್ಷಿಪ್ರ ಗತಿಯಲ್ಲಿ ನಾಶವಾಗುತ್ತಿರುವ ಪ್ರಾಕೃತಿಕ ಸಂಪತ್ತಿನ ಬಗ್ಗೆ ವಿಡಂಬಿಸುವ ಈ ನಾಟಕವನ್ನು ವಿಭಿನ್ನವಾಗಿ ಕಟ್ಟಲಾಗಿದೆ.


ಜಪಾನಿನ ಹೆಸರಾಂತ ಬುನರುಖು ಗೊಂಬೆಯಾಟ ವನ್ನು ಈ ನಾಟಕದಲ್ಲಿ ಬಳಸಿರುವುದು ಈ ನಾಟಕದ ವಿಶೇಷ, ಸುಮಧುರ ಸಂಗೀತ, ಅತ್ಯುತ್ತಮ ನಟನೆ, ಸೊಗಸಾದ ದೃಶ್ಯ ಜೋಡಣೆ, ಚಕಿತಗೊಳಿಸುವ ಬೆಳಕಿನ ಸಂಯೋಜನೆಗಳಿಂದ ಮಿಳಿತವಾದ ಈ ನಾಟಕ ಕರ್ನಾಟಕದ ಹಲವಾರು ಕಡೆಗಳಲ್ಲಿ ಭರ್ಜರಿ ಪ್ರದರ್ಶನ ಗಳನ್ನು ಕಂಡಿದೆ.


ದಿಲ್ಲಿ ಕನ್ನಡ ಸಂಘದ ಆಹ್ವಾನದ ಮೇರೆಗೆ ಪ್ರದರ್ಶನ ನೀಡಲು ದೆಹಲಿಗೆ ತೆರಳುತ್ತಿರುವ ತಂಡದ ನೇತೃತ್ವ ವನ್ನು ಶಿವಮೊಗ್ಗ ರಂಗಾಯಣ ದ ನಿರ್ದೇಶಕ ಶ್ರೀ ಸಂದೇಶ್ ಜವಳಿ ವಹಿಸಲಿದ್ದಾರೆ, ಕನ್ನಡ ರಂಗಭೂಮಿ ಯಲ್ಲೇ ಸಂಚಲನ ಮೂಡಿಸಿರುವ ಈ ನಾಟಕವನ್ನು ಕ್ರಿಯಾಶೀಲ ರಂಗ ನಿರ್ದೇಶಕ ಗಣೇಶ್ ಮಂಧಾರ್ತಿ ಮತ್ತು ಶೃವಣ್ ಹೆಗ್ಗೋಡು ನಿರ್ದೇಶಿಸಿದ್ದಾರೆ, ಸಾಹಿತಿ ನಾ ಡಿಸೋಜ ರವರ ಕಾದಂಬರಿಯನ್ನು ಸಾಗರದ ಎಸ್ ಮಾಲತಿ ರಂಗರೂಪಕ್ಕಿಳಿಸಿದ್ದಾರೆ,

By admin

ನಿಮ್ಮದೊಂದು ಉತ್ತರ

You missed

error: Content is protected !!