ಶಿವಮೊಗ್ಗ, ಅಂಧಕಾರವನ್ನು ಹೊಡೆದೋಡಿಸುವ ಬೆಳಕಿನ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲು ಜಿಲ್ಲೆಯಾದ್ಯಂತ ಜನತೆ ಸಿದ್ಧತೆ ನಡೆದಿದ್ದು, ಮಾರುಕಟ್ಟೆಯಲ್ಲಿ ಸೋಮವಾರ ಹಬ್ಬದ ಖರೀದಿ ಜೋರಾಗಿ ನಡೆದಿದೆ.

ಬೆಳಕಿನ ಹಬ್ಬ ದೀಪಾವಳಿಗೆ ಶಿವಮೊಗ್ಗ ಸಜ್ಜಾಗುತ್ತಿದೆ. ಕೊರೊನಾ ಕಾರಣದಿಂದ ಕಳೆದ ಎರಡು ರ್ಷಗಳಿಂದ ದೀಪಾವಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲು ಸಾಧ್ಯ ವಾಗಿರಲಿಲ್ಲ. ಹೀಗಾಗಿ ಈ ಬಾರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಮಲೆನಾಡಿನ ಜನತೆ ಸಿದ್ದತೆ ಮಾಡಿಕೊಂಡಿದ್ದಾರೆ. ದೀಪಾ ವಳಿಯ ಮೂರು ದಿನದ ಸಂಭ್ರಮಾಚರಣೆಗೆ ಜನತೆ ಮಾರುಕಟ್ಟೆಗಳಲ್ಲಿ ರ್ಜರಿ ಖರೀದಿಗೆ ತೊಡಗಿದ್ದಾರೆ.

ದೀಪಾವಳಿಯ ಮೊದಲ ದಿನವಾದ ಸೋಮವಾರ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜಾ ಕರ್ಯಕ್ರಮ ನಡೆಯಿತು. ದೇವಾಲ ಯಗಳಲ್ಲಿ ಭಕ್ತರ ಸಂಖ್ಯೆಯೂ ಅಧಿಕವಿತ್ತು. ಎಲ್ಲೆಡೆ ಸಂಭ್ರಮದ ವಾತಾವರಣ ಕಂಡುಬಂದಿದೆ.
ಖರೀದಿ ಜೋರು : ಲಕ್ಷ್ಮೀಪೂಜೆ ಹಿನ್ನೆಲೆಯಲ್ಲಿ ಜನ ಹೂ, ಹಣ್ಣು ಖರೀದಿ ಯಲ್ಲಿ ತೊಡಗಿದ್ದರು. ವಿವಿಧ ಭಾಗಗಳಿಂದ ತರಕಾರಿ, ಹೂವು ಮಾರುಕಟ್ಟೆಗೆ ಬಂದಿದ್ದು ವ್ಯಾಪಾರ ಜೋರಾಗಿತ್ತು. ಲಕ್ಷ್ಮೀ ಪೂಜೆ ಹಿನ್ನೆಲೆಯಲ್ಲಿ ಹೂ, ಹಣ್ಣು ಖರೀದಿಯೂ ಜೋರಾಗಿತ್ತು. ಸಿಹಿತಿಂಡಿ ಖರೀದಿಯೂ ಕಂಡುಬಂದಿದೆ.
ವಿವಿಧ ದೇಗುಲಗಳಲ್ಲಿ ಸೋಮವಾರ ಲಕ್ಷ್ಮೀ ಪೂಜೆ, ವಾಹನ ಪೂಜೆ ಸಹಿತ ವಿವಿಧ ಪೂಜೆಗಳು ನಡೆಯಿತು. ವಾಣಿಜ್ಯ ಮಳಿಗೆಗಳಿಗೆ ಆರ್ಷಕ ದೀಪಾಲಂಕಾರ ಮಾಡಲಾಗಿತ್ತು.

ಮಾರುಕಟ್ಟೆಯಲ್ಲಿ ತರಕಾರಿ ಹಾಗೂ ಹೂವಿನ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಜತೆಗೆ ಬೆಲೆ ಏರಿಕೆ ನಡುವೆಯೂ ಪಟಾಕಿಗಳ ಮಾರಾಟ ಬಿರುಸಾಗಿ ಸಾಗಿದೆ. ಶಿವಮೊಗ್ಗದ ನೆಹರು ಕ್ರೀಡಾಂಗಣ ಹಾಗೂ ಬಿಹೆಚ್ ರಸ್ತೆಯ ಸೈನ್ಸ್ ಮೈದಾನದೆದುರಿನ ರ್ಕಾರಿ ಶಾಲಾ ಆವರಣದಲ್ಲಿ ಪಟಾಕಿ ಮಳಿಗೆಗಳನ್ನು ಹಾಕಲಾಗಿದೆ. ಪಟಾಕಿಗಳ ಬೆಲೆ ಏರಿಕೆ ಇದ್ದರು ಖರೀದಿ ಪ್ರಕ್ರಿಯೆ ಬಿರುಸಾಗಿ ನಡೆದಿದೆ.
ಗೋಮಯ, ಹಣತೆಗ, ಸಾದಾ ಮಣ್ಣಿನ ಹಣತೆಗಳಿಗಾಗಿ ಜನರಿಂದ ಹೆಚ್ಚಿನ ಬೇಡಿಕೆ ಇದ್ದರೆ, ಸಾಂಪ್ರದಾಯಿಕ ಗೂಡುದೀಪಗಳನ್ನು ಜನರು ಹೆಚ್ಚು ಖರೀದಿಸುತ್ತಿದ್ದುದು ಕಂಡುಬಂತು. ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಆಕಾಶ ಬುಟ್ಟಿ ಕಣ್ಮನ ಸೆಳೆಯುತ್ತಿದೆ. ೫೦ ರೂ ನಿಂದ ೫೦೦ ರೂ. ಮೇಲ್ಪಟ್ಟ ಆಕಾಶ ಬುಟ್ಟಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಶಿವಮೊಗ್ಗದ ಗಾಂಧಿ ಬಜಾರ್, ನೆಹರು ರಸ್ತೆ, ದರ್ಗಿಗುಡಿ, ಬಿ ಹೆಚ್ ರಸ್ತೆ, ಸವಳಂಗ ರಸ್ತೆ, ಜೈಲ್ ರಸ್ತೆ, ಪೊಲೀಸ್ ಚೌಕಿ, ಗೋಪಾಳ, ವಿದ್ಯಾ ನಗರ ಸೇರಿದಂತೆ ವಿವಿ ದೆಡೆ ಹಬ್ಬದ ಖರೀದಿ ಜೋರಾಗಿ ಸಾಗಿದೆ. ದೀಪಾವಳಿ ಹಬ್ಬದ ಖರೀದಿಯಲ್ಲಿ ಜನ ಫುಲ್ ಬ್ಯುಸಿಯಾಗಿದ್ದಾರೆ. ಮಾರುಕಟ್ಟೆಯಲ್ಲಿ ಹೂವು, ಹಣ್ಣು ಖರೀದಿಗೆ ಮುಗಿಬಿದ್ದಿದ್ದಾರೆ. ಹಬ್ಬದ ಹಿನ್ನಲೆಯಲ್ಲಿ ಹೂ, ಹಣ್ಣು, ತರ ಕಾರಿಗಳ ಬೆಲೆಯಲ್ಲಿ ಕೊಂಚ ಏರಿಕೆ ಕಂಡಿದೆ.
ಮಲ್ಲಿಗೆ ಹೂವ ಮಾರೊಂದಕ್ಕೆ ೧೨೦-೧೫೦ ರೂ., ಕನಕಾಂಬರ ೧೦೦ ರೂ., ಕಾಕಡ ೮೦-೧೦೦ ರೂ., ಚೆಂಡು ಹೂ ೫೦-೭೦ ರೂ., ಬಿಡಿ ಗುಲಾಬಿ ಹೂ ಕೆಜಿಗೆ ೧೫೦ ರೂ., ಸೇವಂತಿಗೆ ೬೦-೮೦ ರೂ. ಇದೆ

ಏಲಕ್ಕಿ ಬಾಳೆ ಕೆಜಿಗೆ ೬೦ ರೂ, ಸೀಬೆ ಹಣ್ಣು ೮೦ ರೂ, ಮೋಸಂಬಿ ೮೦ ರೂ ಗೆ ಕೆ.ಜಿ, ಸೇಬು: ೧೨೦-೧೪೦ ರೂ, ಸಪೋಟಾ ೮೦ ರೂ, ಕಿತ್ತಳೆ ೫೦ ರೂ, ತರಕಾರಿ ಬಿನ್ಸ್: ೮೦ ರೂ, ಮೂಲಂಗಿ ೬೦ ರೂ, ಕೊತ್ತಂಬರಿ ೫ರೂ. ಟೊಮ್ಯಾಟೊ: ೪೦ ರೂ. ಇದೆ.

ಹಬ್ಬದ ಖರೀದಿ ಗೆದ್ದು ಜನರು ಮಾರುಕಟ್ಟೆ ಕಡೆಗೆ ಮುಖ ಮಾಡಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಕಂಡುಬಂದಿದೆ. ನಗರದ ಕುವೆಂಪು ರಸ್ತೆ, ದರ್ಗಿಗುಡಿ, ನೆಹರು ರಸ್ತೆ ಬಿಹೆಚ್ ರಸ್ತೆ, ಸವಳಂಗ ರಸ್ತೆಯಲ್ಲಿ ವಾಹನ ಸಂಚಾರ ಅಧಿಕವಾಗಿತ್ತು.
ಉದ್ಯೋಗ ನಿಮಿತ್ತ ಪರ ಊರುಗಳಲ್ಲಿ ನೆಲೆಸಿರುವವರು ತಮ್ಮ ತಮ್ಮ ಊರುಗಳಿಗೆ ಹಿಂದಿರುಗುತ್ತಿರುವುದರಿಂದ ಬಸ್ಸು ಹಾಗೂ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಎಂದಿಗಿಂತ ಹೆಚ್ಚಾಗಿ ಕಂಡುಬಂದಿದೆ.