ಬೆಂಗಳೂರು, ಸೆ.13:
ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕೆ.ಜಿ.ಐ.ಡಿ ಇಲಾಖೆಯ ಕಾರ್ಯದ ಪ್ರಗತಿ ಹಾಗೂ ಇಲಾಖೆಯನ್ನು ಸಬಲೀಕರಣಗೊಳಿಸುವ ಮೂಲಕ ಕೆ.ಜಿ.ಐ.ಡಿ ಇಲಾಖೆಯಲ್ಲಿರುವ ಜ್ವಲಂತ ಸಮಸ್ಯೆಗಳನ್ನು ಶೀಘ್ರವೇ ಸರಿಪಡಿಸಲಾಗುವುದೆಂದು ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಅವರು ತಿಳಿಸಿದರು.
ಸಂಘದ ಮನವಿ ಮೇರೆಗೆ ಕೆ.ಜಿ.ಐ.ಡಿ ನಿರ್ದೇಶಕರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಭೆಯ ನಂತರ ಅವರು ಮಾತನಾಡಿದರು.
ಹೊಸ ಪಾಲಿಸಿಗಳ ವಿತರಣೆ, ಪಾಲಿಸಿಗಳ ಮೇಲಿನ ಸಾಲ, ಮೆಚುರಿಟಿ ಕ್ಲೈಮು ಹಾಗೂ ಬೋನಸ್ ವಿತರಣೆಯಲ್ಲಿ ಉಂಟಾಗುತ್ತಿರುವ ಅನಗತ್ಯ ವಿಳಂಬದಿಂದಾಗಿ ನೌಕರರು ಅನುಭವಿಸುತ್ತಿರುವ ತೊಂದರೆಗಳನ್ನು ಶೀಘ್ರ ಇತ್ಯರ್ಥಪಡಿಸಲಾಗುವುದು ಎಂದರು.
ಇಲಾಖೆಯ ಗಣಕೀಕರಣ ಸಂಪೂರ್ಣಗೊಂಡ ನಂತರ ಸಾಲ, ಫಲಪ್ರದಗೊಂಡ ಪಾಲಿಸಿಗಳ ಅಂತಿಮ ಇತ್ಯರ್ಥ, ಹೊಸ ಪಾಲಿಸಿ, ಬೋನಸ್-ಮುಂತಾದ ಸೌಲಭ್ಯಗಳಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾಫ್ಟ್ ವೇರ್ ಅಭಿವೃದ್ಧಿಪಡಿಸಲಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಸಾಲದ ಅರ್ಜಿ ಒಳಗೊಂಡಂತೆ ಇತ್ಯಾದಿ ಸೌಲಭ್ಯ ಕೋರಿ ಸಲ್ಲಿಸುವ ಮನವಿಗಳನ್ನು ಸಣ್ಣಪುಟ್ಟ ಕಾರಣಗಳಿಗಾಗಿ ಆಕ್ಷೇಪಣೆಯೊಂದಿಗೆ ಹಿಂದಿರುಗಿಸದೆ ಅರ್ಜಿದಾರರ ಮನವಿಯಲ್ಲಿ ನಮೂದಾಗಿರುವ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ ಮಾಹಿತಿ ಪಡೆದು ಇತ್ಯರ್ಥಪಡಿಸುವಂತೆ ಮನವಿ ಮಾಡಲಾಗಿದೆ.
ಈಗಾಗಲೇ ಶೇಕಡಾ 60 ರಷ್ಟು ಬೋನಸ್ ವಿತರಿಸಲಾಗಿದ್ದು, ಅತಿ ಶೀಘ್ರದಲ್ಲಿ ಶೇಕಡಾ 💯 ಕ್ಕೆ 💯 ರಷ್ಟು ಬೋನಸ್ ಕಡತಗಳನ್ನು ಇತ್ಯರ್ಥಪಡಿಸುವಂತೆಯೂ ಮನವಿ ಮಾಡಲಾಗಿದೆ ಎಂದರು.
ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಮಾನ್ಯ ನಿರ್ದೇಶಕರು ಕೂಡಲೆ ಈ ಬಗ್ಗೆ ಸುತ್ತೋಲೆ ಹೊರಡಿಸಲಾಗುವುದೆಂದು ಹಾಗೂ ಗಣಕೀಕರಣ ಕಾರ್ಯಕ್ಕೆ ಇರುವ ಅಡೆ-ತಡೆಗಳ ನಿವಾರಣೆಗೆ ಸಹಕರಿಸುವಂತೆ ನಿರ್ದೇಶಕರು ಮನವಿ ಮಾಡಿದ್ದು, ಈ ಬಗ್ಗೆ ಆರ್ಥಿಕ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹರಿಸಲಾಗುವುದೆಂದರು.
ಈ ಸಂದರ್ಭದಲ್ಲಿ ಕೋಶಾಧ್ಯಕ್ಷರಾದ ಆರ್ ಶ್ರೀನಿವಾಸ್, ಗೌರವಾಧದ್ಯಕ್ಷರಾದ ಶಿವರುದ್ರಯ್ಯ, ಉಪಾಧ್ಯಕ್ಷರಾದ ಬಸವರಾಜ್, ರುದ್ರಪ್ಪ ಹರ್ಷ, ಪದಾಧಿಕಾರಿಗಳಾದ ಮೋಹನ್ ಕುಮಾರ್,ಶ್ರೀಧರ್, ವೆಂಕಟಪ್ಪ ಹಾಗೂ ಇತರರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!