ದಿನಾಂಕ 21.10.2022ರಂದು ನೆಹರು ಯುವ ಕೇಂದ್ರ, ಶಿವಮೊಗ್ಗ, ಜಿಲ್ಲಾ ಪಂಚಾಯತ್, ಶಿವಮೊಗ್ಗ, ಗ್ರಾಮ ಪಂಚಾಯತ್ ಪುರುದಾಳು,ಎನ್ .ಎಸ್ .ಎಸ್ ,ಡಿ.ವಿ.ಎಸ್ ಕಲಾ ಮತ್ತು ವಿಜ್ಞಾನ ಕಾಲೇಜು,ಹುಲಿ ಮತ್ತು ಸಿಂಹಧಾಮ, ಶಿವಮೊಗ್ಗ ಇವರ ಸಹಯೋಗದಲ್ಲಿ “ಸ್ವಚ್ಚ ಭಾರತ -2.0” ಕಾರ್ಯಕ್ರಮವನ್ನು ಸಿಂಹಧಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಭಾರತ ಸರ್ಕಾರ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ “ಸ್ವಚ್ಛ ಭಾರತ 2.0” (1.10.220ರಿಂದ 31.10.22) ಕಾರ್ಯಕ್ರಮಕ್ಕೆ ಯುವ ಮತ್ತು ಕ್ರೀಡಾ ಸಚಿವರಾದ ಅನುರಾಗ್ ಸಿಂಗ್ ಠಾಕುರ್ ರವರು ಅಧಿಕೃತವಾಗಿ 01.10.22ರಂದು ಚಾಲನೆ ನೀಡಿದ್ದು ಇದರ ಅಂಗವಾಗಿ ಶಿವಮೊಗ್ಗ ಜಿಲ್ಲೆಯಾದ್ಯಂತ 1.10.20220ರಿಂದ 31.10.20220ರವರೆಗೆ 1 ತಿಂಗಳು ಸ್ವಚ್ಚತಾ ಕಾರ್ಯಕ್ರಮವನ್ನು ಶುರು ಮಾಡಲಾಗಿದೆ.
ಕಾರ್ಯಕ್ರಮನ್ನು ಜಿ.ಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ಇವರು ಉದ್ಘಾಟಿಸಿ
ಗಾಂಧೀಜಿಯವರ ಕನಸಾದ ಸ್ವಚ್ಫ ಭಾರತವನ್ನು ನನಸಾಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರತಿ ಊರಿನಲ್ಲಿ ಒಂದು ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಶಾಲೆಯನ್ನು ಸ್ವಚ್ಚ ಗೊಳಿಸಿ ಅಂದವಾದ ಗೋಡೆ ಬರಹವನ್ನು ಬರೆಸುವುದರ ಮೂಲಕ ಶಾಲೆಯನ್ನು ಸ್ವಚ್ಫವಾಗಿಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಕಾರ್ಯದಲ್ಲಿ ಯುವ ಜನತೆಯಾದ ನಿಮ್ಮ ಕೈ ಜೋಡಿಸುವಿಕೆ ಮುಖ್ಯವಾಗಿದೆ ಎಂದು ತಿಳಿಸಿದರು.
ಪುರುದಾಳು ಗ್ರಾ.ಪಂ.ಅಧ್ಯಕ್ಷೆ ಭಾರತಿ ನಾಗರಾಜ್ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ವಚ್ಫತೆಯ ಬಗ್ಗೆ ಮಾತನಾಡಿದರು. ನೆಹರು ಯುವ ಕೇಂದ್ರದ ಅಧಿಕಾರಿ ಉಲ್ಲಾಸ್ ಕೆ.ಟಿ.ಕೆ,ಪುರುದಾಳು ಗ್ರಾಮ ಪಂಚಾಯತಿಯ ಸದಸ್ಯರುಗಳು,ಜಿ.ಪಂ ಸ್ವಚ್ಫ ಭಾರತ್ ಮಿಷನ್‍ನ ಸಿಬ್ಬಂದಿ ವರ್ಗದವರಾದ ಗಣೇಶ್ ಮಲ್ಲಿಕಾರ್ಜುನ ಹಾಗೂ ಡಿ.ವಿ.ಎಸ್ ಕಾಲೇಜಿನ ಎನ್ .ಎಸ್ .ಎಸ್ ಅಧಿಕಾರಿಗಳಾದ ಮಲ್ಲಿಕಾರ್ಜುನ,ಕೀರ್ತನ, ಶಿವಶಂಕರ ಮತ್ತು ಕಾಲೇಜು ವಿದ್ಯಾರ್ಥಿಗಳು, ನೆಹರು ಯುವ ಕೇಂದ್ರದ ಯುವ ಕಾರ್ಯಕರ್ತರು, ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.