ನೆಮ್ಮದಿ

ಗಜಿಬಿಜಿ ಬೇಡ
ಕಿರಿಕಿರಿಗೆ ಶಾಶ್ಬತ ಪರಿಹಾರ ನೀಡು
ಅಪರೂಪಕ್ಕೆ
ನೆಮ್ಮದಿಯ ನಿದ್ದೆ ಬಂದಿದೆ
ನಿಂತ ಉಸಿರು ಮರುಕಳಿಸಿತೀಗ!

ಅದೇ ಬದುಕಿಗೆ, ಅದೇ ವ್ಯಾಕುಲತೆಗೆ
ದಿನವಿಡೀ ಹೊಡೆದಾಟ, ಬಡಿದಾಟ
ತಿನ್ನುವ ತುತ್ತಿಗೂ,
ಕ್ಷಣದ ಸಾವಿಗೂ ಗಳಿಗೆಯ ಇತಿಮಿತಿ

ಮನದ ಮಾತಿಗಿಲ್ಲಿ ಎಲ್ಲಿದೆ ಕಾಲ
ಸೆಕೆಂಡಿನ ಲೆಕ್ಕಾಚಾರದಲ್ಲಿ
ಕಳೆದುಕೊಂಡ ಆತ್ಮತೃಪ್ತಿ, ಗೌರವ
ಹಿಡಿ ಲೆಕ್ಕ ಅಳೆದರೂ ಸಿಗದ ನೆಮ್ಮದಿ

ಕಳೆದುಕೊಂಡದ್ದಕ್ಕೆ ಮನದ ಕೊರಗು
ಗಳಿಕೆಯ ಎಡವುವಿಕೆಗೆ ನೂರೆಂಟು ಲೆಕ್ಕ
ಸಿಕ್ಕದ್ದು, ಸಿಗದಿದ್ದಕ್ಕೆ ರೊಕ್ಜದ ಲೆಕ್ಕ
ಬೇಕಿಲ್ಲದ್ದಕ್ಕೆ ಬೆವತದ್ದು, ಯಾವುದಕ್ಕೆ?

ಮನದ ಭಾಷೆ, ಮರೆತ ಅನುಭಾವ
ಕೂಡಿಟ್ಟ ಅಂತಸ್ತು, ಯಾರಿಗೆ ಲೆಕ್ಕ ಕೊಡಲಿ
ತಿನ್ನಲಾಗದ ಭಾರದ ದೇಹ
ನೆಮ್ಮದಿ ಎಂದರೇನೆಂಬ ಹುಡುಕಾಟ

ಎಲ್ಲಿದೆ ಈ ನೆಮ್ಮದಿ
ಕಂಡೂ ಕಾಣದಂತಿರುವ
ಆತ್ಮಭಾವದ ಪ್ರಶ್ನೆ…
ಯಾರಿಗೂ ಯಾವುದಕ್ಕೂ ಕೊರಗೇಕೆ
ಉತ್ತರ ಸಿಗದೆಂಬ ಖಾತ್ರಿ

ಕಂಡೂ ಕಾಣದ ಮನದ ಶಾಂತಿ
ಅಂತರಾತ್ಮದೊಳಗಣ ಸ್ಥಿಮಿತತೆ
ನೆಮ್ಮದಿಯೆಂಬುದೇ ಇಲ್ಲಿ
ಮಾಯೆಯಾಗಿಬಿಟ್ಟಾಳೆಂಬ ಭಯ..
ನಿಮ್ ಗಜೇಂದ್ರ ಸ್ವಾಮಿ
( ಮುಂಜಾನೆ ಮಾಮೂಲಿ ಸುತ್ತಾಟ, ಗಜಿಬಿಜಿ ಇಲ್ಲದ ಒಂದಿಷ್ಟು ಬಿಡುವು. ಹಾಗೇ, ಅನಿಸಿದಂತೆ ಗೀಚಿದೆ)

ಹೀಗೇಕೆ…?


ಅದೇ ದೇಹ
ಅದೇ ಮನಸು
ಅದೇ ಆಸೆ
ಅದೇ ಕನಸು
ಅದೇ ಬದುಕು

ಸೀಮಿತತೆ ಹೊಂದಿಕೊಳ್ಳದ
ಭಾವ ಲಹರಿ
ಇರುವುದ ಬದಿಗಿಟ್ಟು
ಇರದುದರೆಡೆಯತ್ತ ಒಳನೋಟ
ಹೊಸ ಆಸೆ
ಹೊಸ ಭಯಕೆ
ಬರೀ ಹೊಸತನದ ಹುಡುಕಾಟ
ಅರಿವಿನ ಸತ್ಯ. ಮರೆತು
ಹೊಸಗೋರಿಯ ಕನಸು

ಇದು ಹಾಗೇನಾ?
ಕೇಳಲಾಗದ
ಕೇಳಿಕೊಳ್ಳದ ಪ್ರಶ್ನೆಗೆ
ಉತ್ತರ ಹುಡುಕುವ ಕಾತುರತೆ
ಕಳೆದುಕೊಂಡ ಮನೋ ಭಾವನೆ
ಸೀಮಿತತೆ ಮರೆತೆನೆಂಬ ಹೆಮ್ಮೆ

ಸಿಗದ ಶಾಶ್ವತತೆಯ
ಕಂಡರೂ ಕಾಣದಂತಹ
ಬಿಗುಮಾನದ ಬದುಕಿಗೆ
ಮತ್ತದೇ ಸಾಮಾನ್ಯ ಪ್ರಶ್ನೆ ಹೀಗೇಕೇ ಎಂಬ ಒಂದೇ ಕನವರಿಕೆ
ಉತ್ತರ ಹುಡುಕದ ಹಾದಿಯಲಿ
…. ‌‌‌‌‌‌‌ನಿಮ್ಮಗಜೇಂದ್ರಸ್ವಾಮಿ

( ಹಾಯ್ ಹಾಗೇ ಗೀಚಿದ ನಾಕೇ ನಾಕು ಸಾಲು ಕಣ್ರೀ
ನನಗೂ ಅರ್ಥವಾಗದ ಸಾಲುಗಳಿವು)

By admin

ನಿಮ್ಮದೊಂದು ಉತ್ತರ

You missed

error: Content is protected !!