‌‌ಶಿವಮೊಗ್ಗ,ಅ.02: ನಗರದ ಸ್ಮಾರ್ಟ್ ಸಿಟಿ ಕಾರ್ಯಗಳಲ್ಲಿ ಒಂದಾಗಿರುವ ನೆಲದೊಳಗೆ ವಿದ್ಯತ್ ಸಂಪರ್ಕ ಕಲ್ಪಿಸುವ ಕಾರ್ಯ ಆರಂಭದಲ್ಲೇ ನಗರದ ಹಲವೆಡೆ ಶಾಕ್ ಹೊಡೆದಿದೆ. ವೈರ್ ಗಳು ಸುಟ್ಟಿವೆ. ಮನೆಯೊಳಗಿನ ಜನ ಭಯಬೀತರಾಗಿದ್ದಾರೆ. ಹೊಸಮನೆಯಲ್ಲಿ ರಸ್ತೆ, ಮನೆಗಳಲ್ಲಿ ಕರೆಂಟ್ ಶಾಕ್ ಹೊಡೆದಿದ್ದು, ಕೋಟೆ ದೇವಾಲಯದ ಬಳಿ ನೆಲದ ಗ್ರಿಲ್’ನಲ್ಲಿ ಕರೆಂಟ್ ಪಾಸ್ ಆಗಿದೆ.
ಸ್ಮಾರ್ಟ್ ಸಿಟಿ ಯೋಜನೆಯ ಅಸಮರ್ಪಕ ಕಾಮಗಾರಿಯ ಪರಿಣಾಮ ಎಂದು ಆರೋಪಿಸಲಾಗುತ್ತಿದೆ. ಈ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಕೋಟೆ ಏರಿಯಾ ಹಾಗೂ ಹೊಸಮನೆ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಕರೆಂಟ್ ಶಾಕ್’ನಿಂದ ಜನರ ಭಯ ಪಟ್ಟಿದ್ದಾರೆ.



ಹೊಸಮನೆಯಲ್ಲಿ ವಿದ್ಯುತ್ ಕೇಬಲ್ ಸಂಪರ್ಕ ನೀಡಲಾಗುತ್ತಿದ್ದು, ಫೀಡರ್ ಬಾಕ್ಸ್’ನಿಂದ ಸಂಪರ್ಕ ಕಲ್ಪಿಸಿರುವ ಕೆಲವು ಮನೆಗಳಲ್ಲಿ ವಿದ್ಯುತ್ ಪ್ರವಹಿಸುತ್ತಿರುವ ಅನುಭವವಾಗಿದ್ದು, ಜನರ ಭಯಭೀತರಾಗಿದ್ದರು.
ಈ ಭಾಗದಲ್ಲಿ ಭಾಗ್ಯಮ್ಮ ಎಂಬ ಮಹಿಳೆಗೆ ಕರೆಂಟ್ ಶಾಕ್ ಹೊಡೆದಿದೆ ಎಂದು ಹೇಳಲಾಗುತ್ತಿದೆ.

ಹೊಸಮನೆಯ ಚಾನೆಲ್ ಬಲಭಾಗದ ಎರಡನೆಯ ತಿರುವಿನಲ್ಲಿ ವಿದ್ಯುತ್ ಕೇಬಲ್ ಬ್ಲಾಸ್ಟ್ ಆಗಿದ್ದು, ಇದು ಕಳಪೆ ಕಾಮಗಾರಿಗೆ ಹಿಡಿದ ಕನ್ನಡಿಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಆದರೆ ಸ್ಮಾರ್ಟ್ ಸಿಟಿ ಕಂ. ಇದನ್ನು ನಿರಾಕರಿಸಿದೆ. ‌

ಅಂತೆಯೇ, ಕೋಟೆ ಆಂಜನೇಯ ದೇವಾಲಯದ ಬಳಿಯ ಶಿವಪ್ಪ ನಾಯಕ ಅರಮನೆಗೆ ಹೋಗುವ ಮುಂಭಾಗದಲ್ಲಿ ಅಳವಡಿಸಿರುವ ಕಬ್ಬಿಣದ ಗ್ರಿಲ್ ನಲ್ಲಿ ವಿದ್ಯುತ್ ಪ್ರವಹಿಸುತ್ತಿರುವ ಅನುಭವವಾಗಿದೆ. ಹೀಗಾಗಿ, ಸ್ಥಳೀಯರು ಟೆಸ್ಟರ್ ಹಿಡಿದು ನೋಡಿದಾಗ ಕರೆಂಟ್ ಹರಿಯುತ್ತಿರುವುದು ತಿಳಿದುಬಂದಿದೆ.

ಘಟನೆ ವಿಚಾರಗಳು ತಿಳಿದಾಕ್ಷಣ, ಸ್ಮಾರ್ಟ್ ಸಿಟಿ ಎಲೆಕ್ಟ್ರಿಕಲ್ ತಂಡ ಹಾಗೂ ಮೆಸ್ಕಾಂ ಎಈಈ ಮಹಾದೇವಯ್ಯ ಅವರ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆ ಸಂಪರ್ಕವನ್ನು ಈಗ ರದ್ದು ಮಾಡಲಾಗಿದೆ.

By admin

ನಿಮ್ಮದೊಂದು ಉತ್ತರ

You missed

error: Content is protected !!