ಶಿವಮೊಗ್ಗ, ಸೆ.30:

ಯಾವುದೇ ಕ್ಷಣದಲ್ಲಿ ಬಿದ್ದು ಹೋಗುವ, ಸಂಪೂರ್ಣ ಒಣಗಿರುವ ಮರಗಳೇ ಶಿವಮೊಗ್ಗ ಪ್ರವಾಸಿ ಮಂದಿರಕ್ಕೆ ಸ್ವಾಗತ ಕೋರುವ ಪರಿಸ್ಥಿತಿ ಬರಬಾರದಿತ್ತು.

ಈಗಲೂ ಆಗಲೋ ಎಂಬಂತೆ ಅತ್ಯಂತ ಎತ್ತರವಾಗಿ ನಿಂತುಕೊಂಡಿರುವ ಎರಡು ಮರಗಳು ಶಿವಮೊಗ್ಗ ಸರ್ಕಾರಿ ಸರ್ಕಾರಿ ಪ್ರವಾಸಿ ಮಂದಿರದ ಬಲಭಾಗದಲ್ಲಿ ಭವ್ಯ ಸ್ವಾಗತ ಕೋರುತ್ತವೆ. ಈಗ ಇದೇ ಮರಗಳಿಗೆ ಪ್ಲೆಕ್ಸಿ ಕಟ್ಟಲಾಗುತ್ತಿದೆ. ಯಾವ ಸಂದರ್ಭದಲ್ಲಿ ಈ ಮರಗಳು ಬೀಳುತ್ತವೆಯೋ ಭಗವಂತನೇ ಬಲ್ಲ.

ಅಂದರೆ ಇದು ಹೆಲಿಫ್ಯಾಡ್ ಸರ್ಕಲ್ ಗೆ ಹೊಂದಿಕೊಂಡ ಸಿಗ್ನಲ್ ಬಳಿಯೇ ಇದೆ ಕನಿಷ್ಠ ಪಕ್ಷ ಇತ್ತ ಗಮನಿಸಲಾಗದ ಅಧಿಕಾರಿಗಳು ಇದು ಬಿದ್ದಮೇಲೆ ನೋಡೋಣ ಎಂದು ಕಾಯುತ್ತಿರಬೇಕು. ಚೆನ್ನಾಗಿರುವ ಮರಗಳನ್ನು ಅಭಿವೃದ್ಧಿಯ ಹೆಸರು ಹೇಳಿ ಕಡಿಯುವ ಈ ಅಧಿಕಾರಿಗಳಿಂದ ಹಾಳಾಗಿರುವ ಸಂಪೂರ್ಣವಾಗಿ ಬೀಳುವ ಸ್ಥಿತಿಯಲ್ಲಿರುವ ಮರಗಳನ್ನು ತೆಗೆಯುವಂತಹ ಪರಿಸ್ಥಿತಿ ಬಾರದಿರುವುದು ದುರಂತವೇ ಹೌದು.

ಈ ಪ್ರವಾಸಿ ಮಂದಿರವನ್ನು ನೋಡಿಕೊಳ್ಳುವ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸಾಹೇಬರುಗಳಿಗೆ ಈ ಒಣಗಿದ ಮರಗಳು ಕಂಡಿರುವಂತಿಲ್ಲ ಪ್ರವಾಸಿ ಮಂದಿರಕ್ಕೆ ಹೋಗುವ ಮುನ್ನ ಬಾಗಿಲಲ್ಲಿ ನಿಂತು ಅವುಗಳ ಪರಿಸ್ಥಿತಿ ನೋಡಿ. ಆಗುತ್ತಲ್ವೇ ಸಾಹೇಬ್ರೇ…!

By admin

ನಿಮ್ಮದೊಂದು ಉತ್ತರ

You missed

error: Content is protected !!