
ಶಿಕಾರಿಪುರ,ಸೆ.30: ಶಿಕಾರಿಪುರ ತಾಲೂಕಿನ ತರಲಘಟ್ಟ ದೊಡ್ಡ ಮನೆ ಜಯ ನಾಯ್ಕ ಬಿನ್ ಪೂರ್ಯ ನಾಯ್ಕ ಸಾಲಬಾಧೆ ತಾಳಲಾರದೆ ಬುಧವಾರ ಸಂಜೆ 5.30 ಕ್ಕೆ ತನ್ನ ಚಿಕ್ಕಪ್ಪನ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ತರಲಘಟ್ಟ ತಾಂಡ ಸರ್ವೆ ನಂಬರ್ 44 ರಲ್ಲಿ ತನ್ನ ಹೆಂಡತಿಯ ಹೆಸರಿಗೆ ಮೂರು ಎಕರೆ 37 ಗುಂಟೆ ಜಮೀನಿನ ಮೇಲೆ 6 ಲಕ್ಷ ಸಾಲ ಇದ್ದು
ಸರ್ವೆ ನಂಬರ್ 39/5 ರಲ್ಲಿ ಸ್ವತಃ ತನ್ನ ಹೆಸರಿಗಿದ್ದ ಒಂದು ಎಕರೆ ಜಮೀನಿನಲ್ಲಿ ಎರಡು ಲಕ್ಷ ಸಾಲವಿದ್ದು ಎರಡೂ ಸೇರಿ ಒಟ್ಟು ಎಂಟು ಲಕ್ಷ ಸಾಲವಿದ್ದು, ಹಾರೂಗೊಪ್ಪ ಪ್ರಗತಿ ಗ್ರಾಮೀಣ ಬ್ಯಾಂಕಿನಿಂದ ನೋಟಿಸು ಬಂದ ಕಾರಣ ಹಾಗೂ ಈ ವರ್ಷ ಅತಿವೃಷ್ಟಿಯಿಂದ ಬೆಳೆಯು ಬಾರದೆ ಸಾಲ ತೀರಿಸಲಾಗುವುದಿಲ್ಲವೆಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.
ಪುನಿತ್ ರಾಜ್ ಕುಮಾರ್ ರವರವರು ನೇತ್ರದಾನ ಮಾಡಿದಂತೆ ನಾನು ಕೂಡ ಸತ್ತ ಮೇಲೆ ನೇತ್ರದಾನ ಮಾಡುತ್ತೇನೆ ಎಂದು ಹೇಳುತ್ತಿದ್ದರು. ಮೃತನ ಆಸೆಯಂತೆ ಶಿವಮೊಗ್ಗದ ಶಂಕರ್ ಕಣ್ಣಿನ ಆಸ್ಪತ್ರೆಯವರಿಗೆ ಮೃತರ ಕಣ್ಣುಗಳನ್ನು ನೀಡಲಾಗಿದೆ.
ಮೃತರಿಗೆ ಪತ್ನಿ ತಾಯಿ ಹಾಗೂ ಎರಡು ಗಂಡು ಒಂದು ಹೆಣ್ಣು ಮಗುವಿದ್ದು ಗಿಂದು ತರ್ಲಘಟ್ಟ ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿದೆ.