ಶಿವಮೊಗ್ಗ, ಸೆ.28:
ಶಿವಮೊಗ್ಗ ಮಹಾನಗರ ಪಾಲಿಕೆ ಕೈಗೊಂಡ ಸ್ವಚ್ಛತೆಯ ಕಾರ್ಯಕ್ರಮಗಳಲ್ಲಿ ವಿಶೇಷವಾದ ಗೌರವ ಗಳಿಸಿದೆ. ದೇಶದಾಧ್ಯಂತ ನಡೆದ ಸ್ವಚ್ಛ ಸರ್ವೆಕ್ಷಣ್ ಸಮೀಕ್ಷೆಯಲ್ಲಿ ದೇಶದ 12 ನಗರಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದು, ಅದರಲ್ಲಿ ಶಿವಮೊಗ್ಗ ನಗರ ಸೇರ್ಪಡೆಯಾಗಿರುವುದು ಸಂತಸದ ವಿಚಾರ ಎಂದು ಶಿವಮೊಗ್ಗ ಮಹಾನಗರ ಪಾಲಿಕೆಯ ಮೇಯರ್ ಸುನೀತಾ ಅಣ್ಣಪ್ಪ ಇಂದಿಲ್ಲಿ ತಿಳಿಸಿದರು.
ಅವರು ಇಂದು ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಶಿವಮೊಗ್ಗ ಪಾಲಿಕೆಯ ಸದಸ್ಯರುಗಳು, ಅಧಿಕಾರಿಗಳು ವಿಶೇಷವಾಗಿ ಆರೋಗ್ಯ ಇಲಾಖೆ, ಪೌರಕಾರ್ಮಿಕರು ನಗರದ ಸ್ವಚ್ಛತೆ ವಿಚಾರದಲ್ಲಿ ಕೈಗೊಂಡ ಕಾರ್ಯಕ್ರಮಗಳ ಅನುಸರಣೆಯ ಬಗ್ಗೆ ನಡೆದ ಸ್ಪರ್ಧೆಯಲ್ಲಿ ರಾಜ್ಯದಲ್ಲೇ ಪ್ರಥಮ ಹಾಗೂ ದೇಶದ ಗೌರವಾನ್ವಿತ ಸ್ಥಾನ ಪಡೆದಿರುವುದು ಅತ್ಯಂತ ವಿಶೇಷ ಸಂಗತಿ ಎಂದು ಹೇಳಿದರು.
ಬರುವ ಅ.1 ರಂದು ಮಾನ್ಯ ರಾಷ್ಟ್ರಪತಿಗಳು ಶಿವಮೊಗ್ಗ ಮಹಾನಗರ ಪಾಲಿಕೆಗೆ ಈ ಪ್ರಶಸ್ತಿ ಪ್ರಧಾನ ಮಾಡಿಲಿದ್ದು, ಇದರಲ್ಲಿ ಮೇಯರ್ ಆದ ನಾನು, ಆಯುಕ್ತರು, ಆರೋಗ್ಯ ಇಲಾಖೆಯ ಅಭಿಯಂತರು, ಪೌರಾಡಳಿತ ಸಚಿವರು ಭಾಗವಹಿಸಲಿದ್ದೇವೆ ಅಂದು ೧೧ಗಂಟೆಗೆ ರಾಷ್ಟ್ರಪತಿಗಳು ಈ ಪ್ರಶಸ್ತಿ ನೀಡಲಿದ್ದಾರೆ. ಇದು ಶಿವಮೊಗ್ಗದ ಇತಿಹಾಸದಲ್ಲೆ ಪ್ರಥಮ ಎಂದರು.

ಪಾಲಿಕೆ ವ್ಯಾಪ್ತಿಯಲ್ಲಿನ ಪ್ರತಿನಿತ್ಯ ಸಂಗ್ರವಾಗುವ ತ್ಯಾಜ್ಯವನ್ನು ವಿನೂತನ ನವೀನ ತಂತ್ರಜ್ಞಾನ ಬಳಸಿಕೊಳ್ಳುವ ಮೂಲಕ ವೈಜ್ಞಾನಿಕವಾಗಿ ಅಥವಾ ಸಮರ್ಪಕವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಕೈಗೊಂಡ ಕ್ರಮಕ್ಕೆ ಇಂತಹ ಪ್ರಶಸ್ತಿ ದೊರೆತಿದೆ ಎಂದರು.
ಕಳೆದ 8 ವರ್ಷಗಳಿಂದ ಸ್ವಚ್ಛ ಭಾರತ್ ಅಭಿಯಾನದ ಮೂಲಕ ದೇಶದ ಎಲ್ಲಾ ಸ್ಥಳೀಯ ಸಂಸ್ಥೆಗಳ ಕಾರ್ಯಕ್ರಮವನ್ನು ಪ್ರತಿ ವರ್ಷ ಫೆಬ್ರವರಿಯಿಂದ ಏಪ್ರಿಲ್ ಅಂತ್ಯದವರೆಗೆ ಸಮೀಕ್ಷೆ ನಡೆಸಲಾಗುತ್ತದೆ. ಇಂತಹ ಸಮೀಕ್ಷೆಯಲ್ಲಿ ಕೈಗೊಂಡ ಕಾರ್ಯಕ್ರಮಗಳು ಸ್ವಚ್ಛತೆಗಾಗಿ ಬಳಸುವ ಯಂತ್ರೋಪಕರಣಗಳು ನಗರ ಸ್ವಚ್ಛತೆಯ ಬಗ್ಗೆ ಪ್ರತಿನಿತ್ಯ ಸಲ್ಲಿಕೆಯಾಗುವ ಮಾಹಿತಿಗಳು ಸೇರಿದಂತೆ ಹಲವು ಬಗೆಯಲ್ಲಿ ಸಮೀಕ್ಷೆ ನಡೆಸಿ ಪ್ರಶಸ್ತಿ ಕೊಡುತ್ತಾರೆ. ನಮ್ಮ ಪಾಲಿಕೆಯ ಅಧಿಕಾರಿಗಳು ಹಾಗೂ ನಮ್ಮ ಪೌರಕಾರ್ಮಿಕರ ಪ್ರಯತ್ನವಾಗಿ ಈ ಗೌರವ ದೊರೆತಿದೆ. ಶಿವಮೊಗ್ಗ ರಾಜ್ಯದಲ್ಲೆ ಪ್ರಥಮ ಸ್ಥಾನದಲ್ಲಿದ್ದೆರೆ. ಹೊಸದುರ್ಗ , ಮೈಸೂರು ಕ್ರಮವಾಗಿ 2 ಹಾಗೂ 3ನೇ ಸ್ಥಾನದಲ್ಲಿವೆ.
-ಮಾಯಣ್ಣಗೌಡ, ಆಯುಕ್ತರು, ಶಿವಮೊಗ್ಗ ಮಹಾನಗರ ಪಾಲಿಕೆ
ಸುದ್ದಿಗೋಷ್ಠಿಯಲ್ಲಿ ಆಡಳಿತ ಪಕ್ಷದ ಅಧ್ಯಕ್ಷ ಚೆನ್ನಬಸಪ್ಪ, ಉಪಮೇಯರ್ ಶಂಕರಗನ್ನಿ, ಸ್ಥಾಯಿ ಸಮಿತಿಯ ಧೀರರಾಜ್, ಅನಿತಾ ರವಿಶಂಕರ್, ಕಲ್ಪನಾ ರಮೇಶ್, ವಿಶೇಷವಾಗಿ ಪೌರಕಾರ್ಮಿಕರಾದ ನರಸಮ್ಮ, ಮಂಜುನಾಥ್, ಉಮೇಶ್, ಸಂಘದ ಅಧ್ಯಕ್ಷ ಮಾರಪ್ಪ, ಕಾರ್ಯದರ್ಶಿ ಗೋವಿಂದ್ ಹಾಗೂ ಇತರರಿದ್ದರು.