ಶಿವಮೊಗ್ಗ, ಸೆ.11: ಶಿವಮೊಗ್ಗ ಕಾರಾಗೃಹದಲ್ಲಿ ಎಲ್ಲವೂ ಮಾಮೂಲಿ…, ಆಡಿದ್ದೆ ಆಟ ಎಂಬಂತಹ ಪರಿಸ್ಥಿತಿ ಹೊರಬರಲು ನಿರಂತರವಾಗಿ ಅಲ್ಲಿ ಮಾದಕ ವಸ್ತು, ಮೊಬೈಲ್ ಮತ್ತಿತರೆ ವಸ್ತುಗಳು ಸಿಗುತ್ತಿರುವುದೇ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ. ದುರಂತ ಗೊತ್ತಾ…?

ಇದೇ ಕಾರಾಗೃಹದ ಕೆಲ ಸಿಬ್ಬಂದಿಗಳ ಸಹಕಾರದಿಂದ ಒಳಹೋಗುವ ಮೊಬೈಲ್ ಮತ್ತಿತರೆ ಐಟಂಗಳು ಒಂದಿಷ್ಟು ಪ್ರಾಮಾಣಿಕತೆ ಉಳಿಸಿಕೊಂಡಿರುವ ಮತ್ತೊಂದಿಷ್ಟು ಸಿಬ್ಬಂದಿಗಳ ನೆರವಿನಿಂದ ಸಿಗುತ್ತಿವೆ.

ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿನ ವಿಚಾರಣಾಧೀನ ಆರೋಪಿಯ ಬಳಿ ಮೊಬೈಲೊಂದು ಪತ್ತೆಯಾಗಿದ್ದು, ತುಂಗನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರತಿ ಬಾರಿ ಜೈಲಿನಲ್ಲಿರುತ್ತಿದ್ದ ಕುಖ್ಯಾತ ಆರೋಪಿಗಳ ಬಳಿ ಮೊಬೈಲ್ ಫೋನ್ ಗಳು ಬಳಕೆಯಾಗುತ್ತಿದ್ದವು ಎಂಬ ಆರೋಪ ಕೇಳಿ ಬರುತ್ತಿದ್ದವು. ಹಾಗೆಯೇ, ಅಲ್ಲಿಂದ ಶಿವಮೊಗ್ಗ ಉದ್ಯಮಿಗಳಿಗೆ ಶ್ರೀಮಂತರಿಗೆ ಬೆದರಿಕೆ ಹಾಕುತ್ತಿದ್ದ ಆರೋಪ ತುಂಬಾ ಹಳೆಯದಲ್ಲವೇ?

ಆದರೆ, ಈ ಬಾರಿ ವಿಚಾರಣಾಧೀನ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಜೈಲಿನಿಂದ ಹೊರ ಬರುವ ವೇಳೆ ತಪಾಸಣೆ ಆದಾಗ ರೆಡ್ ಮಿ ಮೊಬೈಲ್ ಪತ್ತೆಯಾಗಿದೆ.


ರಾಗಿಗುಡ್ಡದ ನಿವಾಸಿಯಾಗಿದ್ದ ಮೊಹ್ಮದ್ ಸಕ್ಲೇನ್ ವಿಚಾರಣಾಧೀನ ಆರೋಪಿಯಾಗಿದ್ದು ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾನೆ. ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಹೋಗಬೇಕಾದರೆ ಆತನ ಬ್ಯಾಗ್ ನ್ನ ಎಕ್ಸರೇಗೆ ಒಳಪಡಿಸಿದಾಗ ಮೊಬೈಲ್ ಪತ್ತೆಯಾಗಿದೆ.
ಈ ಮೊಬೈಲ್ ನ್ನ ಕಾರಾಗೃಹದಿಂದ ಹೊರಗೆ ತೆಗೆದುಕೊಂಡು ಹೊರಗಡೆಗೆ ಸಾಗಿಸಲು ಪ್ರಯತ್ನಿಸಿದ್ದಾನೆ ಎಂಬ ಆರೋಪದಡಿ ಆತನ ವಿರುದ್ಧ ಅಧಿಕಾರಿ ಶಿವಾನಂದ ಶಿವಪುರ ಎಫ್ಐಆರ್ ದಾಖಲಿಸಿದ್ದಾರೆ.

ಕಾರಾಗೃಹದಲ್ಲಿ ಮೊಬೈಲ್ ಬಳಕೆ ನಿಷೇಧವಿದ್ದರೂ ಕೆಲ ಆರೋಪಿ ಹಾಗೂ ಅಪರಾಧಿಗಳು ಮೊಬೈಲ್ ಬಳಕೆ ಮಾಡುತ್ತಿರುವ ಹಿನ್ನಲೆಯಲ್ಲಿ ಈ ಎಫ್ಐಆರ್ ದಾಖಲಾಗಿದೆ.‌ ಜೈ ಹೋ ಅಲ್ಲಿ ಎಲ್ಲವೂ ಇರುತ್ತೆ. ಈ ರೀತಿ ಮೊಬೈಲ್ ಒಳ ಹೋಗಿದ್ದಾದರೂ ಹೇಗೆ? ಅಧಿಕಾರಿಗಳೇ, ಕೆಲ ಸಿಬ್ಬಂದಿಗಳೇ ನಿಮಗಿಲ್ಲಿ ಶತೃಗಳಾಗಿದ್ದಾರೆ ಎಚ್ಚರವಿರಲಿ!

By admin

ನಿಮ್ಮದೊಂದು ಉತ್ತರ

You missed

error: Content is protected !!