ಸಾಗರದ ಇಲ್ಲಿನ ಗುಲಾಮುದ್ದೀನ್ ರಸ್ತೆಯ ಎಂಟು ವರುಷದ ಬಾಲಕಿಯು ಅಟವಾಡುತ್ತಾ ಅಕಸ್ಮಿತವಾಗಿ ಎರಡು ರೂ
ನಾಣ್ಯವನ್ನು ನುಂಗಿದ್ದು ಪೋಷಕರು ಬರೋಬ್ಬರಿ 21 ಸಾವಿರ ರೂ
ಗಳನ್ನು ಖರ್ಚು ಮಾಡಿದ ಘಟನೆ ನಡೆದಿದೆ.
ಬಾಲಕಿಯ ಪೋಷಕರು ಅಸ್ಪತ್ರೆಗೆ ದಾಖಲಿಸಿದ್ದಾಗ. ವೈದ್ಯರು ಒಂದೆರೆಡು ದಿನ ದಿನದಲ್ಲಿ ಮಲ ವಿಸರ್ಜನೆ ರೂಪದಲ್ಲಿ ಹೋಗಬಹುದು ಎಂದು ವೈದ್ಯರು ಹೇಳಿದಾಗ ಪೋಷಕರು ಆತಂಕದಲ್ಲೇ ಮನೆಗೆ ತಲುಪಿದರು.
ನಂತರ ನಾಣ್ಯ ಹೊರಗೆ ಬರದೆ ಇರುವ ಕಾರಣ ಗಾಬರಿಗೊಂಡ ಪೋಷಕರು ನಗರದ ಅಸ್ಪತ್ರೆಗೆ ದಾಖಲಿಸಿದ್ದಾರೆ. ಶುಕ್ರವಾರ ವೈದ್ಯರು ಬಾಯಿಯ ಮೂಲಕ ಯಂತ್ರವನ್ನು ಒಳಗೆ ಬಿಟ್ಟು ನಾಣ್ಯವನ್ನು ಹೊರತೆಗೆದರು ನಂತರ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.