ಶಿವಮೊಗ್ಗ: ನಗರದ ಹೊನ್ನಾಳ್ಳಿ ರಸ್ತೆಯ ಫೈ ಓವರ್ ಸಮೀಪದ ನೆಕ್ಸಾಶೋ ರೂಂ ಬಳಿ, ಇಂದು ಸಂಜೆ ಶಾಲಾ ಬಸ್ ವೊಂದು ಕಾರಿಗೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ‘ನ್ಯೂಸ್ ವಾರಿಯರ್ಸ್’ ಪತ್ರಿಕೆ ಸಂಪಾದಕ ರಘುರಾಜ್ ಅವರು ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ.
ಪತ್ರಿಕಾ ಕಚೇರಿಯಿಂದ ಕಾರು ಚಲಾಯಿಸಿಕೊಂಡು ಆಗಮಿಸುತ್ತಿದ್ದವೇಳೆ, ಖಾಸಗಿ ಶಿಕ್ಷಣ ಸಂಸ್ಥೆಯ ಶಾಲಾ ಡಿಕ್ಕಿ ಹೊಡೆದ ಪರಿಣಾಮ ರಘುರಾಜ್ ಅವರ ಕೈ, ಎದೆ, ತಲೆ ಭಾಗಕ್ಕೆ ಗಾಯವಾಗಿದೆ. ತಕ್ಷಣವೇ ಸಾರ್ವಜನಿಕರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ