ವರದಿ: ರಾಕೇಶ್ ಸೋಮಿನಕೊಪ್ಪ

ಶಿವಮೊಗ್ಗ,ಆ.31: ನಗರದಲ್ಲಿ ಕಳೆದ ಎರಡು ವರ್ಷಗಳಿಂದ ಗಣೇಶ ಹಬ್ವದ ಇರದ ಸಂಭ್ರಮ ಈ ವರ್ಷ ಮುಗಿಲುಮುಟ್ಟಿದೆ.

ಈ ವರ್ಷ ಮಾರುಕಟ್ಟೆಗೆ ಬಂದ ಪಿಒಪಿ ಗಣಪತಿಗಳ ಮಾರುಕಟ್ಟೆ ಕುಸಿದಿದ್ದು, ಜನತೆ ಸಾಂಪ್ರದಾಯಕ ಮಣ್ಣಿನ ಗಣಪತಿಯತ್ತ ಮುಗಿಬಿದ್ದಿರುವುದು ನಗರದ ಸೈನ್ಸ್ ಮೈದಾನದಲ್ಲಿ ಕಂಡುಬಂತು. ಸಣ್ಣ ಗಾತ್ರದ ಗಣಪ ಆಯ್ಕೆ ವಿಚಾರದಲ್ಲಿ ಮಣ್ಣಿನ ಗಣಪನಿಗೆ ಸಖತ್ ಬೇಡಿಕೆಯಿತ್ತು.

ಯುವ ಸಮೂಹ ಗಣಪನನ್ನು ತರಲು ಟ್ರ್ಯಾಕ್ಟರ್, ಆಟೋಗಳ ಮೂಲಕ ಸೈನ್ಸ್ ಮೈದಾನ, ವಿನೋಬನಗರ, ವಿದ್ಯಾನಗರ ಸೇರಿದಂತೆ ನಗರದಲ್ಲಿ ಕೊಂಡು ಗಣಪನ ಜೊತೆ ಹಿಂದಿರುಗುವಾಗ ಯುವಕರು ಭಾಗವಾಧ್ವಜಗಳನ್ನು ಹಿಡಿದು.. ಗಣಪತಿ ಬಪ್ಪ‌ ಮೋರಿಯಾ, ಜೈ ಶ್ರೀರಾಮ್ ಎಂಬ ಜೈಂಕಾರಗಳನ್ನು ಕೂಗುತ್ತಾ.. ಡೊಳ್ಳುಗಳನ್ನು ಹೊಡೆಯುತ್ತಾ ಕುಣಿದು ಕುಪ್ಪಳಿಸಿದ್ದು ಕಣ್ಮನ ಸೆಳೆಯಿತು.

ಗಣಪನಿಗೆ ಭಾರಿ ಬೇಡಿಕೆ: ಕೆಲವರಿಗೆ ನಿರಾಸೆ
ಈ ಭಾರಿಯ ವಿಜೃಂಭಣೆಯ ಹಬ್ಬದಲ್ಲಿ ಭಾರಿ ಬೇಡಿಕೆ ಹಾಗೂ ದುಬಾರಿಯಾಗಿರುವುದಂತೂ ಸತ್ಯ.. ಚಿಕ್ಕ ಗಣಪನಿಗೆ 200 ರಿಂದ 500ರೂಗಳವರೆಗಿದ್ದರೆ. 2ರಿಂದ 3ಅಡಿಗಳ ಗಣಪನಿಗೆ ಎರಡು ಸಾವಿರದಿಂದ ಮೂರು ಸಾವಿರದವರೆಗೆ ಹಾಗೂ 5 ರಿಂದ 6 ಅಡಿ ಗಣಪನಿಗೆ 12 ಸಾವಿರದವರೆಗೆ ದುಬಾರಿಯಾಗಿತ್ತು.


ನಗರದ ಸೈನ್ಸ್ ಮೈದಾನದಲ್ಲಿ ಗಣಪನನ್ನು ಕೊಳ್ಳಲು ಹೋದ ಕೆಲ ಯುವಕರು ನಿರಾಸೆಯಿಂದ ಬೇರೆಡೆಗೆ ಅಂದರೆ ಭದ್ರಾವತಿಯ ತಲುಪಿದ ಹೋಗುವುದು ಸಹ ಕಂಡುಬಂದಿತ್ತು.


ಪೊಲೀಸರು ಸುಸ್ತೊ. ಸುಸ್ತು:
ಗಣಪನ ವಿಗ್ರಹಗಳನ್ನು ತರಲು ಶಿವಮೊಗ್ಗದ ಹಲವು ಭಾಗಗಳಿಂದ ಸೈನ್ಸ್ ಮೈದಾನಕ್ಕೆ ಬರುವ ವಾಹನಗಳನ್ನು ಹಾಗೂ ಟ್ರಾಫಿಕ್ ನಿಭಾಯಿಸುವಲ್ಲಿ ಪೊಲೀಸರು. ಸುಸ್ತಾಗಿರುವುದು ಕಂಡು ಬಂದಿತ್ತು.

By admin

ನಿಮ್ಮದೊಂದು ಉತ್ತರ

You missed

error: Content is protected !!