ವಿಶೇಷ ಸಂದರ್ಶನ

ಗಜೇಂದ್ರ ಸ್ವಾಮಿ
ಸುಮಾರು ಹತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ವಾಜಪೇಯಿ ಬಡಾವಣೆಯ ಸಮರ್ಥ ಹಾಗೂ ಸೂಕ್ತ ನಿವೇಶನದಾರರಿಗೆ ತಮ್ಮ ನಿವೇಶನವನ್ನು ಬಳಸಿಕೊಳ್ಳಲಯ ಅವಕಾಶ ಮಾಡಿಕೊಡುವ ಕಾರ್ಯವನ್ನು ಒಂದು ತಿಂಗಳೊಳಗೆ ಮುಗಿಸುವುದಾಗಿ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಪ್ರಾಧಿಕಾರದ ಅಧ್ಯಕ್ಷ ಎಸ್. ಎಸ್. ಜ್ಯೋತಿಪ್ರಕಾಶ್ ಇಂದಿಲ್ಲಿ ತಿಳಿಸಿದರು.
ಇಂದು ಮಧ್ಯಾಹ್ನ ತುಂಗಾತರಂಗ ಪತ್ರಿಕೆಯೊಂದಿಗೆ ಮನಬಿಚ್ಚಿ ಮಾತನಾಡಿದ ನೂತನ ಅಧ್ಯಕ್ಷ ಜ್ಯೋತಿ ಪ್ರಕಾಶ್ ಅವರು ವಾಜಪೇಯಿ ಬಡಾವಣೆಯ ಹಳೆಯ ರಗಳೆಗಳು ಇಲ್ಲಿ ಅಪ್ರಸ್ತುತ. ಇಲ್ಲಿನ ಸಮರ್ಥ ನಿವೇಶನದಾರರಿಗೆ ತಮ್ಮ ಜಾಗವನ್ನು ಬಳಸಿಕೊಳ್ಳುವ ಅವಕಾಶವನ್ನು ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಈಗಾಗಲೇ ಸಭೆ ನಡೆಸಿ ಮುಂದಿನ ಕ್ರಮ ರೂಪಿಸಲಾಗುತ್ತಿದೆ ಎಂದು ಅವರು ಹೇಳಿದರು.
ಸುಮಾರು ಹತ್ತು ವರ್ಷಗಳಿಂದ ಅಲ್ಲಿ ನಿವೇಶನ ಪಡೆದಂತಹವರು ನಿವೇಶನ ಬಳಸಿಕೊಳ್ಳಲಾಗದೆ ನಿಜಕ್ಕೂ ನೊಂದಿದ್ದಾರೆ. ಅವರಿಗೆ ಅನ್ಯಾಯವಾಗಿದೆ ಎಂದ ಅವರು ಒಂದೇ ತಿಂಗಳಲ್ಲಿ ಇದನ್ನು ಕಾರ್ಯರೂಪಕ್ಕೆ ತರಲಾಗುತ್ತದೆ. ಲೋಕಾಯುಕ್ತ ನಮ್ಮ ಕರ್ನಾಟಕದಲ್ಲಿಯೇ ಇರೋದು. ಮುಖ್ಯಮಂತ್ರಿಗಳು ಸಚಿವರು ಹಾಗೂ ಸರ್ಕಾರದ ಮಟ್ಟದಿಂದ ನಿವೇಶನದಾರರಿಗೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಹೇಳಿದರು.
ಕಡಿಮೆ ದರದಲ್ಲಿ ನಿವೇಶನ:
ಹೊಸ ಲೇಔಟ್ ಗಳನ್ನು ನಿರ್ಮಿಸುವುದನ್ನು ಮೂಲಕ ಮಧ್ಯಮ ವರ್ಗ ಹಾಗೂ ಕೆಳಗಿನ ನವರಿಗೆ ಕೆಳಗಿನವರಿಗೆ ಅತ್ಯಂತ ಕಡಿಮೆ ದರದಲ್ಲಿ ನಿವೇಶನ ದೊರಕುವಂತೆ ಮಾಡುವ ಉದ್ದೇಶ ಹೊಂದಿದ್ದೇನೆ. ರೈತರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕಡಿಮೆ ದರದಲ್ಲಿ ನಿವೇಶನ ದೊರಕುವಂತೆ ಮಾಡುವ ಮಹತ್ವಾಕಾಂಕ್ಷೆ ನಮ್ಮಲ್ಲಿದೆ ಎಂದ ಅವರು ಈಗಾಗಲೇ ಗೋಪಶೆಟ್ಟಿಕೊಪ್ಪದಲ್ಲಿ ಸುಮಾರು 150 ಎಕರೆ ಭೂಮಿ ಇದೆ ಎಂದಿದ್ದಾರೆ. ಸದ್ಯದಲ್ಲೇ ರೈತರೊಂದಿಗೆ ಮಾತಾಡುತ್ತೇನೆ ಎಂದರು.

ಶಿವಮೊಗ್ಗ ಹಾಗೂ ಭದ್ರಾವತಿ ನಗರಗಳ ಸಮಗ್ರ ಅಭಿವೃದ್ಧಿಯತ್ತ ಅಭಿವೃದ್ಧಿ ಪ್ರಾಧಿಕಾರ ಚಿಂತಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಹಲವು ಮಹತ್ವದ ಚಿಂತನೆಗಳು ಮೊಳೆತಿವೆ.
ನಗರಗಳಲ್ಲಿನ ಸ್ಲಂ ನಿವಾಸಿಗಳಿಗೆ ಸುಂದರ ಮನೆ ನಿರ್ಮಿಸಿಕೊಡುವ ಕನಸಿದೆ. ಸರಕಾರದಿಂದ ಇಂತಹ ಯೋಜನೆ ತರಸಿಕೊಂಡು ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಿದ್ದೇನೆ ಎಂದರು. ಹೇಗಾದರೂ ಮಾಡಿ ಈ ಸ್ಲಂಗಳನ್ನು ಸ್ವಚ್ಛಮಾಡಬೇಕು. ಅನಿವಾರ್ಯ ಕಾರಣದ ಸ್ಲಂಗಳನ್ನು ಖಾಲಿ ಮಾಡಿಸಿ ಆ ಜಾಗವನ್ನು ಸರ್ಕಾರದ ವ್ಯಾಪ್ತಿಯಲ್ಲಿ ಬಳಸಿಕೊಳ್ಳಬೇಕು. ಆ ಜನರಿಗೆ ಲಭ್ಯವಿರುವ ಸರ್ಕಾರದ ಜಾಗದಲ್ಲಿ ಅಪಾರ್ಟ್ ಮೆಂಟ್ ಮಾದರಿಯಲ್ಲಿ ಮನೆಗಳನ್ನು ನಿರ್ಮಿಸಿ ಅವರಿಗೆ ಸುಸಜ್ಜಿತವಾಗಿ ಬದುಕುವ ವ್ಯವಸ್ಥೆ ಕಲ್ಪಿಸಿಕೊಡುವ ಚಿಂತನೆ ಇದೆ.
ಸ್ಲಂಗಳನ್ನು ಖಾಲಿ ಮಾಡಿದ ಮೇಲೆ ಆ ಜಾಗವನ್ನು ನಗರದ ಸೌಂದರ್ಯವರ್ಧನೆಗೆ ಬಳಸಿಕೊಳ್ಳುವಂತೆ ಯೋಜನೆಗಳನ್ನು ಸರ್ಕಾರದ ಮಟ್ಟದಿಂದ ತರಿಸುವ ಕನಸಿದೆ ಎಂದರು.
ಅದೇ ಮಾದರಿಯಲ್ಲಿ ಶಿವಮೊಗ್ಗ ತುಂಗಾ ನದಿಗೆ ಕಟ್ಟಿರುವ ತಡೆಗೋಡೆಯ ಪಕ್ಕದಲ್ಲಿ ಇರುವಂತಹ ರಸ್ತೆಗಳನ್ನು ಒಂದಿಷ್ಟು ಅಲಂಕಾರ ಗೊಳಿಸುವ ಜೊತೆಗೆ ಅದನ್ನು ಜನರ ನಿಸರ್ಗ ತಾಣವನ್ನಾಗಿ ಮಾಡುವ ಉದ್ದೇಶವಿದೆ ಎಂದರು.
ಸೋಮಿನಕೊಪ್ಪ ಬೋವಿ ಕಾಲೋನಿ ಕೆರೆ ಅಭಿವೃದ್ಧಿಯ ವಿಚಾರವಾಗಿ ಒಂದಿಷ್ಟು ಮಾಹಿತಿಗಳನ್ನು ಪರಿಶಿಲಿಸುತ್ತಿದ್ದೇನೆ. ಶಿವಮೊಗ್ಗ ಭದ್ರಾವತಿಯ ಸಮಗ್ರ ಅಭಿವೃದ್ಧಿ ಪೂರಕವಾಗಿ ಪ್ರಾಧಿಕಾರ ಸದಾ ಸ್ಪಂದಿಸುತ್ತದೆ ಎಂದರು

By admin

ನಿಮ್ಮದೊಂದು ಉತ್ತರ

error: Content is protected !!