ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ಆತಂಕಕಾರಿಯಾಗಿ ಏರಿಕೆಯಾಗುತ್ತಿದ್ದು, ಸೋಮವಾರ ಮತ್ತೆ ಬರೋಬ್ಬರಿ 308 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5760ಕ್ಕೆ ಏರಿಕೆಯಾಗಿದೆ. ಅಲ್ಲದೆ ಇಂದು 387 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
308 ಸೋಂಕಿತರ ಪೈಕಿ 277 ಮಂದಿ ಅಂತಾರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಓರ್ವ ವ್ಯಕ್ತಿ ಅಂತಾರಾಷ್ಟ್ರೀಯ ಪ್ರಯಾಣದಿಂದ ಮರಳಿದ್ದಾರೆ. ಜೊತೆಗೆ, ಒಂದೇ ದಿನ ಬೆಂಗಳೂರು ನಗರವೊಂದರಲ್ಲೇ ಸೋಂಕಿನಿಂದ ಮೂವರು ಮೃತಪಟ್ಟಿದ್ದಾರೆ. ಇದರಿಂದ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 64ಕ್ಕೇರಿಕೆಯಾಗಿದೆ. ಇಲ್ಲಿಯವರೆಗೆ 2519 ಮಂದಿ ಗುಣಮುಖರಾಗಿದ್ದು, 3175 ಸಕ್ರಿಯ ಪ್ರಕರಣಗಳಿವೆ. 
ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ 67 ವರ್ಷದ ವ್ಯಕ್ತಿ ಸೋಮವಾರ ಸೋಂಕಿನಿಂದ ಮೃತಪಟ್ಟಿದ್ದಾರೆ. ಇವರು ಹೃದಯ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದರು. 
ಉಸಿರಾಟದ ತೊಂದರೆ, ಜ್ವರ ಮತ್ತು ನಿಶ್ಯಕ್ತಿಯಿಂದ ಆಸ್ಪತ್ರೆಗೆ ದಾಖಲಾಗಿರುವ 48 ವರ್ಷದ ಮಹಿಳೆ ಸೋಂಕಿಗೆ ಬಲಿಯಾಗಿದ್ದಾರೆ.
ಕಲಬುರಗಿಯಲ್ಲಿ 99, ಯಾದಗಿರಿಯಲ್ಲಿ 66, ಬೀದರ್ ನಲ್ಲಿ 48, ಉಡುಪಿಯಲ್ಲಿಲ 45, ಬೆಂಗಳೂರು ನಗರದಲ್ಲಿ 18, ಬಳ್ಳಾರಿಯಲ್ಲಿ 8, ಗದಗದಲ್ಲಿ 6, ಶಿವಮೊಗ್ಗ, ಧಾರವಾಡದಲ್ಲಿ ತಲಾ 4, ಹಾಸನ, ದಕ್ಷಿಣ ಕನ್ನಡದಲ್ಲಿ ತಲಾ 2, ಬಾಗಲಕೋಟೆಯಲ್ಲಿ 2, ಕೊಪ್ಪಳ, ರಾಮನಗರದಲ್ಲಿ ತಲಾ 1 ಪ್ರಕರಣಗಳು ವರದಿಯಾಗಿವೆ.

ಶಿವಮೊಗ್ಗದಲ್ಲಿ ಮತ್ತೆ ನಾಲ್ವರಿಗೆ ಸೊಂಕು..
ಶಿವಮೊಗ್ಗದಲ್ಲಿ ಇಂದು ಮತ್ತೆ 4 ಪ್ರಕರಣ ಪತ್ತೆಯಾಗಿವೆ. ಜಿಲ್ಲೆಯ ಸೊಂಕಿತರ ಸಂಖ್ಯೆ ಈಗ 69ಕ್ಕೆ ಏರಿಕೆಯಾಗಿದೆ. ಸೊಂಕಿತರ ಸಂಖ್ಯೆ ಅರ್ಧ ಶತಕ ದಾಟಿ ಮುಂದೆ ಓಡೋಡಿ ಹೋಗುತ್ತಿದೆ. ಜಿಲ್ಲೆಯಲ್ಲಿ ಏಳು ಕ್ವಾರಂಟೈನ್ ಜೋನ್ ಗಳನ್ನ ಮಾಡಲಾಗಿದೆ. ಇಂತಹ ಕೆಲವೆಡೆ ಚಿಕ್ಕ ಗಲಾಟೆಗಳಾಗಿವೆ. ಎಲ್ಲೆಡೆ ಅತಿ ಹೆಚ್ಚು ಪರಿಶೀಲನೆ ನಡೆಯತ್ತಿದೆ. ಸೊಂಕಿತರ ಹುಡುಕಾಟಕ್ಕೆ ವೈಯುಕ್ತಿಕ ಕಾಳಜಿಯೂ ಇರಲಿ. ಅನುಮಾನ ಎನಿಸಿದಾಕ್ಷಣ ಆಸ್ಪತ್ರೆಗೆ ಹೋಗುವುದು ಅತ್ಯಗತ್ಯ. ಎಚ್ಚರದ ಹೆಜ್ಜೆಯಷ್ಟೆ ನಮ್ಮದಾಗಿರಲಿ*

ಹುಷಾರ್
ಬೀದಿಯಲ್ಲೇ ತಿಂಡಿ ಊಟ, ಪಾನಿಪುರಿ, ಗೋಬಿ,…. ಎಲ್ಲವೂ ಸಿಗುತ್ತಿದೆ. ಅಲ್ಲೇ ತಿನ್ನಬಹುದು. ನಮ್ಮ ವ್ಯವಸ್ಥೆ ನಗರದಲ್ಲಿ ಸೋತಿದೆ. ಎಚ್ಚರಿಕೆಯಷ್ಟೆ ನಮ್ಮದಾಗಿರಲಿ.

By admin

ನಿಮ್ಮದೊಂದು ಉತ್ತರ

You missed

error: Content is protected !!