ಬೆಂಗಳೂರು : ನಿನ್ನೆ ಹೃದಯಾಘಾತಕ್ಕೆ ತುತ್ತಾಗಿ ಆಸ್ಪತ್ರೆಗೆ ಸೇರಿದ್ದಂತ ನಟ ಚಿರಂಜೀವಿ ಸರ್ಜಾ(39) ವಿಧಿವಶರಾಗಿದ್ದರು. ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ಇಂದು ಬೆಳಗ್ಗೆಯಿಂದಲೇ ಬಸನವನಗುಡಿ ನಿವಾಸದಲ್ಲಿ ಅಭಿಮಾನಿಗಳ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಅಂತಿಮ ದರ್ಶನದ ನಂತ್ರ, ಅವರ ಫಾರ್ಥೀವ ಶರೀರವನ್ನು ಕಳೆದ ಒಂದು ವರ್ಷದ ಹಿಂದಷ್ಟೇ ಕೊಂಡುಕೊಳ್ಳಲಾಗಿದ್ದಂತ ಕನಕಪುರ ಬಳಿಯ ನೆಲಗುಳಿ ಫಾರ್ಮ್ ಹೌಸ್ ನಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು.
ಸ್ಯಾಂಡಲ್ ವುಡ್ ಖ್ಯಾತ ನಟ ಚಿರಂಜೀವಿ ಸರ್ಜಾ ಅವರಿಗೆ ಕಳೆದ ನಿನ್ನೆ ಮಧ್ಯಾಹ್ನ ಹೃದಯಾಘಾತವಾಗಿತ್ತು.
ಕೂಡಲೇ ಅವರ ಕುಟುಂಬಸ್ಥರು ಜಯನಗರದ ಅಪಲೋ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಕೊನೆ ಉಸಿರು ಎಳೆದಿದ್ದ ಅವರನ್ನು ವೈದ್ಯರು ಲೈಫ್ ಸೇವ್ ಚಿಕಿತ್ಸೆಯ ಮೂಲಕ ಬದುಕಿಸುವ ಪ್ರಯತ್ನ ಮಾಡಿದರು. ಆದ್ರೇ ಪ್ರಯತ್ನ ಫಲಕೊಡಲಿಲ್ಲ. ಅಂತಿಮವಾಗಿ ಸಂಜೆಯ ವೇಳೆಗೆ ನಟ ಚಿರಂಜೀವಿ ಸರ್ಜಾ(39) ನಿಧನರಾಗಿದ್ದಾಗಿ ಘೋಷಿಸಲಾಗಿತ್ತು.
ಅವರ ಪಾರ್ಥೀವ ಶರೀರವನ್ನು ಬಸವನಗುಡಿಯ ನಿವಾಸದಲ್ಲಿ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಈ ಬಳಿಕ ಕುಟುಂಬಸ್ಥರು ನಿರ್ಧರಿಸಿದಂತೆ ಕನಕಪುರದ ಬಳಿ ನೆಲಗುಳಿ ಫಾರ್ಮ್ ಹೌಸ್ ಗೆ ಅಂತಿಮ ಯಾತ್ರೆಯ ಮೂಲಕ ಕೊಂಡೊಯ್ಯಲಾಯಿತು. ಹಿಂದೂ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನವನ್ನು ನಟ ಚಿರಂಜೀವಿ ಸರ್ಜಾ ಅವರ ತಂದೆ ನೆರವೇರಿಸಿದರು.

By admin

ನಿಮ್ಮದೊಂದು ಉತ್ತರ

You missed

error: Content is protected !!