ಸಿಟಿ ಕೋ ಆಪರೇಟೀವ್ ಬ್ಯಾಂಕಲ್ಲಿ ತಮಟೆ ಹೊಡೆದು ಪ್ರತಿಭಟನೆ… ಆಯಕಟ್ಟಿನ ಜಾಗ ನೋಡ್ಕೊಂಡೋರು ಬದಲಾಗ್ತಾರಾ ಎಂಬುದೇ ಭ್ರಮೆ!

ಶಿವಮೊಗ್ಗ, ಆ.08:
ಕೆಲವರಿಗಷ್ಟೇ ಸೊತ್ತು ಎಂಬಂತಿರುವ ಶಿವಮೊಗ್ಗದ ಸಿಟಿ ಕೋಆಪರೇಟಿವ್ ಬ್ಯಾಂಕ್ ನ ವಿರುದ್ದದ ಪ್ರತಿಭಟನೆ ನಿನ್ನೆಯ ಸಾಮಾನ್ಯ ಸಭೆಯಲ್ಲಿ ಕಂಡುಬಂದಿದೆ.
ಯಾರಿಗೆ ಸಾಲ ಕೊಡಬೇಕು? ಯಾರ ಸಾಲ ಹೇಗೆ ಕಮ್ಮಿ ಮಾಡಿ ವಸೂಲಿ ಮಾಡಬೇಕು? ಯಾರ ಆಸ್ತಿ ಹರಾಜಿನ ಹೆಸರಲ್ಲಿಆ ಆಸ್ತಿಯನ್ನು ಯಾರಿಗೆ ಕೊಡಿಸಬೇಕು ಎಂಬೋದ್ರಲ್ಲಿ ಎತ್ತಿದ ಕೈ ಇರುವ ಜನಮಹಾಶಯರನ್ನೇ ಹೆಚ್ಚಾಗಿ ಹೊಂದಿರುವ ಈ ಬ್ಯಾಂಕ್ ಮಾದ್ಯಮಗಳ ವಿಚಾರದಲ್ಲೂ ನೀಡುವ ಜಾಹೀರಾತು ಕೆಲವರಿಗಷ್ಟೇ ಸೀಮಿತ ಮಾಡಿಕೊಂಡಿದೆ.
ಗೆದ್ದೇ ಗೆಲ್ತೇವೆ ಎಂಬ ತಂಡವೊಂದು ತಮ್ಮದೇ ಓಟು ಬ್ಯಾಂಕ್ ರೂಪಿಸಿಕೊಂಡು ಹೊಸಬರಿಗೆ ಅವಕಾಶವೇ ಇಲ್ಲದಂತೆ ಮಾಡಿರುವುದು ಜಗ್ಗಜಾಹೀರಾಗಿರುವ ಸಂಗತಿ.


ಹೊಸಬರನ್ನ ನಿರ್ದೇಶಕರನ್ನಾಗಿ ನೇಮಿಸಿಕೊಳ್ಳಬೇಕು ಎಂಬುದು ಸಾಮಾನ್ಯ ಸಭೆಯಲ್ಲಿ ಪ್ರತಿಭಟನಾಕಾರರ ಮುಖ್ಯ ಆಗ್ರಹ.
ನಿನ್ನೆ ಕೋಟೆ ಸಿಟಿ ಕೋಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷ ಉಮಾಶಂಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸ್ವಾಗತ ನಡೆಯುತ್ತಿದ್ದಂತೆ ಪ್ರಭಾಕರ್ ಗೌಡ, ಸುನೀಲ್ ಮೊದಲಾದ 6 ಜನರು ಈ ಹಿಂದೆ ನಡೆದ ಒಪ್ಪಂದದಂತೆ ನಮ್ಮನ್ನೂ ನಿರ್ದೇಶಕರನ್ನಾಗಿ ನೇಮಿಸಿಕೊಳ್ಳುವಂತೆ ಆಗ್ರಹಿಸಲಾಗಿತ್ತು.
15 ಜನರ ನಿರ್ದೇಶಕರನ್ನ ಹೊಂದಿರುವ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನಲ್ಲಿಮಾತಿನಂತೆ 7 ಜನರನ್ನ ಹೊಸ ನಿರ್ದೇಶಕರನ್ನಾಗಿ ನೇಮಿಸಿಕೊಳ್ಳಬೇಕಿತ್ತು. ಮರಿಯಪ್ಪ ಸೇರಿದಂತೆ ಎಲ್ಲಾ ಹದಿನಾಲ್ಕು ನಿರ್ದೇಶಕರು ರಾಜೀನಾಮೆ ನೀಡಿದ್ದಾರೆ. ಆದರೆ ದೀಪಕ್ ರಾಜೀನಾಮೆ ನೀಡದಿರುವುದು ಈ ಆಕ್ರೋಶಕ್ಕೆ ಕಾರಣವಾಗಿತ್ತು.
ಜನರು ಹಿಂದಿನ ಒಪ್ಪಂದದಂತೆ 2⅓ ವರ್ಷ ಅಧಿಕಾರವಧಿ ಮುಗಿಸಿ ರಾಜೀನಾಮೆ ನೀಡಿದ್ಧರು. ಆದರೆ ಜೆಡಿಎಸ್ ನ ಮಹೇಶ್ ಅವರ ಪುತ್ರ ಕಿರಣ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡದೆ ಇರುವುದು ಉಳಿದ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದೆಯಂತೆ…!
ವಾಡಿಮೆಯಂತೆ ಈಗಿನ ಅವಧಿಯಲ್ಲಿ ನವೀನ್ ದಳವಾಯಿ, ಎ.ಹೆಚ್. ಸುನೀಲ್, ರಿರ್ಚಡ್, ಚೇತನ್, ಸಿದ್ದಪ್ಪ, ರಾಜು, ಪ್ರಭಾಕರ ಗೌಡ ಅವರಿಗೆ ಏಳು ಜನ ಸ್ಥಾನ ಬಿಟ್ಟುಕೊಡಬೇಕಾಗಿತ್ತು. ದೀಪಕ್ ಬಿಡದ ಹಿನ್ನೆಲೆಯಲ್ಲಿ ಸದಸ್ಯರೆಲ್ಲರೂ ಸಭೆಯ ಭಾವಿಗೆ ಬಂದು ಪ್ರತಿಭಟನೆ ನಡೆಸಿದ್ದಾರೆ. ನಂತರ ಸಭೆಯ ಅಧ್ಯಕ್ಷ ಉಮಾಶಂಕರ್ ದೀಪಕ್ ರನ್ನ ನಿರ್ದೇಶಕ ಸ್ಥಾನದಿಂದ ತೆಗೆದು ಹಾಕಲಾಗಿದೆ ಎಂಬ ಘೋಷಣೆಯ ನಂತರ ಸದಸ್ಯರು ಪ್ರತಿಭಟನೆ ಹಿಂಪಡೆದಿದ್ದಾರೆ. ತಮಟೆಯನ್ನೂ ಭಾರಿಸುವ ಮೂಲಕ ಪ್ರತಿಭಟನೆ ನಡೆಸಿದ್ದು ವಿಶೇಷ.
ಏನೇ ಆಗ್ಲಿ, ಇಲ್ಲಿನ ಎಲ್ಲಾ ವ್ಯವಹಾರ ಕೆಲವರ ಸ್ವತ್ತಂತಾಗಿದೆ ಎಂಬುದು ಆರೋಪ. ಕಿವಿ ಇದ್ದರೂ ಕೇಳದಂತಿರುವ ಕೆಲವರಿಗೆ ಇದುವೇ ಮಹಾಲಕ್ಷಿ ಕೃಪಾ ದೇಗುಲವಂತೆ…!

By admin

ನಿಮ್ಮದೊಂದು ಉತ್ತರ

You missed

error: Content is protected !!