ಶಿವಮೊಗ್ಗ,ಆ.08:

ಈ ನಿಮ್ಮ ತುಂಗಾತರಂಗ ಸುದ್ದಿಯನ್ನೂ ಓದಿ

ಮಾನ್ಯ ಜಿಲ್ಲಾಧಿಕಾರಿಗಳೇ, ನೀವ್ ‘ಆರ್ಡರ್’ ಮಾಡಿದ ನಂತ್ರ “ಎಕ್ಕುಟ್ಟಿ” ಹೋಗಿದೆ ಪ್ರೀಢಂ ಪಾರ್ಕ್…!, ವೀಡಿಯೋ ಸಹಿತದ ಸುದ್ದಿ ಓದಿ https://tungataranga.com/?p=13881

ಇಲ್ಲಿನ ಸ್ಮಾರ್ಟ್ ಸಿಟಿ ಕಾಮಗಾರಿಯ ಬಗ್ಗೆ ನಾಗರೀಕ ಹಿತರಕ್ಷಣ ವೇದಿಕೆ ಸ್ಮಾರ್ಟ್ ಸಿಟಿ ಕಾಮಗಾರಿ ಕಳಪೆಯಿಂದ ಕೂಡಿದೆ ಎಂಬ ನಿರಂತರದ ಜನರ, ಸಂಘಸಂಸ್ಥೆಗಳ ಆರೋಪಕ್ಕೆ ಪುಷ್ಟಿ ನೀಡಿದಂತೆ ಸ್ಮಾರ್ಟ್ ಸಿಟಿ ಎಂಡಿಯನ್ನು ನಂಬದೇ ನೇರವಾಗಿ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ನಮ್ಮ ವೇದಿಕೆ ಸ್ಮಾರ್ಟ್ ಸಿಟಿ ಕಾಮಗಾರಿಯ ಕುರಿತು ಆರಂಭದಿಂದಲೂ ಸಂಘಟನೆ ಆಕ್ಷೇಪವೆತ್ತುಕೊಂಡು ಬಂದಿತ್ತು. ಹಿತರಕ್ಷಣ ವೇದಿಕೆಯ ಸದಸ್ಯ ಹಾಗೂ ಅಣ್ಣಾ ಹಜಾರೆ ಹೋರಾಟ ಸಮಿತಿಯ ಮುಖಂಡ ದಿ. ಅಶೋಕ್ ಯಾದವ್ ಈ ಸ್ಮಾರ್ಟ್ ಸಿಟಿ ಕಾಮಗಾರಿಯು ಅವೈಜ್ಞಾನಿಕವಾಗಿ ಕೂಡಿದೆ ಎಂದು ಹೋರಾಟ ಮಾಡಿದ್ದು ಇನ್ನೂ ಚಿರನೆನಪಿನಲ್ಲಿ ಉಳಿದಿದೆ.
ಆದರೆ ಯೋಜನೆಯ ಎಂಡಿ ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಯಾವುದೇ ಅವೈಜ್ಞಾನಿಕ ಕಾಮಗಾರಿ ನಡೆದಿಲ್ಲವೆಂಬುದು ಅವರ ನಿಲುವಾಗಿದೆ. ಈ ಅಧಿಕಾರಿಯನ್ನ ಗೋಪಾಳದಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂದು ತಿಳಿಸಲು ವೇದಿಕೆ ಪ್ರಯತ್ನ ಪಟ್ಟಿತ್ತು.


ಆದರೆ ಸ್ಮಾರ್ಟ್ ಸಿಟಿ ಅಧಿಕಾರಿ ಚಿದಾನಂದ ವಟಾರೆ ಗೋಪಾಳದಲ್ಲಿ ನಡೆದ ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಯಾವುದೇ ಅವೈಜ್ಞಾನಿಕವಾಗಿಲ್ಲ ಎಂದು ವೇದಿಯ ಮನವಿಯನ್ನ ತಿರಸ್ಕರಿಸಿದ್ದಾರೆ. ಆಡುವ ಹುಡುಗನಿಂದ ಹಿಡಿದು ಅಲ್ಲಾಡುವ ಮುದುಕನವರೆಗೂ ಯಾವುದೇ ಬೀದಿಯಲ್ಲೂ ಕೇಳಿದರೂ ಒಂದೇ ಉತ್ತರ ಕೇಳಿ ಬರುವುದು ಸ್ಮಾರ್ಟ್ ಸಿಟಿ ಕಾಮಗಾರಿ ಅವೈಜ್ಞಾನಿಕ ವಾಗಿದೆ ಎಂದು. ಆದರೆ ಅಧಿಕಾರಿಗಳು ಒಪ್ಪುವುದಿಲ್ಲ. ಅಂದರೆ ಜನ ಅಭಿಪ್ರಾಯಕ್ಕೆ ಕಿಂಚಿತ್ತು ಕಿಮ್ನತ್ತಿಲ್ಲವೆಂಬುದು ಇಲ್ಲಿ ಸಾಬೀತಾಗಿದೆ.
ಈ ಹಿನ್ನಲೆಯಲ್ಲಿ ನಾಗರೀಕ ಹಿತರಕ್ಷಣಾ ವೇದಿಕೆ ಡಿವಿಎಸ್ ಮತ್ತು ಕಾನ್ವೆಂಟ್ ರಸ್ತೆಯಲ್ಲಿ ಆಗಿರುವ ಸ್ಮಾರ್ಟ್ ಸಿಟಿ ಕಾಮಗಾರಿಗೆ ಎರಡು ತಿಂಗಳು ಕಳೆದಿಲ್ಲ. ಹಾಳಾಗ್ತಾ ಬಂದಿದೆ. ಸೀಲ್ ಕೋಟ್ ಕಿತ್ತುಕೊಂಡು ಹೋಗಿದೆ. ಇಲ್ಲಿ ಗುಣಮಟ್ಟದ ಕಾಮಗಾರಿ ಎಂಬುದು ಮರೀಚಿಕೆಯಾಗಿದೆ. ಇದನ್ನ ಸ್ಮಾರ್ಟ್ ಸಿಟಿ ಎಂಡಿಗೆ ತಿಳಿಸಿದರೆ ಇದಕ್ಕೆ ಮತ್ತೊಂದು ಸಬೂಬು ನೀಡಬಹುದು ಎಂದು ಆಗ್ರಹಿಸಿ ವೇದಿಕೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಕಾಮಗಾರಿಯ ಇಲ್ಲಿಯವರೆಗಿನ ಎಂಬಿ ರಿಜಿಸ್ಟಾರ್ ಸೇರಿ ಜಿಲ್ಲಾಧಿಕಾರಿಗಳು ವಶಕ್ಕೆ ಪಡೆಯಬೇಕು.ಸ್ವತಂತ್ರ್ಯ ಏಜೆನ್ಸಿಯಿಂದ ತನಿಖೆಯಾಗಬೇಕು. ಕಳಪೆ ಕಾಮಗಾರಿ ಕುರಿತು ಅಧಿಕಾರಿಗಳ ವಿರುದ್ಧ ಸರ್ಕಾರಕ್ಕೆ ವರದಿ ನೀಡಬೇಕು. ಇಲ್ಲಿ ನಡೆದಿರುವ ಆರ್ಥಿಕ ನಷ್ಟ ರಾಷ್ಟ್ರೀಯ ಸಂಪತ್ತುಗಳ ನಷ್ಟದ ವಸೂಲಾತಿಯನ್ನ ಅಧಿಕಾರಿಗಳಿಂದ ಭರಿಸಿ ಮತ್ತೆ ಗುಣಮಟ್ಟದ ಕಾಮಗಾರಿ ನಡೆಸುವಂತೆ ವೇದಿಕೆ ಮನವಿಯಲ್ಲಿ ಒತ್ತಾಯಿಸಿದೆ.

By admin

ನಿಮ್ಮದೊಂದು ಉತ್ತರ

You missed

error: Content is protected !!