ಶಿವಮೊಗ್ಗ, ಆ.07:
ಶಿವಮೊಗ್ಗ ನಗರದ ಹಾರ್ಟ್ ಆಫ್ ಸಿಟಿಯೊಳಗಿನ ಪ್ರೀಡಂ ಪಾರ್ಕ್ ಮಾನ್ಯ ಯಡಿಯೂರಪ್ಪ ಅವರ ಕನಸು ಸಕಾರಗೊಂಡ ಪ್ರಯತ್ನದ ಫಲ. ಇದಕ್ಕಾಗಿ ಅಂದು ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅವರು ಇದಕ್ಕಾಗಿ ಕೋಟಿಗಟ್ಟಲೇ ಹಣ ಹಾಕಿಸಿದರು. ಇಡೀ ರಾಜ್ಯದಲ್ಲೇ ಇಲ್ಲದಂತಹ ಇಂತಹ ಅದ್ಬುತ ಸ್ಥಳ ಮಾಡಿಕೊಟ್ಟರು.
ಇವತ್ತು ಕೋಟಿಗಟ್ಟಲೇ ರೂ ವೆಚ್ಚದಲ್ಲಿ ನಿರ್ಮಾಣವಾದ ಪ್ರೀಡಂ ಪಾರ್ಕ್ ಹೇಗಿದೆ? ಅಲ್ಲಿನ ಶೌಚಾಲಯ ಹೇಗಿದೆ? ವಾಹನ ನಿಲುಗಡೆ, ಜನರ ಮುಕ್ತ ವಾಕಿಂಗ್ ಹೇಗಿದೆ ಗೊತ್ತಾ? ಇಲ್ಲಿನ ನೀರು ಕುಡಿಯುವ ಜಾಗ ಯಾವತ್ತಾದರೂ ಬಳಕೆಯಾಗಿದೆಯಾ?
ಇದು ತುಂಗಾತರಂಗ ಹುಡುಕಿದ ಸುದ್ದಿಯೇನಲ್ಲ. ಪತ್ರಿಕೆ ಬುಡಕ್ಕೆ ನಿತ್ಯ ನಿರಂತರ ಬರುತ್ತಿದ್ದ ಆರೋಪದ ಸುದ್ದಿ. ಇದನ್ನು ನೇರವಾಗಿ ಮಾನ್ಯ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಸಾಹೇಬರ ಸನ್ನಿದಿಗೆ ಇಡುವಂತೆ ಕೋರಿರುವ ಜನರ ಅಭಿಪ್ರಾಯವನ್ನು ಜನರ ಮುಂದಿನಿಂದಲೇ ಜಿಲ್ಲಾಧಿಕಾರಿ ಗಮನಕ್ಕೆ ತರುವ ಪ್ರಯತ್ನ ಅಷ್ಟೇ…!
ಕಳೆದ ಎರಡು ತಿಂಗಳ ಹಿಂದೆ ಜನರ ಕೋರಿಕೆ ಮೇರೆಗೆ ಬಿಜೆಪಿ ಮುಖಂಡ ದತ್ತಾತ್ರಿ ಅವರ ಅವರ ಒತ್ತಾಯಕ್ಕೆ ಮಣಿದು ಬಂದ ಡಾ. ಸೆಲ್ವಮಣಿ ಸಾಹೇಬರು ಹೇಳಿದ ಮಾತನ್ನು ಯಾರು ಕೇಳಿದ್ದಾರೆ.
ನಗರಪಾಲಿಕೆ ಆಯುಕ್ತರು ಇತ್ತ ಗಮನಿಸಲೇ ಇಲ್ಲ. ಸ್ಮಾರ್ಟ್ ಸಿಟಿ ಎಂ ಡಿ ಕನಸಲ್ಲೂ ಇದರ ಬಗ್ಗೆ ಯೋಚಿಸಿಲ್ಲ. ಅವತ್ತು ಜಿಲ್ಲಾಧಿಕಾರಿ ಎದುರು ಸರಿ ಮಾಡುತ್ತೇವೆ ಎಂದಿದ್ದ ಎಂಜಿನಿಯರ್ ಮಹಾಶಯ ಸಹ ತಮ್ಮ ಸೂಚನೆಗೆ ಕಿಮಕ್ ಎಂದಿಲ್ಲ. ಅಂದರೆ ತಾವು ಈ ಸ್ಥಳವನ್ನು ನೋಡಿ ಸೂಚನೆ ಕೊಟ್ಟಿದ್ದಾದರೂ ಏಕೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಇದೊಂದು ವಾಹನ ಕಲಿಕೆಯ ಸ್ಥಳವಾಗಿದೆ. ರಾತ್ರಿ ಕುಡುಕರ ಅಡ್ಡೆಯಾಗಿದೆ. ಮೀಸೆ ಬಾರದ ಹುಡುಗರ ಸಿಗರೇಟ್ ಗಾಂಜಾ ಸೇವನೆಯ ತಾಣವಾಗಿದೆ. ಇಲ್ಲಿ ಕಲಿಕೆ ನೆಪದಲ್ಲಿ ವಾಕಿಂಗ್ ಬರುವ ಹೆಣ್ಣುಮಕ್ಕಳ ಮುಂದೆ ಪೋಜು ನೀಡುವವರ ಡೊಳ್ಳು ಹೊಡೆಯುತ್ತಾ ಶಬ್ಧ ಮಾಲಿನ್ಯ ಉಂಟುಮಾಡುವ ಕೊಂಪೆಯಾಗಿದೆ ಎಂಬುದು ಕಣ್ಣಾರೆ ಕಂಡ ಸತ್ಯ.
ಶೌಚಾಲಯ ಸರಿ ಮಾಡೋ ಮನೆ ಹಾಳಾಗಿ ಹೋಗಲಿ. ಇರುವುದಕ್ಕೆ ಬೀಗ ಹಾಕಿದ್ದಾರೆ. ಹೆಣ್ಷು ಮಕ್ಕಳ ಶೌಚಾಲಯ ಬೀಗ ಹಾಕಿದ್ದರೂ ಅದರ ಬಾಗಿಲ ಗಾಜು ಒಡೆದು ಒಳಗೆ ಹೋಗಿ ಅನೈತಿಕ ಚಟುವಟಿಕೆ ನಡೆಸುವ ತಾಣವಾಗಿದೆ. ಸರ್ಕಾರದ ಲಕ್ಷಾಂತರ ಹಣ ಪುಂಡ ಪೋಕರಿ ಪೆಡ್ಡೆ ಹುಡುಗರಿಗೆ ಹಾಸಿಗೆ ಹಾಸಿಕೊಟ್ಟಂತಾಗಿದೆ ಎಂಬ ಈ ಆರೋಪವನ್ನು ತಾವು ಮತ್ತೊಮ್ಮೆ ನೋಡಿ ಬಂದಿ ನಿಮ್ಮ ಆರ್ಡರ್ ಎಲ್ಲಿ ಬಂತು ನೋಡಿಕೊಳ್ಳಿ ಎಂದೇ ಜನ ಕೋರಿದ್ದಾರೆ.
ಮಾನ್ಯ ಜಿಲ್ಲಾಧಿಕಾರಿಗಳೇ, ಮತ್ತೊಮ್ಮೆ ಬಿಡುವಾದಾಗ ಹೋಗಿ ಬನ್ನಿ ಎಂದು ಜನ ಕೋರಿದ್ದಾರೆ.