ಶಿವಮೊಗ್ಗ, ಆ.07:
ದೊಡ್ಡ ಆಸ್ಪತ್ರೆಗಳ ಕಾರ್ಪೋರೇಟ್ ವ್ಯವಸ್ಥೆಯಲ್ಲಿ ಒಂದು ರೂ. ಒಂದು ರೂ ಲೆಕ್ಕ ಹೆಚ್ಚುಕಮ್ಮಿಯಾದರೆ ಗೊತ್ತಾಗುತ್ತದೆ.
ಇದು ಕೆಲವೊಮ್ಮೆ ಬೇಗ ಪತ್ತೆಯಾದರೆ ಕೆಲವೊಮ್ಮೆ ತಡವಾಗಿ ಪತ್ತೆಯಾಗುತ್ತದೆ. ಆದರೆ ಸಾಗರ ರಸ್ತೆಯ ನಂಜಪ್ಪ ಲೈಫ್ ಕೇರ್ ನಲ್ಲಿ ಬಿಲ್ಲಿಂಗ್ ಸೆಕ್ಷನ್ ನಲ್ಲಿ ಕೆಲಸ ಮಾಡುವ ನೌಕರನೋರ್ವ ಈ ಬಿಲ್ಲಿಂಗ್ ನ್ನ ಮಾಡಿಕೊಂಡು 11,03,686 ರೂ.ದುರ್ಬಳಕೆ ಮಾಡಿಕೊಂಡಿರುವುದು ಪತ್ತೆಯಾಗಿದ್ದು ದುರ್ಬಳಕೆ ಹಣವನ್ನ ಸಂಸ್ಥೆಗೆ ವಾಪಾಸ್ ನೀಡಲಾಗದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕೆಲಸಕ್ಕೆ ಗೈರು ಹಾಜರಿಯಾಗಿರುವ ಘಟನೆ ನಡೆದಿದೆ.
ಬಿಲ್ಲಿಂಗ್ ಸೆಕ್ಷನ್ ನಲ್ಲಿ ಕೆಲಸ ಮಾಡುತ್ತಿದ್ದ ಕೊನಗವಳ್ಳಿ ಗ್ರಾಮದ ಸಂಜಯ್ 2020 ರಿಂದ 2022 ಜೂನ್ 24 ರವರೆಗೆ ಕೆಲಸ ಮಾಡಿಕೊಂಡು ಬಂದಿದ್ದು, ಗ್ರಾಹಕರಿಗೆ ಬಿಲ್ ರದ್ಧತಿ ಅಥವ ಮರುಪಾವತಿ ಮಾಡುವಾಗ ವೈದ್ಯರ ಸಹಿ ಮತ್ತು ಸೀಲ್ ಇರುವ ರಶೀದಿಯನ್ನ ಪಡೆದು ಮೇಲಾಧಿಕಾರಿಗಳಿಗೆ ವಿವರಣೆ ನೀಡಿ ನಂತರ ಅವರಿಂದ ಅನುಮತಿ ಪಡೆದು ಹಣ ನೀಡಬೇಕಾಗಿರುವುದು ಆ ಆಸ್ಪತ್ರೆಯ ನಿಯಮವಾಗಿರುತ್ತದೆ.
ಇತ್ತೀಚೆಗೆ ಹೆಚ್ಚಿನ ಹಣ ಮರು ಪಾವತಿಯಾಗಿರುವುದು ಮ್ಯಾನೇಜರ್ ಹರಿ ಸಿಂಗ್ ಗಮನಕ್ಕೆ ಬಂದಿರುತ್ತದೆ. ಹರಿಸಿಂಗ್ ಖುದ್ದಾಗಿ ವೈದ್ಯರ ಬಳಿ ರಶೀದಿ ತೋರಿಸಿದಾಗ ವೈದರುಗಳು ಇವು ಯಾವುವು ನಮ್ಮ ಸಹಿ ಸೀಲುಗಳಲ್ಲವೆಂದು ಸ್ಪಷ್ಟಪಡಿಸುತ್ತಾರೆ. ಈ ಮಾಹಿತಿಯನ್ನ ಆಸ್ಪತ್ರೆಯ ಹೆಚ್ ಆರ್ ಗಮನಕ್ಕೆ ತಂದು ಹೆಚ್ಚಿನ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.
ತನಿಖೆ ನಡೆಸಿದ ಹೆಚ್ ಆರ್ ವಿಭಾಗಕ್ಕೆ ಆಸ್ಪತ್ರೆಯಲ್ಲಿ ಬಿಲ್ಲಿಂಗ್ ವಿಭಾಗದ ಸಂಜಯ್ ಎಂಬ ಯುವಕ ಮಿಸ್ ಯೂಸ್ ಮಾಡಿಕೊಂಡಿರುವುದು ಪತ್ತೆಯಾಗುತ್ತದೆ. ಆಸ್ಪತ್ರೆಗೆ ಬಂದ ರೋಗಿಗಳು ತಪಾಸಣೆ ನಡೆಸಿ ಅದಕ್ಕೆ ಶುಲ್ಕಪಾವತಿಸಿ ತೆರಳಿದ ನಂತರ ಈ ಸಂಜಯ್ ಬಿಲ್ ನ್ನ ರೀಪ್ರಿಂಟ್ ಹಾಕಿಸುತ್ತಿದ್ದ, ರೀಪ್ರಿಂಟ್ ಹಾಕಿಸಿ ಅದಕ್ಕೆ ವೈದ್ಯರ ನಕಲಿ ಸಹಿ ಮತ್ತು ಸೀಲು ಒತ್ತಿ ಮೇಲಧಿಕಾರಿಗಳಿಗೆ ತೋರಿಸಿ ವೈದ್ಯರೇ ಹೇಳಿದ್ದಾರೆ ಎಂದು ನಂಬಿಸುತ್ತಿದ್ದ.
ಇದರಿಂದ 11,03,686/- ರೂ ಹಣವನ್ನ ಆತ ಸಂಗ್ರಹಿಸಿ ಸ್ವಂತಕ್ಕೆ ಬಳಸಿರುವುದು ಪತ್ತೆಯಾಗಿದೆ. ಈ ಹಣವನ್ನ ಸಂಸ್ಥೆಗೆ ಹಿಂದಿರುಗಿಸಬೇಕೆಂದು ಸೂಚಿಸಿದಾಗ 1 ಲಕ್ಷದ 20 ಸಾವಿರ ರೂ. ಪಾವತಿಸಿದ ಸಂಜಯ್ ಉಳಿದ 9,83,686 ರೂ. ಗಳನ್ನ ಮರು ಪಾವತಿಸಲಿರಲಿಲ್ಲ. 15 ದಿನ ಸಮಯ ತೆಗೆದುಕೊಂಡಿದ್ದ ಸಂಜಯ್ ತದನಂತರ ಕೆಲಸಕ್ಕೆ ಬಂದಿಲ್ಲ, ಫೊನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಈ ಬಗ್ಗೆ ಹರಿಸಿಂಗ್ ತುಂಗ ನಗರದಲ್ಲಿ ದೂರು ದಾಖಲಿಸಿದ್ದಾರೆ