ಶಿವಮೊಗ್ಗ:
ಸೋಮಿನಕೊಪ್ಪ ರಸ್ತೆಯ ಗೆಜ್ಜೇನಹಳ್ಳಿಗೆ ಹೋಗುವ ಮಾರ್ಗದಲ್ಲಿ ಸ್ವಾಮಿ ವಿವೇಕಾನಂದ-ರಾಮಕೃಷ್ಣ ಆಶ್ರಮದ ಬಳಿಯ ಬೊಮ್ಮನಕಟ್ಟೆ ಸಚಿನ್


ಅವರ ಅಡಿಕೆ ತೋಟದಲ್ಲಿ ಮಂಗಳವಾರ ಆಶ್ರಯ ಪಡೆದಿದ್ದ ಹೆಬ್ಬಾವನ್ನು ಸ್ನೇಕ್ ಕಿರಣ್ ರಕ್ಷಿಸಿ ಕಾಡಿಗೆ ಬಿಟ್ಟರು. ತೋಟದ ಮಾಲೀಕರು ಕಳೆ ಗಿಡಗಳ ಕತ್ತರಿಸಿ ತೆಗೆಯುತ್ತಿದ್ದ ವೇಳೆ ಎಂಟು

ಅಡಿ ಉದ್ದದ ಹೆಬ್ಬಾವು ಮಲಗಿರುವುದು ಗೊತ್ತಾಯಿತು. ತೋಟದಲ್ಲಿ ಆಹಾರ ಸೇವಿಸಿ ಮುಂದೆ ಸಾಗಲು ಸಾಧ್ಯವಾಗದೇ ಹಾವು ಮಲಗಿತ್ತು. ಅದನ್ನು ಕಂಡ

ಸಚಿನ್ ಅವರು ಸಹಾಯಕ್ಕೆ ಮೊರೆ ಇಟ್ಟಾಗ ಸ್ಥಳಕ್ಕೆ ಬಂದ ಸ್ನೇಕ್ ಕಿರಣ್ ಹಾವನ್ನು ಸಂರಕ್ಷಿಸಿದರು.