ಸಾಗರ,
ತಾಲ್ಲೂಕಿನ ಕೊರ್ಲಿಕೊಪ್ಪ ಗ್ರಾಮದಲ್ಲಿ ತ್ಯಾಗರ್ತಿ ವಾಸಿ ಅಜಿತ್ (21) ಬೈಕ್ನಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಜೆಸಿಬಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅಜಿತ್ ಶವ ತ್ಯಾಗರ್ತಿ-ಕುಂದೂರು ಮಾರ್ಗದ ಕೊರ್ಲಿಕೊಪ್ಪ ಕೆರೆ ಏರಿಯ ಸಮೀಪದ ರಸ್ತೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಗ್ರಾಮಸ್ಥರು ಅಂಬ್ಯುಲೆನ್ಸ್ನಲ್ಲಿ ಸಾಗರ ಆಸ್ಪತ್ರೆಗ ಶವವನ್ನು ತೆಗೆದುಕೊಂಡು ಹೋಗಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.