ದಾವಣಗೆರೆ,
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು 75 ನೇ ವಸಂತಕ್ಕೆ ಕಾಲಿಟ್ಟಿದ್ದು, ಜನ್ಮದಿನದ ಅಮೃತ ಮಹೋತ್ಸವ ಸಂಬಂಧ ಬೆಣ್ಣೆನಗರಿ

ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮ ಆರಂಭವಾಗಿದೆ.
ಸಿದ್ದರಾಮಯ್ಯನವರ ಅಭಿಮಾನಿಗಳು ಉತ್ತರ ಕರ್ನಾಟಕ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ದಾವಣಗೆರೆಗೆ ಆಗಮಿಸಿದ್ದು, ಬೆಂಗಳೂರು –

ಪುಣೆ ಹೆದ್ದಾರಿಯಲ್ಲಿ ಬರೋಬ್ಬರಿ ೬ ಕಿಲೋ ಮೀಟರ್ ಗೂ ಹೆಚ್ಚು ದೂರ ಸಂಚಾರ ದಟ್ಟಣೆ ಉಂಟಾಗಿದೆ.
ಬೆಂಗಳೂರು ಹೆದ್ದಾರಿ ಎನ್ ಎಚ್ ೪೮ರ ಬೈಪಾಸ್ ರಸ್ತೆಯ

ಸನಿಹದಲ್ಲೇ ಇರುವ ಶಾಮನೂರು ಪ್ಯಾಲೇಸ್ ಗ್ರೌಂಡ್ನಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮ ನಡೆಯುತ್ತಿದೆ.

ಕಾಂಗ್ರೆಸ್ ಮುಖಂಡರಾದ ವೈ.ಹೆಚ್.ನಾಗರಾಜ್, ಡಾ.ಶ್ರೀನಿವಾಸ್ ಕರಿಯಣ್ಣ ದಾವಣಗೆರೆಯತ್ತ ತೆರಳಿಲಿರುವ ಕೆಎಸ್ಆರ್ಟಿಸಿ ಬಸ್ಗಳಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಯಾಣ ಸುಖಕರವಾಗಲಿ ಎಂದು ಬೇಡಿಕೊಂಡರು. ಅದರಂತೆ ವಿವಿಧ ಬಡಾವಣೆಗಳಿಂದ ಅಭಿಮಾನಿಗಳು,

ಕಾರ್ಯಕರ್ತರು, ಮಹಿಳಾ ಕಾರ್ಯಕರ್ತರು ತಮಗಾಗಿ ನಿಗಧಿಯಾಗಿದ್ದ ಬಸ್ಗಳಲ್ಲಿ ತೆರಳಿದರು. ಖಾಸಗಿ ವಾಹನಗಳಲ್ಲಿ ಕೂಡ ಸಾಕಷ್ಟು ಜನರು ಹೊರಟಿದ್ದು, ಕಂಡುಬಂದಿತು.
ದೇವಸ್ಥಾನ ದರ್ಗಾಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ
ದಾವಣಗೆರೆ, ಆ.೦೩:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ೭೫ನೇ ಜನ್ಮ ದಿನದ ಅಂಗವಾಗಿ ದಾವಣಗೆರೆಯ ಹೊರ ವಲಯದ ಎಸ್.ಎಸ್. ಪ್ಯಾಲೇಸ್ ಮೈದಾನದಲ್ಲಿ ಆಯೋಜಿಸಿರುವ ಅಮೃತ ಮಹೋತ್ಸವ ಕಾರ್ಯಕ್ರಮ ಪ್ರಾರಂಭದ ಮುನ್ನ ಸಿದ್ದರಾಮಯ್ಯ ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನ ಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಸಹಸ್ರಾರು ಜನರ ನಡುವೆ ದೇವಸ್ಥಾನ ಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರನ್ನು ದೇವಸ್ಥಾ ನದ ಧರ್ಮದರ್ಶಿ ಮಂಡಳಿ ಪದಾಧಿಕಾರಿಗಳು, ಮುಖ್ಯ ಅರ್ಚಕರು ಸ್ವಾಗತಿಸಿದರು. ಸಿದ್ದರಾಮಯ್ಯ ಅವರು ವಿಶೇಷ ಪೂಜೆಯಲ್ಲಿ ಭಾಗವಹಿಸಿದರು. ಪೂಜೆಯ ನಂತರ ಅವರಿಗೆ ಶ್ರೀ ದುರ್ಗಾಂಬಿಕಾ ದೇವಿಯ ಭಾವಚಿತ್ರ, ಕಂಬಾಳಿ ನೀಡುವ ಮೂಲಕ ಸತ್ಕರಿಸಲಾಯಿತು.
ದಾವಣಗೆರೆ ದುರ್ಗಾಂಬಿಕಾ ದೇವಸ್ಥಾನ ದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ತೆರೆದ ವಾಹನದಲ್ಲಿ ಕಾರ್ಯಕ್ರಮ ನಢಯುವ ಎಸ್.ಎಸ್. ಶಾಮನೂರು ಪ್ಯಾಲೇಸ್ ಮೈದಾನಕ್ಕೆ ತೆರಳಿದರು.