ಸಾಗರ,
ತಾಲೂಕಿನ ಬೊಮ್ಮತ್ತಿಯಲ್ಲಿನ ಕೂಲಿ ಕಾರ್ಮಿಕರ ಮನೆಯೊಂದರಲ್ಲಿ 70 ಸಾವಿರ ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳ ಕಳ್ಳತನ ಮಾಡಲಾಗಿದ್ದು, ಈ ಸಂಬಂಧ ಶನಿವಾರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೊಮ್ಮತ್ತಿಯ ರಾಮಪ್ಪ ಅವರ ಮನೆಯಲ್ಲಿ ಕಳ್ಳತನವಾಗಿದ್ದು, ಬೀರುವಿನಲ್ಲಿ ಪರ್ಸ್ ಒಳಗೆ ಇಡಲಾಗಿದ್ದ 12 ಗ್ರಾಂ ತೂಕದ ೪ ಜೊತೆ ಬಂಗಾರದ ಓಲೆ, 10 ಗ್ರಾಂ ತೂಕದ

2 ಜೊತೆ ಬೆಳ್ಳಿಯ ಗೆಜ್ಜೆಗಳನ್ನು ಕಳ್ಳತನ ಮಾಡಲಾಗಿದೆ. ರಾಮಪ್ಪ, ಪತ್ನಿ ಮತ್ತು ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರ ಕೂಲಿ ಕೆಲಸಕ್ಕೆ ತೆರಳಿದ ಸಂದರ್ಭದಲ್ಲಿ ಈ ಕಳ್ಳತನ ನಡೆದಿದೆ.


ಮನೆಯಲ್ಲಿ ಗುಪ್ತವಾಗಿ ಇಡುತ್ತಿದ್ದ ಬೀಗದ ಕೀಯನ್ನೇ ಬಳಸಿ ಕಳ್ಳರು ಮನೆಯೊಳಗೆ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಪರಿಚಿತರಿರುವವರೇ ಕಳ್ಳತನದಲ್ಲಿ ಪಾಲ್ಗೊಂಡಿರಬಹುದು ಎಂದು ಶಂಕಿಸಲಾಗಿದೆ.

ರಾಮಪ್ಪ ಅವರ ಪುತ್ರಿ ಶೋಭಾ ದೂರು ನೀಡಿದ್ದಾರೆ.