ಸಾಗರ,
ಗಾಂಜಾ ಬೆಳೆಯುವ ರೈತನನ್ನು ಹಿಡಿದು ಕೇಸು ಹಾಕುವುದು, ಸ್ಥಳೀಯವಾಗಿ ಗಾಂಜಾ ಮಾರುವವನನ್ನು ಹಿಡಿದು ಪ್ರಕರಣ ದಾಖಲಿಸು ವುದು ನಡೆಯುತ್ತಿದೆ. ಇವುಗಳಿಂದ ಗಾಂಜಾ ಜಾಲಕ್ಕೆ ಏನೂ ಆಗುವುದಿಲ್ಲ. ಇದನ್ನು ಬೇರು ಸಮೇತ ತಾಲೂಕಿನಿಂದ ದೂರವಿಡಲು ಪೊಲೀಸ್ ಇಲಾಖೆ ಗಾಂಜಾ ತಯಾರಿಕೆಗೆ ಮೂಲಗಳನ್ನು ಬೇಧಿಸಬೇಕು ಎಂದು ಶಾಸಕ, ಎಂಎಸ್ ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ಸೂಚನೆ ನೀಡಿದರು.


ಇಲ್ಲಿನ ಸಾಮರ್ಥ್ಯ ಸೌಧದಲ್ಲಿ ಸೋಮವಾರ ಕರೆಯಲಾಗಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಣದ ಆಸೆಗೆ ಬಡಪಾಯಿ ರೈತ ಕಚ್ಚಾ ಗಾಂಜಾ ವನ್ನು ಬೆಳೆದು ಮಾರುತ್ತಾನೆ. ಸಿದ್ಧ ಗಾಂಜಾವನ್ನು ಇಲ್ಲಿ ಯಾರೋ ವ್ಯಾಪಾರ ಮಾಡುತ್ತಾರೆ. ಇವರ ಮೇಲೆ ಕೇಸ್ ಹಾಕಿದರೂ ಆ ಗಾಂಜಾ ಜಾಲದ ಪ್ರಮುಖ ಬೇರೆಯವರನ್ನು ಹಿಡಿದು ವ್ಯಾಪಾರ ಮುಂದುವರೆಸುತ್ತಾನೆ. ಅದರ ಬದಲು ಸಮಗ್ರವಾದ ತನಿಖೆ ನಡೆಸಿ ಗಾಂಜಾ ಜಾಲದ ಬೇರುಗಳನ್ನು ಕತ್ತರಿಸಿ ಎಂದರು.


ಶರಾವತಿ ಹಿನ್ನೀರಿನ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಈಗ ೪ ಅಂಬುಲೆನ್ಸ್ ಇದೆ. ೧೦೮ ಸೇವೆ ಇಲ್ಲವೆನ್ನುವ ಕಾರಣಕ್ಕೆ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ನಡೆಯುತ್ತಿದ್ದು, ತಾಲೂಕು ಆರೋಗ್ಯಾಧಿಕಾರಿ ಸ್ಥಳೀಯರಿಗೆ ಸರಿಯಾದ ಮಾಹಿತಿ ತಲುಪಿಸುವ ಕೆಲಸ ಮಾಡುತ್ತಿಲ್ಲ. ಕಳೆದ ಒಂದು ತಿಂಗಳಿನಿಂದ ೧೦೮ ಸೇವೆ ಇಲ್ಲ ಎನ್ನುವುದರ ಮೂಲಕ ಸರ್ಕಾರಕ್ಕೆ ಕೆಟ್ಟ ಹೆಸರು ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ರಸ್ತೆ, ವಿದ್ಯುತ್ ಸೌಲಭ್ಯ ಕಲ್ಪಿಸುವ ಯೋಜನೆ ಗಳಿಗೆ ಅರಣ್ಯ ಇಲಾಖೆ ಅಡ್ಡಿಪಡಿಸಬಾರದು. ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕೆಡಿಪಿ ನಿರ್ಣಯ ತೆಗೆದುಕೊಳ್ಳಬೇಕು ಎಂದು ಹಾಲಪ್ಪ ಸೂಚಿಸಿದರು.
ಶಬ್ದದಿಂದ ನಿಂದಿಸಿದ್ದಾರೆ. ವಾಸ್ತವವಾಗಿ ಅವರು ರಸ್ತೆಗೆ ಅಡ್ಡವಾಗಿ ಬಿದ್ದಿದ್ದ ಮರ

ಕಡಿದಿದ್ದು ಬಿಟ್ಟರೆ ಬೇರೆ ತಪ್ಪು ಮಾಡಿರಲಿಲ್ಲ. ಪ್ರಕರಣವನ್ನು ಅರಣ್ಯ ಇಲಾಖೆಯಿಂದ ತನಿಖೆ ಮಾಡಿಸಿದರೆ ಅಮಾಯಕರಿಗೆ ನ್ಯಾಯ ಸಿಗುವುದಿಲ್ಲ. ಬೇರೆ ತನಿಖಾ ಸಂಸ್ಥೆ ಮೂಲಕ ಪ್ರಕರಣದ ತನಿಖೆ ನಡೆಸಿ ಎಂದು ಒತ್ತಾಯಿಸಿದರು.


ತಾಲೂಕು ಪಂಚಾಯ್ತಿ ಆಡಳಿತಾಧಿಕಾರಿ ಮಲ್ಲಪ್ಪ ಕೆ. ತೊದಲಬಾವಿ, ತಾಪಂ ಕಾರ್ಯನಿರ್ವಾಹಣಾಧಿಕಾರಿ ಪುಷ್ಪಾ ಎಂ. ಕಮಾರ್ ಮತ್ತಿತರರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!